ಮಹಿಳಾ ಟಿ20 ವಿಶ್ವಕಪ್ ಮುನ್ನೋಟ: ಭಾರತಕ್ಕೆ ನ್ಯೂಜಿಲೆಂಡ್ ಎದುರಾಳಿ

ಗಯಾನಾ, ನವೆಂಬರ್ 8: ಯುವ ಮುಖಗಳನ್ನು ಒಳಗೊಂಡ ಭಾರತ ಮಹಿಳಾ ತಂಡ ಕೆರಿಬಿಯನ್ ನೆಲದಲ್ಲಿ ಹೊಸ ಸವಾಲಿಗೆ ಅಣಿಗೊಂಡಿದೆ.
ಶುಕ್ರವಾರ(ನವೆಂಬರ್09)ದಂದು ಮಹಿಳಾ ಟಿ20 ವಿಶ್ವಕಪ್‌ಗೆ ಚಾಲನೆ ದೊರಕುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಭಾರತದ ವನಿತೆಯರು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದ್ದಾರೆ.
ಈ ಹಿಂದಿನ ವಿಶ್ವಕಪ್‌ಗಳಲ್ಲಿ ಗೆಲುವು ಕಾಣದೆ ನಿರಾಸೆ ಹಿಂದಿದ್ದ ಭಾರತ, ಯುವಪಡೆಯ ಶಕ್ತಿಯೊಂದಿಗೆ ಟ್ರೋಫಿ ಗೆಲ್ಲುವ ಗುರಿ ಹೊತ್ತುಕೊಂಡಿದೆ. ಆದರೆ, ಮೊದಲ ಪಂದ್ಯವೇ ಭಾರತಕ್ಕೆ ಸವಾಲು ಎನಿಸಲಿದೆ. ನ್ಯೂಜಿಲೆಂಡ್ ಮಹಿಳೆಯರ ತಂಡ ಪ್ರಬಲವಾಗಿದ್ದು, ಅವರನ್ನು ಎದುರಿಸಲು ಭಾರತ ಸಾಕಷ್ಟು ತಯಾರಿ ನಡೆಸಬೇಕಿದೆ.
50 ಓವರ್‌ಗಳ ಪಂದ್ಯಗಳಿಗೆ ಹೋಲಿಸಿದರೆ ಟಿ20 ಭಾರತದ ವನಿತೆಯರ ಸಾಧನೆ ಅಷ್ಟೇನೂ ಗಮನಾರ್ಹವಾಗಿಲ್ಲ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿ ಭಾರತದ ಮಹಿಳಾ ಕ್ರಿಕೆಟ್‌ಗೆ ಹೊಸ ದಿಕ್ಕು ನೀಡಿತ್ತು. ಫೈನಲ್‌ನಲ್ಲಿ ಸೋತರೂ ಟೂರ್ನಿಯಲ್ಲಿ ಭಾರತ ಆಡಿದ ಬಗೆ ಪ್ರಶಂಸೆಗೆ ಪಾತ್ರವಾಗಿತ್ತು.
ಅದೇ ಪ್ರದರ್ಶನದ ಹುಮ್ಮಸ್ಸು ಹರ್ಮನ್ ಪ್ರೀತ್ ಕೌರ್ ನಾಯಕತ್ವದ ತಂಡದಲ್ಲಿದೆ.

ಇತಿಹಾಸ ಏನು ಹೇಳುತ್ತದೆ?
ಮಹಿಳಾ ಕ್ರಿಕೆಟ್‌ನಲ್ಲಿ ಇದು ಐದನೇ ಟಿ20 ವಿಶ್ವಕಪ್ ಟೂರ್ನಿ. ಇದುವರೆಗೂ ಭಾರತ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಒಂದು ಬಾರಿ ಮಾತ್ರ ಸೆಮಿಫೈನಲ್ ಪ್ರವೇಶಿಸಿರುವುದೇ ಅದರ ಸಾಧನೆ. ಪ್ರತಿ ಬಾರಿಯೂ ಪುರುಷರ ಟಿ20 ವಿಶ್ವಕಪ್ ಟೂರ್ನಿಯ ಜತೆಗೇ ಮಹಿಳಾ ವಿಶ್ವಕಪ್ ಕೂಡ ಇದುವರೆಗೂ ನಡೆಯುತ್ತಿತ್ತು. ಇದೇ ಮೊದಲ ಬಾರಿಗೆ ಮಹಿಳಾ ಟಿ20 ವಿಶ್ವಕಪ್ ಪ್ರತ್ಯೇಕವಾಗಿ ನಡೆಯುತ್ತಿದೆ. ಕಳೆದ ಮೂರು ವಿಶ್ವ ಟಿ20 ಗಳಲ್ಲಿ ಗುಂಪು ಹಂತಗಳಲ್ಲಿಯೇ ಭಾರತ ಹೊರ ಹೋಗಿತ್ತು. ಇತ್ತೀಚೆಗೆ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಎ ವಿರುದ್ಧ ಗೆದ್ದು ತನ್ನ ಉತ್ಸಾಹವನ್ನು ಹೆಚ್ಚಿಸಿಕೊಂಡಿದೆ.

