ಮಹಿಳಾ ಏಷ್ಯಾಕಪ್ 2022: ಪಾಕಿಸ್ತಾನ ವಿರುದ್ಧ ಸೋತ ಭಾರತದ ವನಿತೆಯರು, 13ರನ್‌ಗಳಿಂದ ಸೋಲು

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್ ಟಿ20 2022ರ 13ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ವನಿತೆಯರು ಮುಗ್ಗರಿಸಿದ್ದಾರೆ. ಸತತ ಮೂರು ಪಂದ್ಯಗಳನ್ನ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ಪಾಕಿಸ್ತಾನದ ವಿರುದ್ಧ ಸುಲಭ ಗುರಿಯನ್ನ ಬೆನ್ನಟ್ಟಲಾಗದೇ 13ರನ್‌ಗಳಿಂದ ಸೋಲನ್ನ ಅನುಭವಿಸಿದ್ದಾರೆ.
ಪಾಕಿಸ್ತಾನ ವನಿತೆಯರು ನೀಡಿದ್ದ 138ರನ್‌ಗಳ ಗುರಿಯನ್ನ ಬೆನ್ನತ್ತುವಲ್ಲಿ ವಿಫಲಗೊಂಡ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡವು 124ರನ್‌ಗಳಿಗೆ ಆಲೌಟ್ ಆಗುವ ಮೂಲಕ 13ರನ್‌ಗಳಿಂದ ಸೋಲನ್ನ ಒಪ್ಪಿಕೊಂಡಿದೆ. ಈ ಗೆಲುವಿನ ಮೂಲಕ ಪಾಕಿಸ್ತಾನ ಮಹಿಳಾ ತಂಡವು ಭಾರತದಷ್ಟೇ ಪಾಯಿಂಟ್ಸ್ ಹೊಂದಿದ್ದರೂ, ರನ್‌ರೇಟ್‌ನಲ್ಲಿ ಕೊಂಚ ಹಿಂದಿರುವ ಕಾರಣ ಎರಡನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಭಾರತ ಮತ್ತು ಪಾಕಿಸ್ತಾನ ತಲಾ 6 ಅಂಕ ಕಲೆಹಾಕಿವೆ.

