
25 ಎಸೆತಗಳಲ್ಲಿ ಅಜೇಯ ಅರ್ಧಶತಕ, ಸಿಕ್ಸರ್ ಸಿಡಿಸಿ ಗೆಲುವು ತಂದಿಟ್ಟ ಸ್ಮೃತಿ ಮಂದಾನ
ಶ್ರೀಲಂಕಾ ನೀಡಿದ್ದ 66ರನ್‌ಗಳ ಗುರಿ ಬೆನ್ನತ್ತಿದ ಭಾರತ ಮಹಿಳಾ ತಂಡದ ಆರಂಭ ಉತ್ತಮವಾಗಿರಲಿಲ್ಲ. ಶಫಾಲಿ ವರ್ಮಾ ಕೇವಲ 5ರನ್‌ಗೆ ವಿಕೆಟ್ ಒಪ್ಪಿಸಿದ್ರೆ, ಯುವ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಆತುರಕ್ಕೆ ಬಿದ್ದು ಕೇವಲ 2ರನ್‌ಗೆ ಇನ್ನಿಂಗ್ಸ್ ಮುಗಿಸಿದ್ರು.
ಒಂದೆಡೆ ವಿಕೆಟ್ ಉರುಳಿದ್ರೆ, ಅಬ್ಬರಿಸಿದ ಸ್ಮೃತಿ ಮಂದಾನ ಸುಲಭವಾಗಿ ರನ್ ಕಲೆಹಾಕಿದ್ರು. 25 ಎಸೆತಗಳಲ್ಲಿ ಅಜೇಯ 51ರನ್ ಕಲೆಹಾಕಿದ ಮಂದಾನ 204.00 ಸ್ಟ್ರೈಕ್‌ರೇಟ್ ಬ್ಯಾಟ್ ಬೀಸುವ ಮೂಲಕ ಮಿಂಚಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ 1 ಬೌಂಡರಿ ಸಹಿತ ಅಜೇಯ 11ರನ್ ಕಲೆಹಾಕಿದರು. ಅರ್ಧಶತಕಕ್ಕೆ ಐದು ರನ್‌ಗಳ ಅವಶ್ಯಕತೆಯಿದ್ದು, ತಂಡದ ಗೆಲುವಿಗೆ ಒಂದು ರನ್ ಬೇಕಿದ್ದ ಅಂತಿಮ ಹಂತದಲ್ಲಿ ಮಂದಾನ ಸಿಕ್ಸರ್ ಸಿಡಿಸುವ ಮೂಲಕ ತಂಡಕ್ಕೆ ಭರ್ಜರಿ ಗೆಲುವಿನೊಂದಿಗೆ ತನ್ನ ಅರ್ಧಶತಕವನ್ನು ಪೂರೈಸಿದ್ರು.
ಈ ಗೆಲುವಿನೊಂದಿಗೆ ಭಾರತ ದಾಖಲೆಯ ಏಳನೇ ಬಾರಿಗೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಇದುವರೆಗೂ ನಡೆದಿರುವ 8 ಆವೃತ್ತಿಯಲ್ಲಿ ಭಾರತದ ವನಿತೆಯರೇ 7 ಬಾರಿ ಟ್ರೋಫಿ ಗೆದ್ದು ಮೇಲುಗೈ ಸಾಧಿಸಿದ್ದಾರೆ.
ಟಿ20 ವಿಶ್ವಕಪ್: ಪಾಕ್ ವಿರುದ್ಧ ಪಂದ್ಯಕ್ಕೆ ಪ್ಲೇಯಿಂಗ್ 11 ಈಗಾಗಲೇ ಆಯ್ಕೆ ಆಗಿದೆ: ರೋಹಿತ್ ಶರ್ಮಾ

ಶ್ರೀಲಂಕಾ ವನಿತೆಯರ ಎಡವಟ್ಟು, 65 ರನ್‌ಗೆ ಕುಸಿದ ಲಂಕಾ!
ಇನ್ನು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ ವನಿತೆಯರು ಯಾರೂ ಊಹಿಸದ ರೀತಿಯಲ್ಲಿ ಫೈನಲ್‌ನಲ್ಲಿ ಬ್ಯಾಟ್ ಬೀಸಿದ್ರು. ಆರಂಭಿಕರಿಬ್ಬರು ರನೌಟ್‌ಗೆ ಬಲಿಯಾದ್ರೆ, ನಾಲ್ಕನೇ ಓವರ್‌ನಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 9ರನ್‌ಗೆ 4 ವಿಕೆಟ್ ಕಳೆದುಕೊಂಡ ಶ್ರೀಲಂಕಾ ಮತ್ತೆಲ್ಲೂ ಚೇತರಿಕೆಯನ್ನೇ ಕಾಣಲಿಲ್ಲ.
ಶ್ರೀಲಂಕಾ ಪರ ಮಾಧವಿ ರಿಚಾ ಘೋಷ್ ಕ್ಯಾಚ್ ನೀಡಿ 1ರನ್‌ಗೆ ವಿಕೆಟ್ ಒಪ್ಪಿಸಿದ್ರೆ, ನಂತರದ ಎಸೆತದಲ್ಲೇ ಅನುಷ್ಕ ಸಂಜೀವಿನಿ ರನೌಟ್ ಆದ್ರು. ಇದ್ರ ಬೆನ್ನಲ್ಲೇ ಹಸಿನಿ ಪೆರಾರ ಶೂನ್ಯಕ್ಕೆ ಗೋಲ್ಡನ್ ಡಕೌಟ್ ಆದ್ರು. ಕವಿಶಾ ದಿಲ್ಹಾರಿ 1, ನೀಲಾಕ್ಷಿ ಡಿ ಸಿಲ್ವಾ 6, ಮಲ್ಶಾ ಶೆಹಾನಿ 0, ಓಷದಿ ರಣಸಿಂಘೆ 13, ಸುಗಂದಿಕಾ ಕುಮಾರಿ 6ರನ್‌ಗೆ ವಿಕೆಟ್ ಕಳೆದುಕೊಂಡರು. ಕೊನೆಯಲ್ಲಿ ಇನೋಕಾ ರಣವೀರ ಅಜೇಯ 18, ಕಲಸೂರ್ಯ 6ರನ್‌ಗಳಿಸಿದ್ರು. ಅಂತಿಮವಾಗಿ 8.3 ಓವರ್‌ಗಳಲ್ಲಿ 25ರನ್‌ಗೆ 7 ವಿಕೆಟ್ ಕಳೆದುಕೊಂಡಿದ್ದ ಲಂಕನ್ನರು 65ರನ್ ಕಲೆಹಾಕಿದರು. ಆದ್ರೆ ಈ ಮೊತ್ತವೂ ಬಲಿಷ್ಠ ಭಾರತಕ್ಕೆ ಯಾವುದೇ ತೃಣಕ್ಕೂ ಸಮಾನವಾಗಿರಲಿಲ್ಲ. ಪರಿಣಾಮ ಭಾರತ ಸುಲಭವಾಗಿ ಟ್ರೋಫಿ ಜಯಿಸಿತು.
ಭಾರತದ ಪರ ರೇಣುಕಾ ಸಿಂಗ್ 3, ರಾಜೇಶ್ವರಿ ಗಾಯಕ್ವಾಡ್ ಮತ್ತು ಸ್ನೇಹಾ ರಾಣಾ ತಲಾ 2 ವಿಕೆಟ್ ಪಡೆದರು.
T20 World Cup 2022 Live: ಟಿ20 ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ

ಏಳನೇ ಬಾರಿಗೆ ಟ್ರೋಫಿ ಗೆದ್ದುಕೊಂಡ ಭಾರತ
2004ರಲ್ಲಿ ಆರಂಭಗೊಂಡ ಮಹಿಳಾ ಏಷ್ಯಾಕಪ್ ಟೂರ್ನಮೆಂಟ್‌ನಲ್ಲಿ ಭಾರತದ ಮಹಿಳೆಯರು ಪ್ರಾಬಲ್ಯತೆ ಮೆರೆಯುತ್ತಾ ಬಂದಿದ್ದಾರೆ. ಶ್ರೀಲಂಕಾ ವಿರುದ್ಧ ಫೈನಲ್‌ನಲ್ಲಿ ಭಾರತ ಗೆಲ್ಲುವ ಮೂಲಕ ಚೊಚ್ಚಲ ಟ್ರೋಫಿ ಗೆದ್ದಿತು. 2004ರ ಏಷ್ಯಾಕಪ್ ಜೊತೆಗೆ ಈ ಮೆಗಾ ಟೂರ್ನಿಯಲ್ಲಿ ಭಾರತ ಮತ್ತು ಶ್ರೀಲಂಕಾ 2005, 2006 ಮತ್ತು 2008ರಲ್ಲಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ನಾಲ್ಕು ಫೈನಲ್‌ಗಳಲ್ಲೂ ಭಾರತ ಗೆದ್ದಿರುವುದು ಗಮನಾರ್ಹ.
2012 ಭಾರತ ಮೊದಲ ಬಾರಿಗೆ ಪಾಕಿಸ್ತಾನವನ್ನ ಫೈನಲ್‌ನಲ್ಲಿ ಸೆಣಸಿ ಟ್ರೋಫಿ ಜಯಿಸಿತು. ಇದಾದ ಬಳಿಕ 2016ರಲ್ಲಿ ಭಾರತ-ಪಾಕ್ ಮುಖಾಮುಖಿಯಲ್ಲಿ ಭಾರತವೇ ಚಾಂಪಿಯನ್ ಆಯಿತು. ಆದ್ರೆ 2018ರಲ್ಲಿ ಮಾತ್ರ ಬಾಂಗ್ಲಾದೇಶ ವಿರುದ್ಧ ಸೋತ ಭಾರತ ಮೊದಲ ಬಾರಿಗೆ ರನ್ನರ್ ಅಪ್‌ಗೆ ತೃಪ್ತಿಪಟ್ಟಿತು.
ಆದ್ರೀಗ ಭಾರತ ಮತ್ತೆ ಏಷ್ಯಾಕಪ್ ಟ್ರೋಫಿಯನ್ನ ಮರಳಿ ಸಂಪಾದಿಸಿದ್ದು, ಶ್ರೀಲಂಕಾ ವಿರುದ್ಧವೇ ಐದನೇ ಬಾರಿಗೆ ಫೈನಲ್‌ನಲ್ಲಿ ಜಯಿಸಿ ಒಟ್ಟು 7ನೇ ಟ್ರೋಫಿಯನ್ನ ತನ್ನ ಮುಡಿಗೇರಿಸಿಕೊಂಡಿದೆ.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಭಾರತದ ವನಿತೆಯರು
ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ದಯಾಲನ್ ಹೇಮಲತಾ, ಹರ್ಮನ್‌ಪ್ರೀತ್ ಕೌರ್(ನಾಯಕಿ), ದೀಪ್ತಿ ಶರ್ಮಾ, ರಿಚಾ ಘೋಷ್(ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್
ಶ್ರೀಲಂಕಾ ವನಿತೆಯರ ಪ್ಲೇಯಿಂಗ್ ಇಲೆವೆನ್
ಚಾಮರಿ ಅತಪತ್ತು(ನಾಯಕಿ), ಅನುಷ್ಕಾ ಸಂಜೀವನಿ(ವಿಕೆಟ್ ಕೀಪರ್), ಹರ್ಷಿತಾ ಮಾದವಿ, ಹಾಸಿನಿ ಪೆರೇರಾ, ನೀಲಾಕ್ಷಿ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಮಲ್ಶಾ ಶೆಹಾನಿ, ಓಷದಿ ರಣಸಿಂಗ್, ಸುಗಂದಿಕಾ ಕುಮಾರಿ, ಇನೋಕಾ ರಣವೀರ, ಅಚಿನಿ ಕುಲಸೂರ್ಯ


Click it and Unblock the Notifications












