ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂರ್ಯಕುಮಾರ್ ವಿಚಾರದಲ್ಲಿ ಮಾಡಿದ ತಪ್ಪನ್ನೇ ಸಂಜು ಸ್ಯಾಮ್ಸನ್ ವಿಚಾರದಲ್ಲಿ ಮಾಡುತ್ತಿದೆಯಾ ಬಿಸಿಸಿಐ?

Why Team India Hesitate To Give Chance To Sanju Samson And Many Players

ಸಂಜು ಸ್ಯಾಮ್ಸನ್ ಸದ್ಯ ಭಾರತೀಯ ಕ್ರಿಕೆಟ್‌ ವಲಯದಲ್ಲಿ ಸಾಕಷ್ಟು ಚರ್ಚೆಯಲ್ಲಿರುವ ಆಟಗಾರ. ಪ್ರತಿಭೆಯಿದ್ದರೂ, ಅವಕಾಶಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿರುವ ಈ ಪ್ರತಿಭಾವಂತ ಆಟಗಾರನ ಬಗ್ಗೆ ಆಯ್ಕೆದಾರರಿಗೆ ಅದ್ಯಾಕಿಷ್ಟು ನಿರಾಸಕ್ತಿ ಎನ್ನುವುದು ತಿಳಿಯುತ್ತಿಲ್ಲ.

ಸೂರ್ಯಕುಮಾರ್ ಯಾದವ್‌ಗೆ ಈಗ 32 ವರ್ಷ, ಆದರೆ ಇದೇ ಸೂರ್ಯಕುಮಾರ್ ಯಾದವ್ ಕ್ರಿಕೆಟ್ ಆಡಲು ಆರಂಭಿಸಿದ್ದು 2010ರಲ್ಲಿ ಬರೋಬ್ಬರಿ 11 ವರ್ಷಗಳ ಕಾಲ ಆತ ಪ್ರತಿಭೆಯಿದ್ದರೂ ಭಾರತ ತಂಡಕ್ಕೆ ಆಯ್ಕೆಯಾಗಲಿಲ್ಲ. ಐಪಿಎಲ್‌ನಲ್ಲಿ, ರಣಜಿ ಕ್ರಿಕೆಟ್‌ನಲ್ಲಿ, ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಪದೇ ಪದೇ ತನ್ನ ಸಾಮರ್ಥ್ಯ ಸಾಬೀತುಪಡಿಸಿದರು ಆತನ ಬಗ್ಗೆ ಬಿಸಿಸಿಐ ಆಯ್ಕೆದಾರರು ಮಾತ್ರ ಅಸಡ್ಡೆ ತೋರಿಸಿದರು.

ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಕಳಪೆ ಪ್ರದರ್ಶನ: ನಾಯಕತ್ವ ತೊರೆದ ನಿಕೋಲಸ್ ಪೂರನ್ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಕಳಪೆ ಪ್ರದರ್ಶನ: ನಾಯಕತ್ವ ತೊರೆದ ನಿಕೋಲಸ್ ಪೂರನ್

ಅಂತಿಮವಾಗಿ 2021ರಲ್ಲಿ ಸೂರ್ಯಕುಮಾರ್ ಯಾದವ್ ಭಾರತ ತಂಡಕ್ಕೆ ಆಯ್ಕೆಯಾದರು. ನಂತರ ನಡೆದದ್ದು ಮಾತ್ರ ಇತಿಹಾಸ, ಕೇವಲ ಒಂದೂವರೆ ವರ್ಷದಲ್ಲಿ ಆಡಿದ 39 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ ಆತ ಹಲವು ದಾಖಲೆಗಳನ್ನು ಬರೆದ, ದಿಗ್ಗಜರ ದಾಖಲೆಗಳನ್ನೇ ಪುಡಿಗಟ್ಟಿದ.