ಭಾರತದ ದಾಳಿಗೆ ನಲುಗಿದ್ದ ಪಾಕಿಸ್ತಾನ ಮಹಿಳಾ ತಂಡ
ಭಾರತದ ಬೌಲಿಂಗ್ ದಾಳಿಗೆ ಪಾಕಿಸ್ತಾನ ಟಾಪ್ ಆರ್ಡರ್ ಬಹುಬೇಗನೆ ಕುಸಿತಗೊಂಡಿತು. ಮುನೀಬ ಅಲಿ ಮತ್ತು ಅಮೀನ್ ಬೇಗನೆ ವಿಕೆಟ್ ಒಪ್ಪಿಸಿದ್ರೆ, ಸೊಹಾಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು. ಈ ವೇಳೆಯಲ್ಲಿ ತಂಡಕ್ಕೆ ಆಧಾರವಾಗಿದ್ದು ನಾಯಕಿ ಬಿಸ್ಮಾ ಮರೂಫ್ ಹಾಗೂ ನಿದಾ ದಾರ್.
ಬಿಸ್ಮಾ ಮರೂಫ್ ಮತ್ತು ನಿದಾ ದಾರ್ ಜೊತೆಯಾಟವು ತಂಡದ ಸ್ಕೋರನ್ನು 100ರ ಗಡಿದಾಟಿಸಿತು. ಮರೂಫ್ 35 ಎಸೆತಗಳಲ್ಲಿ 32ರನ್ ಕಲೆಹಾಕಿದ್ರೆ, ನಿದಾ ದಾರ್ 37 ಎಸೆತಗಳಲ್ಲಿ ಅಜೇಯ 56ರನ್ ಕಲೆಹಾಕುವ ಮೂಲಕ ಮಿಂಚಿದರು. ಅಂತಿಮವಾಗಿ ಪಾಕಿಸ್ತಾನ 6 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಿತು.
ಸಂಜು ಸ್ಯಾಮ್ಸನ್‌ಗೆ ಯುವರಾಜ್ ಸಿಂಗ್‌ನಂತೆ ಸಿಕ್ಸರ್ ಸಿಡಿಸುವ ಸಾಮರ್ಥ್ಯವಿದೆ: ಡೇಲ್ ಸ್ಟೇನ್
ಟೀಂ ಇಂಡಿಯಾ ಟಾಪ್ ಆರ್ಡರ್ ವೈಫಲ್ಯ, ಹರ್ಮನ್ ಪ್ರೀತ್ ಕೌರ್ ಪಡೆಗೆ ಮುಖಭಂಗ
138 ರನ್ ಗುರಿ ಬೆನ್ನತ್ತಿದ ಹರ್ಮನ್ ಪ್ರೀತ್ ಕೌರ್ ಪಡೆಗೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಸ್ಮೃತಿ ಮಂಧಾನ 17, ಸಬ್ಬಿನೇನಿ ಮೇಘನಾ 15, ಜೆಮಿಮಾ ರಾಡ್ರಿಗಸ್ 2, ದಯಾಲನ್ ಹೇಮಲತಾ 20, ದೀಪ್ತಿ ಶರ್ಮಾ 16, ಹರ್ಮನ್‌ಪ್ರೀತ್ ಕೌರ್ 12, , ರಿಚಾ ಘೋಷ್ 26, ಪೂಜಾ ವಸ್ತ್ರಾಕರ್ 5, ರಾಧಾ ಯಾದವ್ 3, ರೇಣುಕಾ ಸಿಂಗ್ 2, ರಾಜೇಶ್ವರಿ ಗಾಯಕ್ವಾಡ್ 1 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು.
ಗೆಲ್ಲುವ ಪಂದ್ಯವನ್ನ ಕೈ ಚೆಲ್ಲಿದ ಭಾರತದ ವನಿತೆಯರು 19.4 ಓವರ್‌ಗಳಲ್ಲಿ 124ರನ್‌ಗಳಿಗೆ ಸರ್ವಪತನಗೊಂಡಿತು. ಈ ಮೂಲಕ ಏಷ್ಯಾಕಪ್‌ನಲ್ಲಿ ಭಾರತ ಮೊದಲ ಸೋಲನ್ನ ಅನುಭವಿಸಿದ್ದರೂ, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದೆ.
ಮತ್ತೊಂದೆಡೆ ಥಾಯ್ಲೆಂಡ್ ಎದುರು ಸೋತು ಮುಖಭಂಗ ಎದುರಿಸಿದ್ದ ಪಾಕಿಸ್ತಾನ ಗೆಲುವಿನ ಹಾದಿಗೆ ಮರಳಿದ್ದು ಸೆಮಿಫೈನಲ್ ತಲುಪುವ ಆಸೆಯನ್ನ ಜೀವಂತವಾಗಿರಿಸಿದೆ.
ನಾಯಿಗಳು ಬೊಗಳುತ್ತವೇ ಎಂದು ಕಲ್ಲು ಹೊಡೆಯುತ್ತಾ ನಿಲ್ಲಲಾರೆ: ಟೀಕಾಕಾರರ ಬಾಯಿ ಮುಚ್ಚಿಸಿದ ಜಸ್ಪ್ರೀತ್ ಬುಮ್ರಾ!

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಪಾಕಿಸ್ತಾನ ಮಹಿಳಾ ತಂಡದ ಪ್ಲೇಯಿಂಗ್ 11
ಮುನೀಬಾ ಅಲಿ(ವಿಕೆಟ್ ಕೀಪರ್), ಸಿದ್ರಾ ಅಮೀನ್, ಬಿಸ್ಮಾ ಮರೂಫ್(ನಾಯಕಿ), ನಿದಾ ದಾರ್, ಆಯೇಶಾ ನಸೀಮ್, ಅಲಿಯಾ ರಿಯಾಜ್, ಒಮೈಮಾ ಸೊಹೈಲ್, ಐಮಾನ್ ಅನ್ವರ್, ಸಾದಿಯಾ ಇಕ್ಬಾಲ್, ತುಬಾ ಹಸನ್, ನಶ್ರಾ ಸಂಧು
ಬೆಂಚ್: ಕೈನಾತ್ ಇಮ್ತಿಯಾಜ್, ಡಯಾನಾ ಬೇಗ್, ಸಿದ್ರಾ ನವಾಜ್, ಸದಾಫ್ ಶಮಾಸ್
ಭಾರತ ಮಹಿಳಾ ತಂಡದ ಪ್ಲೇಯಿಂಗ್ 11
ಸ್ಮೃತಿ ಮಂಧಾನ, ಸಬ್ಬಿನೇನಿ ಮೇಘನಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ದಯಾಲನ್ ಹೇಮಲತಾ, ರಿಚಾ ಘೋಷ್(ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್
ಬೆಂಚ್: ಶಫಾಲಿ ವರ್ಮಾ, ಸ್ನೇಹ ರಾಣಾ, ಕಿರಣ್ ನವ್ಗಿರೆ, ಮೇಘನಾ ಸಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications