ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡದಿರುವುದು ಯಾವ ರೀತಿಯ ಸ್ಟ್ರಾಟರ್ಜಿ!

ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲೂ ಪ್ರತಿಭಾನ್ವಿತ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡದೇ ಇರುವುದರ ಕುರಿತಾಗಿ ಅಭಿಮಾನಿಗಳು ಕೆಂಡಾಮಂಡಲಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಹಾಗೂ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಭಮನ್ ಗಿಲ್, ಸಂಜು ಸ್ಯಾಮ್ಸನ್ ಮತ್ತು ಉಮ್ರಾನ್ ಮಲಿಕ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡದೇ ಇರುವುದು ಯಾವ ರೀತಿಯಾದಂತಹ ಸ್ಟ್ರಾಟರ್ಜಿ ಎಂದು ನೆಟ್ಟಿಗರು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ವಿರುದ್ಧ ಹರಿಹಾಯ್ದಿದ್ದಾರೆ.
ನೇಪಿಯರ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಶುಭಮನ್ ಗಿಲ್, ಸಂಜು ಸ್ಯಾಮ್ಸನ್ ಹಾಗೂ ಉಮ್ರಾನ್ ಮಲಿಕ್, ಕುಲ್‌ದೀಪ್ ಯಾದವ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಬಹುದು ಎಂದು ಅಭಿಮಾನಿಗಳು ಭಾವಿಸಿದ್ದರು. ಆದ್ರೆ ಭಾರತದ ತಂಡದಲ್ಲಿ ಕೇವಲ ಒಂದು ಬದಲಾವಣೆ ಕಂಡುಬಂದಿದ್ದು, ವಾಷಿಂಗ್ಟನ್ ಸುಂದರ್ ಬದಲಿಗೆ ಹರ್ಷಲ್ ಪಟೇಲ್‌ಗೆ ಅವಕಾಶ ಕೊಡಲಾಯಿತು.

ಟೀಂ ಇಂಡಿಯಾ ಸೆಲೆಕ್ಷನ್ ಕುರಿತು ಅಭಿಮಾನಿಗಳ ಪ್ರಶ್ನೆ
ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಆಯ್ಕೆ ಕುರಿತಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ. ಇದಾದ ಬಳಿಕ ಹಾರ್ದಿಕ್ ಪಾಂಡ್ಯ ಈ ಕುರಿತಾಗಿ ಮಾತನಾಡಿದ್ದು, ನಾಯಕ ಪಾಂಡ್ಯ ಮಾತಿನಿಂದ ಅಭಿಮಾನಿಗಳು ಸಮಾಧಾನಗೊಂಡಿಲ್ಲ. ಪಾಂಡ್ಯ ಹೇಳುವ ಪ್ರಕಾರ ಇದು ಸ್ಟ್ರಾಟರ್ಜಿ ಕಾರಣದಿಂದ ತೆಗೆದುಕೊಂಡ ನಿರ್ಧಾರ ಎಂದಿದ್ದರು. ಆದ್ರೆ ಅಭಿಮಾನಿಗಳು ಚುಟುಕು ಕ್ರಿಕೆಟ್‌ನಲ್ಲಿ ಭಾರತದ ಆಯ್ಕೆ ಕುರಿತಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಸೂರ್ಯಕುಮಾರ್ ವಿಚಾರದಲ್ಲಿ ಮಾಡಿದ ತಪ್ಪನ್ನೇ ಸಂಜು ಸ್ಯಾಮ್ಸನ್ ವಿಚಾರದಲ್ಲಿ ಮಾಡುತ್ತಿದೆಯಾ ಬಿಸಿಸಿಐ?
ಇದು ಯಾವ ಸೀಮೆ ಸ್ಟ್ರಾಟರ್ಜಿ ಎಂದು ಕಿಡಿಕಾರಿದ ನೆಟ್ಟಿಗರು
ಸ್ಟ್ರಾಟರ್ಜಿ ಎಂದರೇನು? ಟಾಪ್ ಆರ್ಡರ್ ವೈಫಲ್ಯಗೊಳ್ಳುತ್ತಿದೆ, ರೋಹಿತ್ ಮತ್ತು ರಾಹುಲ್ ಇಬ್ಬರು ಕೂಡ ವಿಶ್ವಕಪ್‌ನಲ್ಲಿ ವಿಫಲಗೊಂಡಿದ್ದಾರೆ. ಅದೇ ರೀತಿಯಲ್ಲಿ ಇವರಿಬ್ಬರು ಸಹ ಮುಗ್ಗರಿಸಿದ್ದಾರೆ (ಇಶಾನ್ ಕಿಶನ್ ಮತ್ತು ರಿಷಭ್ ಪಂತ್). ಪಾಂಡ್ಯ ಕೂಡ ಆ ಪರಂಪರೆ ಮುಂದುವರಿಸುತ್ತಿದ್ದಾರೆ ಎಂದಿದ್ದಾರೆ.
ಕಾಲು ಮುರಿದುಕೊಂಡು 2 ದಿನ ನಿದ್ರೆ ಮಾಡಲಿಲ್ವಂತೆ ಗ್ಲೆನ್ ಮ್ಯಾಕ್ಸ್‌ವೆಲ್: ಕಾರಣ ತಿಳಿಸಿದ ಆಸಿಸ್ ಕ್ರಿಕೆಟಿಗ
ಒಳ್ಳೆಯ ಆಟಗಾರರನ್ನು ಬೆಂಚ್‌ನಲ್ಲಿ ಕೂರಿಸುವುದು ಯಾವ ರೀತಿಯ ಸ್ಟ್ರಾಟರ್ಜಿ
ಕೆಟ್ಟದಾಗಿ ಆಡುವ ಆಟಗಾರರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಿಸುವುದು ಮತ್ತು ಅರ್ಹ ಆಟಗಾರನಿಗೆ ಅವಕಾಶ ನೀಡದೇ ಇರುವುದು, ಯಾವ ರೀತಿಯ ಅದ್ಭುತ ಸ್ಟ್ರಾಟರ್ಜಿ ಎಂದು ನೆಟ್ಟಿಗರು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಕಾಲೆಳೆದಿದ್ದಾರೆ.
ಇದು ಅಷ್ಟೊಂದು ಮಹತ್ವದ ಸರಣಿ ಆಗಿರ್ಲಿಲ್ಲ. ಸಂಜು ಸ್ಯಾಮ್ಸನ್‌ಗೆ ಅವಕಾಶ ಕೊಡಬೇಕಿತ್ತು. ಶ್ರೇಯಸ್ ಅಯ್ಯರ್‌ನನ್ನು ಟಿ20ಗೆ ಪರಿಗಣಿಸುವುದು ಮೂರ್ಖತನ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications