For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಸೇರಿದ ಕನ್ನಡಿಗ ಲವನೀತ್ ಸಿಸೋಡಿಯಾ: 50 ಓವರ್‌ ಪಂದ್ಯದಲ್ಲಿ ತ್ರಿಶತಕ ಸಿಡಿಸಿದ್ದ ಪ್ಲೇಯರ್‌

Luvnith sisodia

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ನ ಹರಾಜು ಪ್ರಕ್ರಿಯೆಯಲ್ಲಿ ಅನೇಕ ಯುವ ಆಟಗಾರರು ಹೆಚ್ಚಿನ ಮೊತ್ತಕ್ಕೆ ಬಿಡ್ ಆದರು. ಕೇವಲ ಅಂತರಾಷ್ಟ್ರೀಯ ಆಟಗಾರರಷ್ಟೇ ಅಲ್ಲದೆ ಅವೇಶ್‌ ಖಾನ್‌ನಂತಹ ಅನ್‌ಕ್ಯಾಪ್ಡ್‌ ಪ್ಲೇಯರ್‌ ಕೂಡ 10 ಕೋಟಿ ರೂಪಾಯಿ ಬಾಚಿಕೊಂಡಿದ್ದಾನೆ. 10 ಕೋಟಿ ರೂಪಾಯಿ ಪಡೆಯುವುದಷ್ಟೇ ಅಲ್ಲದೆ ಅತಿ ಹೆಚ್ಚು ಮೊತ್ತ ಪಡೆದ ಅನ್‌ಕ್ಯಾಪ್ಡ್ ಪ್ಲೇಯರ್ ಕೂಡ ಆಗಿದ್ದಾನೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಎರಡನೇ ದಿನದ ಹರಾಜು ಪ್ರಕ್ರಿಯೆಯಲ್ಲಿ ಯುವ ಆಟಗಾರರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದ್ರಲ್ಲೂ ಇಬ್ಬರು ಯುವ ಕನ್ನಡಿಗರನ್ನ ತಂಡಕ್ಕೆ ಸೇರಿಸಿಕೊಂಡಿರುವುದು ಅಭಿಮಾನಿಗಳಿಗೆ ಖುಷಿ ತರಿಸಿದೆ. ಇಬ್ಬರಲ್ಲಿ ಒಬ್ಬ ಅಂಡರ್-19 ವಿಶ್ವಕಪ್‌ಗೆ ಆಯ್ಕೆಯಾಗಿದ್ದ ಅನೀಶ್ವರ್ ಆದ್ರೆ, ಮತ್ತೊಬ್ಬ ಕರ್ನಾಟಕದ ಯುವ ಆಟಗಾರ ಲವನೀತ್ ಸುಜಿತ್ ಸಿಸೋಡಿಯಾ

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಪಾದಾರ್ಪಣೆ

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಪಾದಾರ್ಪಣೆ

25 ಫೆಬ್ರವರಿ 2019 ರಂದು 2018-19ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಲವನೀತ್ ಸಿಸೋಡಿಯಾ ಕರ್ನಾಟಕದ ಪರ ತಮ್ಮ ಮೊದಲ ಟಿ20 ಪಂದ್ಯವನ್ನು ಆಡಿದರು. ಏಳರಲ್ಲಿ ಮೂರು ಟಿ20 ಪಂದ್ಯಗಳಲ್ಲಿ ಬ್ಯಾಟಿಂಗ್ ಸಿಗಲಿಲ್ಲ. ಉಳಿದ ಪಂದ್ಯಗಳಲ್ಲಿ 5, 1, 38 ರನ್ ಸೇರಿ ಕೇವಲ 45 ರನ್ ಕಲೆಹಾಕಿದ ಲವನೀತ್ ಮತ್ತೆ ರಾಜ್ಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲಗೊಂಡಿದ್ದರು.

ಆದ್ರೆ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಬ್ಯಾನ್ ಆಗುವ ಮೊದಲು 2019ರ ಸೀಸನ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್ ಪರ ಮಿಂಚಿದ ಲವನೀತ್ ಉತ್ತಮ ಟಿ20 ಆಟಗಾರನಾಗಿ, ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿದ್ದರು.

2021ರಲ್ಲಿ ತ್ರಿಶತಕ ಸಿಡಿಸಿ ಗಮನ ಸೆಳೆದಿದ್ದ ಪ್ಲೇಯರ್

2021ರಲ್ಲಿ ತ್ರಿಶತಕ ಸಿಡಿಸಿ ಗಮನ ಸೆಳೆದಿದ್ದ ಪ್ಲೇಯರ್

ಲವನೀತ್ ಕಾರ್ಪೋರೇಟ್ ತಂಡಗಳ ನಡುವಿನ ಏಕದಿನ ಪಂದ್ಯವೊಂದರಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ರು. 129 ಎಸೆತಗಳಲ್ಲಿ ಬರೋಬ್ಬರಿ 26 ಸಿಕ್ಸರ್ ಸಿಡಿಸಿದ್ದ ಈತ 312 ರನ್ ಸಿಡಿಸುವ ಮೂಲಕ ಭಾರತ ಕ್ರಿಕೆಟ್ ಲೋಕ ಒಮ್ಮೆ ಈತನತ್ತ ತಿರುಗಿ ನೋಡುವಂತೆ ಮಾಡಿದ್ರು.

ಇಷ್ಟಲ್ಲದೆ ಬಿಸಿಸಿಐ ಅಂಡರ್-25 ಟ್ರೋಫಿಯ ಇತ್ತೀಚಿನ ಆವೃತ್ತಿಯಲ್ಲಿ ಈತ 230ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾನೆ.

ಐಪಿಎಲ್ 2022: RCB ಸೇರಿದ ಕರ್ನಾಟಕದ ಯುವ ಪ್ರತಿಭೆ ಅನೀಶ್ವರ್

ಆರ್‌ಸಿಬಿ ಪರ ಆಡುವ ಆಸೆ ವ್ಯಕ್ತಪಡಿಸಿದ್ದ ಸಿಸೋಡಿಯಾ

ಆರ್‌ಸಿಬಿ ಪರ ಆಡುವ ಆಸೆ ವ್ಯಕ್ತಪಡಿಸಿದ್ದ ಸಿಸೋಡಿಯಾ

ಸ್ಫೋಟಕ ಆಟಗಾರನಾಗಿ ಗುರುತಿಸಿಕೊಂಡಿದ್ದ ಲವನೀತ್ ಸಿಸೋಡಿಯಾ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಕ್ಕರೆ ಯಾವ ತಂಡದ ಪರ ಆಡಲು ಆಸೆ ಹೊಂದಿದ್ದೀಯಾ ಎಂದು ಕೇಳಿದ ಪ್ರಶ್ನೆಗೆ '' ನಾನು ಯಾವಾಗಲೂ ಆರ್‌ಸಿಬಿ ಫ್ಯಾನ್‌. ಇದು ತಂಡವಲ್ಲ ಆದರೆ ಒಂದು ಭಾವನೆ. ವಿರಾಟ್ ಕೊಹ್ಲಿ ಸುತ್ತಮುತ್ತ ಇರುವಾಗ ಮತ್ತು ಅವರ ಜೊತೆಗೆ ಇರುವ ಲೆಜೆಂಡ್‌ಗಳ ಜೊತೆ ಇರುವುದೇ ಅದ್ಭುತವಾಗಿದೆ. ನಾನು ದೊಡ್ಡ ಆರ್‌ಸಿಬಿ ಅಭಿಮಾನಿ ಮತ್ತು ಕರ್ನಾಟಕಕ್ಕೆ ಆಡುವಾಗ ಅದು ನನ್ನ ರಕ್ತದಲ್ಲಿ ಹರಿಯುತ್ತದೆ. ನಾನು ಆರ್‌ಸಿಬಿಯ ಭಾಗವಾಗಲು ಇಷ್ಟಪಡುತ್ತೇನೆ'' ಎಂದು ಲವನೀತ್ ಸಿಸೋಡಿಯಾ ತಮ್ಮ ಮನದಾಳದ ಮಾತನ್ನ ತಿಳಿಸಿದ್ದನು.

ಗುಜರಾತ್ ತಂಡ ಸೇರಿದ ಕರ್ನಾಟಕದ ಅಭಿನವ್ ಮನೋಹರ್ ಬಗ್ಗೆ ತಿಳಿದುಕೊಳ್ಳಿ

Virat ಫಾರ್ಮ್ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗರಂ ಆಗಿ Rohit ಕೊಟ್ಟ ಉತ್ತರ ಸಖತ್!! | Oneindia Kannada
ಬೆಂಗಳೂರಿನ ಯುವ ಪ್ರತಿಬೆ ಲವನೀತ್

ಬೆಂಗಳೂರಿನ ಯುವ ಪ್ರತಿಬೆ ಲವನೀತ್

ಜನವರಿ 15, 2000ರಲ್ಲಿ ಜನಿಸಿದ ಲವನೀತ್ ಚಿಕ್ಕಂದಿನಿಂದಲೇ ಕ್ರಿಕೆಟ್ ಕುರಿತು ಸಾಕಷ್ಟು ಆಸಕ್ತಿ ಬೆಳೆಸಿಕೊಂಡಿದ್ದರು. ಆತನ ಪೋಷಕರು ಕೂಡ ಮಗನ ಆಸೆಗೆ ಇಲ್ಲ ಎನ್ನದೆ ಪ್ರೋತ್ಸಾಹಿಸಿದರು. ಬೆಂಗಳೂರಿನ ಮೂಲದ ಲವನೀತ್ ವಿಕೆಟ್ ಕೀಪಿಂಗ್ ಜೊತೆಗೆ ಎಡಗೈ ಮಧ್ಯಮ ವೇಗಿ ಬೌಲರ್ ಕೂಡ ಆಗಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಆಗಿರುವ ಲವನೀತ್‌ರನ್ನ 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂಲ ಬೆಲೆ 20 ಲಕ್ಷ ರೂಪಾಯಿಗೆ ಖರೀದಿಸಿದೆ.

ಆರ್‌ಸಿಬಿ ಪರ ಹಿರಿಯ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಇದ್ದು, ಅನುಜ್ ರಾವತ್ ಹೊರತುಪಡಿಸಿದ್ರೆ, ಮೂರನೇ ವಿಕೆಟ್ ಕೀಪರ್ ಆಗಿ ಯುವ ಆಟಗಾರ ಲವನೀತ್ ಸಿಸೋಡಿಯಾ ಸ್ಕ್ವಾಡ್‌ನಲ್ಲಿದ್ದಾರೆ. ದಿನೇಶ್ ಕಾರ್ತಿಕ್ ಒಂದು ವೇಳೆ ಗಾಯಾಳುವಾದ ಸಂದರ್ಭದಲ್ಲಿ ಈ ಯುವ ಆಟಗಾರನಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.

Story first published: Tuesday, February 15, 2022, 9:39 [IST]
Other articles published on Feb 15, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+