ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌: ಪಾಕ್ ವಿರುದ್ಧ ಪಂದ್ಯಕ್ಕೆ ಪ್ಲೇಯಿಂಗ್ 11 ಈಗಾಗಲೇ ಆಯ್ಕೆ ಆಗಿದೆ: ರೋಹಿತ್ ಶರ್ಮಾ

Team india

ಟಿ20 ವಿಶ್ವಕಪ್ 2022 ಇನ್ನೇನು 24 ಗಂಟೆಗಳ ಒಳಗೆ ಚಾಲನೆ ಸಿಗಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯುವ ಈ ಪ್ರತಿಷ್ಠಿತ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ಟೂರ್ನಿಗೆ ಸಿದ್ಧಗೊಂಡಿದ್ದು, ಟೀಂ ಇಂಡಿಯಾ ಕೂಡ ಇದಕ್ಕಾಗಿ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಎರಡು ಅಭ್ಯಾಸ ಪಂದ್ಯಗಳನ್ನಾಡಿದ್ದು, ಇನ್ನೆರಡು ಅಭ್ಯಾಸ ಪಂದ್ಯಗಳನ್ನ ಆಡಲಿದೆ.

ಇದೇ ತಿಂಗಳ 23ರಂದು ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಬಹುಕಾಲದ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಎರಡು ತಿಂಗಳ ಹಿಂದೆಯಷ್ಟೇ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಕೊನೆಗೊಂಡ ಏಷ್ಯಾ ಕಪ್ 2022 ಪಂದ್ಯಾವಳಿಯ ನಂತರ ಈ ಎರಡು ತಂಡಗಳು ಮತ್ತೆ ಮುಖಾಮುಖಿಯಾಗಲಿವೆ.

ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಮೊದಲ ಪಂದ್ಯ

ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಮೊದಲ ಪಂದ್ಯ

ಏಷ್ಯಾಕಪ್‌ನಂತೆಯೇ ಭಾರತ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ತಿಂಗಳ 23 ರಂದು ಭಾರತೀಯ ಕಾಲಮಾನ ಮಧ್ಯಾಹ್ನ ಒಂದೂವರೆ ಗಂಟೆಗೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಪ್ರಸ್ತುತ ಪಾಕಿಸ್ತಾನ ಉತ್ತಮ ಫಾರ್ಮ್‌ನಲ್ಲಿದೆ. ನ್ಯೂಜಿಲೆಂಡ್‌ನಲ್ಲಿ ತ್ರಿಕೋನ ಟಿ20 ಸರಣಿಯನ್ನು ಗೆದ್ದುಕೊಂಡಿತು. ನ್ಯೂಜಿಲೆಂಡ್-ಪಾಕಿಸ್ತಾನ-ಬಾಂಗ್ಲಾದೇಶ ಒಳಗೊಂಡ ಸರಣಿ ಇದಾಗಿದೆ. ಕಿವೀಸ್ ತಂಡವನ್ನ ಫೈನಲ್‌ನಲ್ಲಿ ಬಾಬರ್ ಅಜಮ್ ಪಡೆ ಸೋಲಿಸಿದೆ.

ಪಾಕ್ ವಿರುದ್ಧದ ಪಂದ್ಯಕ್ಕೆ ಪ್ಲೇಯಿಂಗ್ 11 ರೆಡಿ

ಪಾಕ್ ವಿರುದ್ಧದ ಪಂದ್ಯಕ್ಕೆ ಪ್ಲೇಯಿಂಗ್ 11 ರೆಡಿ

ನ್ಯೂಜಿಲೆಂಡ್ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಪಾಕಿಸ್ತಾನ ಈಗಾಗಲೇ ಕಾಂಗರೂ ನಾಡಿಗೆ ಕಾಲಿಟ್ಟಿದ್ದು, ಟೀಂ ಇಂಡಿಯಾ ವಿರುದ್ಧ ಫೈಟ್‌ಗೆ ರೆಡಿಯಾಗಿದೆ. ಈ ಬ್ಲಾಕ್‌ಬಸ್ಟರ್ ಪಂದ್ಯದ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ. ಕೊನೆ ಕ್ಷಣದ ನಿರ್ಧಾರಗಳಲ್ಲಿ ನಂಬಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದಕ್ಕೇ ಈಗಾಗಲೇ ಆಡುವ ಹನ್ನೊಂದು ಆಟಗಾರರನ್ನು ಆಯ್ಕೆ ಮಾಡಿಕೊಂಡಿರುವುದಾಗಿ ತಿಳಿಸಿದರು. ಈ ಮಾಹಿತಿಯನ್ನು ಆಟಗಾರರಿಗೂ ಕೂಡ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಆಟಗಾರರಿಗೆ ಮೊದಲೇ ಏಕೆ ತಿಳಿಸಲಾಗಿದೆ ?

ಆಟಗಾರರಿಗೆ ಮೊದಲೇ ಏಕೆ ತಿಳಿಸಲಾಗಿದೆ ?

