Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವದ ಬೆಸ್ಟ್ ಕಾರ್‌ ಅನ್ನು ನೀವು ಗ್ಯಾರೇಜ್‌ನಲ್ಲಿ ಇಟ್ಟಿದ್ದೀರಿ: ಉಮ್ರಾನ್ ಮಲಿಕ್ ಆಯ್ಕೆ ಬೆಂಬಲಿಸಿದ ಬ್ರೆಟ್‌ ಲೀ

Brett lee

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಈಗಾಗಲೇ ಆಸ್ಟ್ರೇಲಿಯಾದಲ್ಲಿ ಬೀಡು ಬಿಟ್ಟಿದ್ದು, ಭರ್ಜರಿ ತಯಾರಿ ನಡೆಸುತ್ತಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ರನ್ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಶುಭಾರಂಭ ಮಾಡಿದೆ. ಇದಕ್ಕೂ ಮುನ್ನ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಜಯಿಸಿ ರೋಹಿತ್ ಬಳಗ ಕಾಂಗರೂ ನಾಡಿಗೆ ಕಾಲಿಟ್ಟಿತು.

15 ಸದಸ್ಯರನ್ನೊಳಗೊಂಡ ಸ್ಕ್ವಾಡ್‌ ಅನ್ನು ಬಿಸಿಸಿಐ ಹಿರಿಯ ಆಟಗಾರರ ಆಯ್ಕೆ ಸಮಿತಿಯು ಘೋಷಿಸಿದ ಬಳಿಕ ಇಬ್ಬರು ಪ್ರಮುಖ ಆಟಗಾರರು ತಂಡದಿಂದ ಹೊರಬಿದ್ದರು. ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಇಂಜ್ಯುರಿಯಿಂದ ತಂಡದಿಂದ ಹೊರಗುಳಿದಿದ್ದಾರೆ. ಹೀಗಿರುವಾಗ ಟೀಂ ಇಂಡಿಯಾ ಪರ ಉತ್ತಮ ಆಯ್ಕೆಗಳಿದ್ರೂ ನಿರ್ಲಕ್ಷ್ಯ ತೋರಿದೆ ಎಂದು ಆಸಿಸ್ ಮಾಜಿ ವೇಗಿ ಬ್ರೇಟ್‌ ಲೀ ಹೇಳಿದ್ದಾರೆ.

ಟೀಂ ಇಂಡಿಯಾ ಯುವ ವೇಗಿ ಕುರಿತು ಬ್ರೆಟ್ ಲೀ ಹೊಗಳಿಕೆ

ಟೀಂ ಇಂಡಿಯಾ ಯುವ ವೇಗಿ ಕುರಿತು ಬ್ರೆಟ್ ಲೀ ಹೊಗಳಿಕೆ

ಭಾರತ ಕಂಡಂತಹ ಅತ್ಯಂತ ವೇಗದ ಬೌಲರ್ ಆಗಿರುವ ಜಮ್ಮು ಮತ್ತು ಕಾಶ್ಮೀರದ ಎಕ್ಸ್‌ಪ್ರೆಸ್ ಉಮ್ರಾನ್ ಮಲ್ಲಿಕ್ ಕುರಿತಾಗಿ ಬ್ರೆಟ್ ಲೀ ಹೊಗಳಿಕೆಯ ಮಾತನಾಡಿದ್ದಾರೆ. 22 ವರ್ಷದ ಯುವ ವೇಗದ ಬೌಲರ್ ಆಸ್ಟ್ರೇಲಿಯಾಗೆ ನೆಟ್‌ ಬೌಲರ್‌ ಆಗಿ ತೆರಳಲಿದ್ದಾರೆ. ಇದಕ್ಕೂ ಮುನ್ನ ಅವರ ವೀಸಾ ಸಮಸ್ಯೆ ಬಗೆಹರಿಯಬೇಕಿದೆ.

ವೀಸಾ ಸಿಗದ ಹಿನ್ನಲೆಯಲ್ಲಿ ನೆಟ್‌ ಬೌಲರ್‌ಗಳಾದ ಉಮ್ರಾನ್ ಮಲ್ಲಿಕ್ ಮತ್ತು ಕುಲದೀಪ್ ಸೇನ್ ಕಾಂಗರೂ ನಾಡಿಗೆ ತೆರಳುವುದು ತಡವಾಗಿದೆ.

ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಮತ್ತೊಂದು ವಿಘ್ನ: ದೀಪಕ್ ಚಹಾರ್ ಕೂಡ ಔಟ್‌!

ಜಸ್ಪ್ರೀತ್ ಬುಮ್ರಾ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂದು ಪರಿಶೀಲನೆ

ಜಸ್ಪ್ರೀತ್ ಬುಮ್ರಾ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂದು ಪರಿಶೀಲನೆ

ಈಗಾಗಲೇ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂದು ಬಿಸಿಸಿಐ ಹಿರಿಯ ಆಟಗಾರರ ಆಯ್ಕೆ ಸಮಿತಿಯು ಇನ್ನೂ ಅಂತಿಮ ತೀರ್ಮಾನ ಮಾಡಿಲ್ಲ. ಇದ್ರ ಜೊತೆಗೆ ಸ್ಟ್ಯಾಂಡ್ ಬೈ ಬೌಲರ್ ಆಗಿದ್ದ ದೀಪಕ್ ಚಹಾರ್ ಕೂಡ ಇಡೀ ವಿಶ್ವಕಪ್‌ನಿಂದಲೇ ಹೊರಬಿದ್ದಿದ್ದಾರೆ. ಜೊತೆಗೆ ನೆಟ್‌ ಬೌಲರ್‌ಗಳು ಕೂಡ ವೀಸಾ ಸಿಗದೆ ಕಾಯುತ್ತಿದ್ದಾರೆ.

ಆದ್ರೀಗ ಬುಮ್ರಾ ಜಾಗಕ್ಕೆ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್‌ ಆಸ್ಟ್ರೇಲಿಯಾ ಫ್ಲೈಟ್ ಹತ್ತಲಿದ್ದಾರೆ ಎಂದು ವರದಿಯಾಗಿದೆ. ಇದ್ರ ಬೆನ್ನಲ್ಲೇ ಬ್ರೆಟ್‌ ಲೀ ಉಮ್ರಾನ್ ಮಲ್ಲಿಕ್ ಅನ್ನು ಮುಖ್ಯ ಸ್ಕ್ವಾಡ್‌ಗೆ ಪರಿಗಣಿಸದೇ ನಿರ್ಲಕ್ಷಿಸಿರುವುದರ ಕುರಿತು ಕಾಮೆಂಟ್ ಮಾಡಿದ್ದಾರೆ.

ಸಂಜು ಸ್ಯಾಮ್ಸನ್ 2.0: ಇನ್ನೇನಿದ್ರೂ ಆತನದ್ದೇ ಹವಾ.. ಎಂದ ರವಿಚಂದ್ರನ್ ಅಶ್ವಿನ್

ಉಮ್ರಾನ್ ಮಲ್ಲಿಕ್ ಅನ್ನು ವಿಶ್ವದ ಬೆಸ್ಟ್ ಕಾರಿಗೆ ಹೋಲಿಸಿದ ಬ್ರೆಟ್‌ ಲೀ

ಉಮ್ರಾನ್ ಮಲ್ಲಿಕ್ ಅನ್ನು ವಿಶ್ವದ ಬೆಸ್ಟ್ ಕಾರಿಗೆ ಹೋಲಿಸಿದ ಬ್ರೆಟ್‌ ಲೀ

ಆಸಿಸ್ ಮಾಜಿ ವೇಗಿ ಬ್ರೆಟ್ ಲೀ ಉಮ್ರಾನ್ ಮಲ್ಲಿಕ್ ಅನ್ನು ವಿಶ್ವದ ಬೆಸ್ಟ್ ಕಾರಿಗೆ ಹೋಲಿಸಿದ್ದು, ಅವರ ವೇಗವು ಮತ್ತು ಕಾರಿನ ವೇಗದಂತೆ ನುಗ್ಗುತ್ತದೆ ಎಂದು ಬ್ರೆಟ್‌ ಲೀ ಹೇಳಿದ್ದು, ಇಂತಹ ಕಾರ್‌ ಅನ್ನು ಗ್ಯಾರೇಟ್‌ನಲ್ಲಿ ನಿಲ್ಲಿಸಿದ್ದೀರಿ ಎಂದು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಅನ್ನು ಕುಟುಕಿದ್ದಾರೆ.

ಉಮ್ರಾನ್ ಆಯ್ಕೆ ಕುರಿತು ಬೆಂಬಲಿಸಿದ ಬ್ರೆಟ್‌ ಲೀ ಆತ ಟೀಂ ಇಂಡಿಯಾದ 15 ಸದಸ್ಯರ ಸ್ಕ್ವಾಡ್‌ನಲ್ಲಿ ಇರಬೇಕಿತ್ತು. ಏಕೆಂದರೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಈತ ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಅದ್ಭುತ ಬೌಲಿಂಗ್ ಮಾಡಬಲ್ಲರು ಎಂದಿದ್ದಾರೆ.

"ಉಮ್ರಾನ್ ಮಲಿಕ್ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಅಂದರೆ ನಿಮ್ಮ ಬಳಿ ವಿಶ್ವದ ಅತ್ಯುತ್ತಮ ಕಾರು ಇರುವಾಗ ಮತ್ತು ಅದನ್ನು ಗ್ಯಾರೇಜ್‌ನಲ್ಲಿ ಬಿಟ್ಟರೆ, ಆ ಕಾರನ್ನು ಹೊಂದಿದ್ದರೂ ಏನು ಪ್ರಯೋಜನ? ಉಮ್ರಾನ್ ಮಲಿಕ್ ಅವರನ್ನು ವಿಶ್ವಕಪ್‌ಗಾಗಿ ಭಾರತೀಯ ತಂಡದಲ್ಲಿ ಆಯ್ಕೆ ಮಾಡಬೇಕಿತ್ತು." ಎಂದು ಬ್ರೆಟ್‌ ಲೀ ಖಲೀಜ್ ಟೈಮ್ಸ್‌ಗೆ ತಿಳಿಸಿದರು.

ಆತ ಇನ್ನೂ ಯುವ ಬೌಲರ್ ಆಗಿರಬಹುದು, ಆದ್ರೂ ಆಸ್ಟ್ರೇಲಿಯಾಗೆ ಕರೆದೊಯ್ಯಿರಿ ಎಂದ ಲೀ

ಆತ ಇನ್ನೂ ಯುವ ಬೌಲರ್ ಆಗಿರಬಹುದು, ಆದ್ರೂ ಆಸ್ಟ್ರೇಲಿಯಾಗೆ ಕರೆದೊಯ್ಯಿರಿ ಎಂದ ಲೀ

ಉಮ್ರಾನ್ ಮಲ್ಲಿಕ್ ವಯಸ್ಸನ್ನು ಆಧರಿಸಿ, ಆತ ಇನ್ನೂ ಚಿಕ್ಕವನು ಎಂದು ಭಾರತದಲ್ಲೇ ಉಳಿಸಿದ್ರೆ ವ್ಯರ್ಥ ಎಂದು ಲೀ ಹೇಳಿದ್ದಾರೆ.

"ಹೌದು, ಅವನು ಚಿಕ್ಕವನು, ಹೌದು, ಅವನು ರಾ (ಕಚ್ಚಾ), ಆದರೆ ಅವನು 150 ಕಿಮೀ ವೇಗದಲ್ಲಿ ಬೌಲ್ ಮಾಡುತ್ತಾನೆ. ಆದ್ದರಿಂದ ಅವನನ್ನು ತಂಡದಲ್ಲಿ ಸೇರಿಸಿ, ಅವನನ್ನು ಆಸ್ಟ್ರೇಲಿಯಾಕ್ಕೆ ಕರೆದೊಯ್ಯಿರಿ, ಅಲ್ಲಿ ಚೆಂಡು ಪುಟಿಯುತ್ತದೆ. ನಿಮ್ಮ ತಂಡದಲ್ಲಿ ಒಬ್ಬ ಬೌಲರ್ 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವುದು ಮತ್ತು 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ವ್ಯಕ್ತಿಗಿಂತ ವಿಭಿನ್ನವಾಗಿರುತ್ತದೆ'' ಎಂದು ಲೀ ತನ್ನ ಮಾತಿಗೆ ಸೇರಿಸಿದ್ದಾರೆ.

ಉಮ್ರಾನ್ ಮಲಿಕ್ ಐಪಿಎಲ್ 15ನೇ ಸೀಸನ್‌ನಲ್ಲಿ 20.18ರ ಸರಾಸರಿಯಲ್ಲಿ 22 ವಿಕೆಟ್‌ಗಳನ್ನ ಕಬಳಿಸಿದರು. ಆದ್ರೆ ಆತ ಸಾಧಾರಣ ಎಕಾನಮಿ ದರವನ್ನು ಹೊಂದಿದ್ದು , ಬೌಲಿಂಗ್‌ನಲ್ಲಿ ಇನ್ನಷ್ಟು ಸುಧಾರಣೆ ಕಾಣಬೇಕಿದೆ.

Story first published: Wednesday, October 12, 2022, 19:25 [IST]
Other articles published on Oct 12, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+