ಇಂದು ಸೂರ್ಯಕುಮಾರ್ ಯಾದವ್ ಇಲ್ಲದಿದ್ದರೆ, ಭಾರತ ಅದೆಷ್ಟು ಟಿ20 ಪಂದ್ಯಗಳಲ್ಲಿ ಸೋಲನುಭವಿಸಬೇಕಿತ್ತೋ, 130-140 ರನ್ ಗಳಿಸುವ ಪಂದ್ಯಗಳಲ್ಲಿ ಸೂರ್ಯಕುಮಾರ್ ತಮ್ಮ ಉತ್ತಮ ಬ್ಯಾಟಿಂಗ್ ಮೂಲಕ 170-180 ರನ್ ಗಳಿಸಲು ಸಹಾಯ ಮಾಡುತ್ತಿದ್ದಾರೆ. ಸೂರ್ಯಕುಮಾರ್ ಹಲವು ವರ್ಷಗಳ ಮುಂಚೆಯೇ ಭಾರತ ತಂಡಕ್ಕೆ ಆಯ್ಕೆಯಾಗಬೇಕಿತ್ತು ಎಂದು ಹಲವು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಕೂಡ ಅಂದುಕೊಳ್ಳುತ್ತಿದ್ದಾರೆ. ಈಗ ಇದೇ ರೀತಿ ಸಂಜು ಸ್ಯಾಮ್ಸನ್ ವಿಚಾರದಲ್ಲಿ ನಡೆದುಕೊಳ್ಳುತ್ತಿದೆ ಬಿಸಿಸಿಐ.

ಸಂಜು ಸ್ಯಾಮ್ಸನ್ ವಿಚಾರದಲ್ಲೂ ನಿರ್ಲಕ್ಷ್ಯ

ಸಂಜು ಸ್ಯಾಮ್ಸನ್ ವಿಚಾರದಲ್ಲೂ ನಿರ್ಲಕ್ಷ್ಯ

ಸಂಜು ಸ್ಯಾಮ್ಸನ್ ಕೇರಳದ ಪ್ರತಿಭಾವಂತ ಕ್ರಿಕೆಟಿಗ, ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಕೂಡ ಆಗಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡಿದರೂ ಇಂದಿಗೂ ಭಾರತ ತಂಡದಲ್ಲಿ ಅವಕಾಶ ಪಡೆಯಲು ಪರದಾಡುತ್ತಿದ್ದಾರೆ.

2015ರ ಜುಲೈ 19 ರಂದು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತ ತಂಡದ ಪರವಾಗಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಂಜುಸ್ಯಾಮ್ಸನ್ ಕಳೆದ 7 ವರ್ಷಗಳಲ್ಲಿ ಭಾರತಕ್ಕಾಗಿ ಆಡಿರುವುದು ಕೇವಲ 16 ಟಿ20 ಪಂದ್ಯಗಳು ಮಾತ್ರ. ಇದು, ಆಯ್ಕೆದಾರರು ಆತನನ್ನು ಹೇಗೆ ಕಡಿಗಣಿಸಿದ್ದಾರೆ ಎನ್ನುವುದಕ್ಕೆ ನಿದರ್ಶನ.

IPL 2023: ಈ ಆಟಗಾರನಿಗೆ ನಾಯಕತ್ವ ನೀಡಲು ಮುಂದಾದ ಸನ್‌ರೈಸರ್ಸ್ ಹೈದರಾಬಾದ್

ಪ್ರತಿಭೆಯಿದ್ದರೂ ಕೂಡ ಅವಕಾಶವಿಲ್ಲ

ಪ್ರತಿಭೆಯಿದ್ದರೂ ಕೂಡ ಅವಕಾಶವಿಲ್ಲ

2015ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಂಜು ಸ್ಯಾಮ್ಸನ್‌ ಇದುವರೆಗೂ 15 ಅಂತಾರಾಷ್ಟ್ರೀಯ ಟಿ20 ಇನ್ನಿಂಗ್ಸ್‌ಗಳಲ್ಲಿ 296 ರನ್ ಗಳಿಸಿದ್ದಾರೆ. 77 ಅವರ ಅತ್ಯಧಿಕ ಸ್ಕೋರ್ ಆಗಿದ್ದು, 135.16 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