ಸ್ಮೃತಿ ಮಂದಾನ ಶಕ್ತಿ
ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಬಿರುಸಿನ ಬ್ಯಾಟಿಂಗ್ ಶೈಲಿ ಹೊಂದಿದ್ದಾರೆ. ತಂಡಕ್ಕೆ ಉತ್ತಮ ಆರಂಭಿಸುವ ಹೊಣೆ ಅವರ ಮೇಲಿದೆ. ಏಷ್ಯಾ ಕಪ್ ಟೂರ್ನಿಯಲ್ಲಿ ಹಿನ್ನಡೆ ಅನುಭವಿಸಿದ ಬಳಿಕ ಎಲ್ಲರೂ ಕಠಿಣ ಶ್ರಮಪಟ್ಟು ಅಭ್ಯಾಸ ನಡೆಸಿದ್ದಾರೆ. ಶ್ರೀಲಂಕಾ ಸರಣಿ ಅತ್ಯುತ್ತಮವಾಗಿತ್ತು. ವೈಯಕ್ತಿಕವಾಗಿ ನಾನು ಹೆಚ್ಚು ರನ್ ಗಳಿಸದೆ ಇದ್ದರೂ, ಉತ್ತಮ ಸ್ಕೋರ್ ಗಳಿಸಿದ್ದೆವು. ಒಂದು ಪಂದ್ಯದಲ್ಲಿ ನಾನು ಮತ್ತು ಹರ್ಮನ್ ಪ್ರೀತ್ ಒಂದೂ ರನ್ ಗಳಿಸಲಿಲ್ಲ. ಆದರೂ 170 ರನ್ ರನ್ ಮಾಡಿದ್ದೆವು.
ಬೌಲರ್‌ಗಳು ಕೂಡ ಮೂರು ತಿಂಗಳಲ್ಲಿ ಭಾರಿ ಪ್ರಮಾಣದಲ್ಲಿ ಸುಧಾರಿಸಿದ್ದಾರೆ. ಕಳೆದ ವಿಶ್ವಕಪ್‌ಗೆ ಹೋಲಿಸಿದರೆ ಫೀಲ್ಡಿಂಗ್‌ನಲ್ಲಿ ನಾವು ಶೇ 10ರಷ್ಟು ಉತ್ತಮಗೊಂಡಿದ್ದೇವೆ.
ಐದು ವರ್ಷದ ಬಳಿಕ ಮೊದಲ ಟೆಸ್ಟ್ ಪಂದ್ಯ ಗೆದ್ದ ಜಿಂಬಾಬ್ವೆ

ಭಾರತದ ವೇಳಾಪಟ್ಟಿ
ನವೆಂಬರ್ 9, ಶುಕ್ರವಾರ: ಭಾರತ Vs ನ್ಯೂಜಿಲೆಂಡ್, 8.30 PM
ನವೆಂಬರ್ 11, ಭಾನುವಾರ: ಭಾರತ Vs ಪಾಕಿಸ್ತಾನ, 8.30 PM
ನವೆಂಬರ್ 15, ಗುರುವಾರ: ಭಾರತ Vs ಐರ್ಲೆಂಡ್, 8.30 PM
ನವೆಂಬರ್ 17, ಶನಿವಾರ: ಭಾರತ Vs ಆಸ್ಟ್ರೇಲಿಯಾ, 8.30 PM
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಭಾರತ ತಂಡ
ಭಾರತ: ಹರ್ಮನ್ ಪ್ರೀತ್ ಕೌರ್ (ನಾಯಕಿ), ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಏಕ್ತಾ ಬಿಷ್ಟ್, ದಯಾಳನ್ ಹೇಮಲತಾ, ಮಾನ್ಸಿ ಜೋಶಿ, ವೇದಾ ಕೃಷ್ಣಮೂರ್ತಿ, ಸ್ಮೃತಿ ಮಂದಾನಾ, ಅನುಜಾ ಪಾಟೀಲ್, ಮಿಥಾಲಿ ರಾಜ್, ಅರುಂಧತಿ ರೆಡ್ಡಿ, ಜೆಮಿಮಾಹ್ ರೋಡ್ರಿಗಸ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ಪೂನಂ ಯಾದವ್
ಭಾರತದಲ್ಲಿ ಏಕಿದ್ದೀರಾ? ಬೇರೆ ದೇಶಕ್ಕೆ ಹೋಗಿ: ಕೊಹ್ಲಿ ಮಾತಿಗೆ ಟ್ವಿಟ್ಟಿಗರ ಆಕ್ರೋಶ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications