For Quick Alerts
ALLOW NOTIFICATIONS  
For Daily Alerts
 

ಥಾಯ್ಲೆಂಡ್‌ ಎದುರು ಸೋತ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ: ಟ್ವಿಟ್ಟರ್‌ನಲ್ಲಿ ಭಾರೀ ಟ್ರೋಲ್

Thailand vs Pakistan

ಮಹಿಳಾ ಟಿ20 ಏಷ್ಯಾಕಪ್ ಟೂರ್ನಮೆಂಟ್‌ನ 10ನೇ ಪಂದ್ಯದಲ್ಲಿ ಕ್ರಿಕೆಟ್ ಕೂಸು ಥಾಯ್ಲೆಂಡ್‌ ಎದುರು ಸೋಲುವ ಮೂಲಕ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ ಭಾರೀ ಮುಖಭಂಗ ಎದುರಿಸಿದೆ.

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಏಷ್ಯಾಕಪ್‌ನ ಲೀಗ್ ಹಂತದಲ್ಲಿ ಪಂದ್ಯದಲ್ಲಿ ಥಾಯ್ಲೆಂಡ್ ಕ್ರಿಕೆಟ್ ಲೋಕಕ್ಕೆ ಶಾಕ್ ನೀಡುವಂತಹ ಪ್ರದರ್ಶನ ನೀಡಿದ್ದು ಪಾಕಿಸ್ತಾನ ತಂಡವನ್ನೇ ಮಣಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅದೇ ವೇಳೆಯಲ್ಲಿ ಸೋತ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.

ಥಾಯ್ಲೆಂಡ್‌ಗೆ 117ರನ್ ಗುರಿ ನೀಡಿದ ಪಾಕಿಸ್ತಾನ ಮಹಿಳಾ ತಂಡ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಬಿಸ್ಮಾ ಮರೂಫ್ ನೇತೃತ್ವದ ಪಾಕಿಸ್ತಾನ ಮಹಿಳಾ ತಂಡವು ಅತ್ಯಂತ ಕೆಟ್ಟ ಬ್ಯಾಟಿಂಗ್ ಪ್ರದರ್ಶಿಸಿತು. ಓಪನರ್ ಅಮೀನ್ ಅರ್ಧಶತಕ ದಾಖಲಿಸಿದ್ದು (56) ಬಿಟ್ಟರೆ ಬೇರೆ ಯಾವೊಬ್ಬ ಬ್ಯಾಟ್ಸ್‌ವುಮೆನ್ ತಂಡಕ್ಕೆ ಆಧಾರವಾಗುವಲ್ಲಿ ವಿಫಲರಾದ್ರು. ಪರಿಣಾಮ ನಿಗದಿತ 20 ಓವರ್‌ಗಳಲ್ಲಿ ಪಾಕಿಸ್ತಾನ ಮಹಿಳಾ ತಂಡ 5 ವಿಕೆಟ್ ನಷ್ಟಕ್ಕೆ 116ರನ್‌ಗಳಿಸಲಷ್ಟೇ ಶಕ್ತಗೊಂಡಿತು.

ರೋಚಕ ಗೆಲುವು ದಾಖಲಿಸಿದ ಥಾಯ್ಲೆಂಡ್, ಪಾಕ್ ವಿರುದ್ಧ ಚೊಚ್ಚಲ ಜಯ

117ರನ್ ಗುರಿ ಬೆನ್ನತ್ತಿದ ಥಾಯ್ಲೆಂಡ್ ಮಹಿಳಾ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಆದ್ರೆ ತಂಡದ ಪರ ಓಪನರ್ ನಾಟ್ಟಾಕಂ ಚಾಂತಂ 51 ಎಸೆತಗಳಲ್ಲಿ 61 ರನ್ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಈಕೆಯ ಪ್ರಮುಖ ಇನ್ನಿಂಗ್ಸ್‌ನಿಂದಾಗಿ ಥಾಯ್ಲೆಂಡ್ ಇನ್ನೊಂದು ಎಸೆತ ಬಾಕಿ ಇರುವಂತೆಯೇ ನಾಲ್ಕು ವಿಕೆಟ್‌ಗಳ ರೋಚಕ ಗೆಲವು ಸಾಧಿಸಿತು.

ಟಿ20 ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ವೆಸ್ಟ್ ಇಂಡೀಸ್ ಓಪನರ್, 77 ಎಸೆತಗಳಲ್ಲಿ ಅಜೇಯ 205 ರನ್!

ಪುರುಷರ ತಂಡಕ್ಕೂ, ಇವರಿಗೂ ಯಾವುದೇ ವ್ಯತ್ಯಾಸವಿಲ್ಲ!

ಪಾಕಿಸ್ತಾನ ಮಹಿಳಾ ತಂಡದ ಈ ಭಾರೀ ಮುಖಭಂಗವನ್ನ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್ ಮಾಡಲಾಗಿದ್ದು, ಪುರುಷರ ತಂಡಕ್ಕೂ ಈ ಮಹಿಳಾ ತಂಡಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ಟೀಕಿಸಿದ್ದಾರೆ. ಪಾಕಿಸ್ತಾನ ತಂಡವು ಚೋಕರ್ ಆಗಿ ಕಾಣಿಸಿಕೊಳ್ಳುತ್ತದೆ. ಹಾಗೆಯೇ ದುರ್ಬಲ ತಂಡದೆದುರು ಸೋಲುವುದನ್ನ ಕಂಡಿದ್ದೇವೆ. ಇದೀಗ ಈ ಮಹಿಳಾ ತಂಡಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ಕುಟುಕಿದ್ದಾರೆ.

ಪಾಕಿಸ್ತಾನ ವಿರುದ್ಧ ಚೊಚ್ಚಲ ಗೆಲುವು ಸಾಧಿಸಿದ ಥಾಯ್ಲೆಂಡ್‌ಗೆ ಶುಭಾಶಯ

ಯಾವುದೇ ಮಾದರಿಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಮಹಿಳಾ ತಂಡವಾಗಲಿ, ಪುರುಷರ ತಂಡದ ವಿರುದ್ಧ ಥಾಯ್ಲೆಂಡ್ ದಾಖಲಿಸಿದ ಮೊದಲ ಜಯ ಇದಾಗಿದೆ. ಹೀಗಾಗಿ ಕ್ರಿಕೆಟ್ ಇತಿಹಾಸದಲ್ಲಿ ಥಾಯ್ಲೆಂಡ್‌ಗೆ ಗುರುವಾರ (ಅ.06) ಐತಿಹಾಸಿಕ ದಿನವಾಗಿ ದಾಖಲಾಗಿದೆ. ಒಂದೆಡೆ ಥಾಯ್ಲೆಂಡ್ ಬೇಬಿ ಡೇ ಕೇರ್‌ನಲ್ಲಿ ದುಷ್ಕರ್ಮಿಯಿಂದ ನಡೆದ ಶೂಟೌಟ್‌ನಲ್ಲಿ 20ಕ್ಕೂ ಹೆಚ್ಚು ಮಕ್ಕಳು, ಮಹಿಳೆಯರು ಸೇರಿದಂತೆ 34ಕ್ಕೂ ಅಧಿಕ ಜನರು ಸಾವನ್ನಪ್ಪಿದ ಘಟನೆ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಅದೇ ದಿನದಲ್ಲಿ ಥಾಯ್ಲೆಂಡ್ ಮಹಿಳಾ ಕ್ರಿಕೆಟ್ ತಂಡವು ಈ ಐತಿಹಾಸಿಕ ಸಾಧನೆ ಮಾಡಿರುವುದು ದೇಶಕ್ಕೆ ಸಿಕ್ಕ ಬಹುದೊಡ್ಡ ಬೆಂಬಲವಾಗಿದೆ.

Story first published: Thursday, October 6, 2022, 19:54 [IST]
Other articles published on Oct 6, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+