2017ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಿಷಬ್ ಪಂತ್ 65 ಪಂದ್ಯಗಳಲ್ಲಿ ಭಾರತಕ್ಕಾಗಿ ಆಡುವ ಅವಕಾಶ ಪಡೆದಿದ್ದಾರೆ. 55 ಇನ್ನಿಂಗ್ಸ್‌ಗಳಲ್ಲಿ ಪಂತ್ 22.27 ಸರಾಸರಿಯಲ್ಲಿ ಗಳಿಸಿರುವುದು ಕೇವಲ 976 ರನ್ ಮಾತ್ರ. 125.94 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇಬ್ಬರೂ ಕೂಡ ಪ್ರತಿಭಾವಂತ ಆಟಗಾರರೆ ಆದರೆ, ಪಂತ್‌ಗೆ ಸಿಕ್ಕಷ್ಟು ಅವಕಾಶ ಸಂಜು ಸ್ಯಾಮ್ಸನ್‌ಗೆ ಯಾಕಿಲ್ಲ ಎನ್ನುವುದೇ ಮುಖ್ಯ ಪ್ರಶ್ನೆಯಾಗಿದೆ.

ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯದ ಸಂಜು ಸ್ಯಾಮ್ಸನ್ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ, ಇಲ್ಲೂ ಕೂಡ ಸ್ಯಾಮ್ಸನ್ ಬದಲಿಗೆ ಪಂತ್‌ಗೆ ಮಣೆ ಹಾಕಲಾಗಿದೆ. ಸಿಕ್ಕ ಎಲ್ಲಾ ಅವಕಾಶಗಳನ್ನು ಪಂತ್ ಪದೇ ಪದೇ ಕೈ ಚೆಲ್ಲುತ್ತಿದ್ದಾರೆ. ಸಂಜು ಸ್ಯಾಮ್ಸನ್‌ಗೆ ಅವಕಾಶ ಕೊಡಿ ಎಂದು ಹಲವು ಮಾಜಿ ಕ್ರಿಕೆಟಿಗರು ಕೂಡ ಒತ್ತಾಯ ಮಾಡುತ್ತಿದ್ದಾರೆ.

ಹಲವು ಪ್ರತಿಭೆಗಳಿಗೆ ಇಲ್ಲ ಅವಕಾಶ

ಹಲವು ಪ್ರತಿಭೆಗಳಿಗೆ ಇಲ್ಲ ಅವಕಾಶ

ಐಪಿಎಲ್‌, ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಅನೇಕ ಪ್ರತಿಭೆಗಳನ್ನು ರಾಷ್ಟ್ರೀಯ ಆಯ್ಕೆದಾರರು ನಿರ್ಲಕ್ಷಿಸುತ್ತಲೇ ಬಂದಿದ್ದಾರೆ. ಪೃಥ್ವಿ ಶಾ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮವಾಗಿ ಆಡಿದ್ದರು, ಭಾರತ ತಂಡಕ್ಕೆ ಸ್ಫೋಟಕ ಆರಂಭ ಒದಗಿಸುವ ಸಾಮರ್ಥ್ಯ ಇದ್ದರೂ ಇಂದಿಗೂ ಅವರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿಲ್ಲ.

ಉಮ್ರಾನ್ ಮಲಿಕ್‌ 150 ಕಿಲೋ ಮೀಟರ್ ಗಿಂತ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಇರುವ ಬೌಲರ್ ನಾಲ್ಕೈದು ಪಂದ್ಯಗಳಲ್ಲಿ ಅವರು ಅವಕಾಶ ಪಡೆದರು, ನಂತರ ಅವರನ್ನು ನಿರ್ಲಕ್ಷಿಸಲಾಗಿದೆ, ಈಗ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾದರೂ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ.

ಟಿ20 ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಸೋತ ನಂತರ ಬಿಸಿಸಿಐ ಆಯ್ಕೆದಾರರ ಸಮಿತಿಯನ್ನೇ ವಜಾಗೊಳಿಸಿದೆ. ಆಯ್ಕೆ ಸಮಿತಿಗೆ ನೂತನ ಸದಸ್ಯರು ಮತ್ತು ಅಧ್ಯಕ್ಷರ ನೇಮಕವಾಗಲಿದ್ದು, ತಂಡದಲ್ಲಿ ಹಲವು ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ.

Story first published: Tuesday, November 22, 2022, 13:26 [IST]
Other articles published on Nov 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X