ಆಟಗಾರರಿಗೆ ಮೊದಲೇ ತಿಳಿಸುವುದರಿಂದ ಅವರು ಈಗಿನಿಂದಲೇ ಮಾನಸಿಕವಾಗಿ ಸಿದ್ಧರಾಗುತ್ತಾರೆ. ಅಂತಿಮ ತಂಡದ ಆಯ್ಕೆಯ ಬಗ್ಗೆ ಆಟಗಾರರಿಗೆ ಮುಂಚಿತವಾಗಿ ತಿಳಿಸಲು ಬಯಸುವುದಾಗಿ ರೋಹಿತ್ ಶರ್ಮಾ ಹೇಳಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಯಾರನ್ನು ಆಡಿಸಬೇಕೆಂದು ಈಗಾಗಲೇ ನಿರ್ಧರಿಸಲಾಗಿದೆ. ಆಟಗಾರರಿಗೂ ಮಾಹಿತಿ ನೀಡಿದ್ದೇವೆ ಎಂದು ವಿವರಿಸಿದರು. ಕೊನೆಯ ಕ್ಷಣದ ನಿರ್ಧಾರಗಳಲ್ಲಿ ನನಗೆ ನಂಬಿಕೆ ಇಲ್ಲ ಎಂದು ಪುನರುಚ್ಚರಿಸಿದರು. ಸಾಕಷ್ಟು ಸಮಯ ಇರುವುದರಿಂದ ಆಟಗಾರರು ಯಾವುದೇ ಒತ್ತಡವಿಲ್ಲದೆ ಮುಕ್ತವಾಗಿ ಆಡುತ್ತಾರೆ ಎಂದು ಅವರು ಹೇಳಿದ್ದಾರೆ.

ಪಾಕ್ ವಿರುದ್ಧ ಗೆಲ್ಲಲು ಟೀಂ ಇಂಡಿಯಾ ಗೇಮ್‌ಪ್ಲಾನ್ ಏನು?

ಪಾಕ್ ವಿರುದ್ಧ ಗೆಲ್ಲಲು ಟೀಂ ಇಂಡಿಯಾ ಗೇಮ್‌ಪ್ಲಾನ್ ಏನು?

ಪಾಕಿಸ್ತಾನ ವಿರುದ್ಧದ ಪಂದ್ಯವನ್ನಾಡುವ ಜನರು ಮತ್ತು ಅಭಿಮಾನಿಗಳ ಭಾವನೆಗಳು ಏನೆಂದು ನನಗೆ ತಿಳಿದಿದೆ ಎಂದು ಹಿಟ್‌ಮ್ಯಾನ್ ಹೇಳಿದರು. ಏಷ್ಯಾಕಪ್‌ನಲ್ಲಿ ಆ ತಂಡವನ್ನು ಎದುರಿಸಿದ ಅನುಭವ ಯುವ ಕ್ರಿಕೆಟಿಗರಿಗೆ ಇದೆ. ಈಗ ತಂತ್ರಗಳ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದು ರೋಹಿತ್ ಶರ್ಮಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

140 ರನ್ ಗಳಿಸುವುದು ಈಗ ಗೆಲ್ಲುವ ಟಾರ್ಗೆಟ್ ಅಲ್ಲ, ಎಲ್ಲಾ ತಂಡಗಳು 14-15 ಓವರ್‌ಗಳಲ್ಲಿ ಆ ಸ್ಕೋರ್ ತಲುಪುವ ಗುರಿಯನ್ನು ಹೊಂದಿವೆ ಎಂದು ರೋಹಿತ್ ಶರ್ಮಾ ಹೇಳಿದರು.

ಭಾನುವಾರದ ಅಭ್ಯಾಸ ಪಂದ್ಯದಲ್ಲಿ ಶಮಿ ಭಾಗಿ

ಭಾನುವಾರದ ಅಭ್ಯಾಸ ಪಂದ್ಯದಲ್ಲಿ ಶಮಿ ಭಾಗಿ

ಮೊಹಮ್ಮದ್ ಶಮಿ ಫಿಟ್‌ನೆಸ್‌ಗೆ ಮರಳುವುದು ಉತ್ತಮವಾಗಿದೆ ಮತ್ತು ಅವರು ಬ್ರಿಸ್ಬೇನ್‌ನಲ್ಲಿ ಭಾನುವಾರದ ಅಭ್ಯಾಸದಲ್ಲಿ ಭಾಗವಹಿಸಲಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ತಂಡವನ್ನು ಇನ್ನೂ ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ. ಇಲ್ಲಿನ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಬೇಕು ಎಂದು ಶಮಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ರೋಹಿತ್ ಶರ್ಮಾ ಹೊಗಳಿದರು. ಅವರ ಫಾರ್ಮ್ ಅನ್ನು ಮುಂದುವರಿಸುವ ಭರವಸೆ ಇದೆ ಎಂದು ಹೇಳಿದರು.

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಅಂತಿಮ 15 ಆಟಗಾರರ ಸ್ಕ್ವಾಡ್

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಅಂತಿಮ 15 ಆಟಗಾರರ ಸ್ಕ್ವಾಡ್

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.

ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ಶಾರ್ದೂಲ್ ಠಾಕೂರ್.

Story first published: Saturday, October 15, 2022, 12:28 [IST]
Other articles published on Oct 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X