ವಿಶ್ವಕಪ್ : ಟಾಪ್ ಅಲ್ಪಮೊತ್ತದ ಅವಮಾನಿತ ತಂಡಗಳು
ಬೆಂಗಳೂರು, ಫೆ.13: ವಿಶ್ವಕಪ್ ಟೂರ್ನಿಯಲ್ಲಿ ಹೊಸ ದಾಖಲೆ ನಿರ್ಮಿಸಲು ಎಲ್ಲಾ ತಂಡಗಳು ಬಯಸುವುದು ಸಹಜ. ಅದರೆ, ಕೆನಡಾ ನಿರ್ಮಿಸಿದ ದಾಖಲೆ ಮುರಿಯಲು ಯಾರೂ ಬಯಸುವುದಿಲ್ಲ. ಒಂದಲ್ಲ, ಎರಡು ಬಾರಿ ಕೆನಡಾ ಅಲ್ಪಮೊತ್ತಕ್ಕೆ ಆಲೌಟ್ ಆಗಿ ಬೇಡದ ದಾಖಲೆ ನಿರ್ಮಿಸಿದೆ.
ಕ್ರಿಕೆಟ್ ಶಿಶುಗಳೆನಿಸಿ ಮೊದಲ ಬಾರಿಗೆ ಜಾಗತಿಕ ವೇದಿಕೆಯಲ್ಲಿ ಸಮರಕ್ಕೆ ಬಂದ ಕೆನಡಾ, ಐರ್ಲೆಂಡ್, ನಮೀಬಿಯಾದಂಥ ತಂಡಗಳನ್ನು ಬಲಿಷ್ಠ ತಂಡಗಳು ಬಗ್ಗು ಬಡಿಯುವುದು ಸಾಮಾನ್ಯ.[ಕೆನಡಾ ದಾಖಲೆ ಮುರಿಯಲು ಯಾರು ಬಯಸಲ್ಲ]
ಆದರೆ, ಟಾಪ್ ಸ್ಕೋರರ್ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಮಾತ್ರ ಇಂಥ ತಂಡಗಳನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಸಫಲವಾಗಿಲ್ಲ. ಅದೇನೇ ಇರಲಿ ಪಾಕಿಸ್ತಾನ ಕೂಡಾ ಈ ಕಡಿಮೆ ಮೊತ್ತದ ಲಿಸ್ಟ್ ನಲ್ಲಿ ಸೇರಿಕೊಂಡಿರುವುದನ್ನು ಮರೆಯುವಂತಿಲ್ಲ.

ಟಾಪ್ 10 ಕಡಿಮೆ ಮೊತ್ತ ಸ್ಕೋರ್ ಮಾಡಿದ ತಂಡಗಳು:
* ಕೆನಡಾ: 36, 18.4 ಓವರ್ಸ್, ಶ್ರೀಲಂಕಾ ವಿರುದ್ಧ, ಪಾರ್ಲ್, 2003
* ಕೆನಡಾ: 45, 40.3 ಓವರ್ಸ್, ಇಂಗ್ಲೆಂಡ್ ವಿರುದ್ಧ, ಮ್ಯಾಂಚೆಸ್ಟರ್, 1979
* ನಮೀಬಿಯಾ: 45, 14 ಓವರ್ಸ್, ಆಸ್ಟ್ರೇಲಿಯಾ ವಿರುದ್ಧ, ಪೊಚೆಫ್ ಸ್ಟ್ರೂಮ್, 2003
* ಬಾಂಗ್ಲಾದೇಶ: 58, 18.5 ಓವರ್ಸ್, ವೆಸ್ಟ್ ಇಂಡೀಸ್ ವಿರುದ್ಧ, ಢಾಕಾ, 2011
* ಸ್ಕಾಟ್ಲೆಂಡ್: 68, 31.3 ಓವರ್ಸ್, ವೆಸ್ಟ್ ಇಂಡೀಸ್ ವಿರುದ್ಧ, ಲೀಸ್ಟೆಸ್ಟರ್, 1999.
* ಕೀನ್ಯಾ: 69, 23.5 ಓವರ್ಸ್, ನ್ಯೂಜಿಲೆಂಡ್ ವಿರುದ್ಧ, ಚೆನ್ನೈ, 2011.
* ಪಾಕಿಸ್ತಾನ: 74, 40.2 ಓವರ್ಸ್, ಇಂಗ್ಲೆಂಡ್ ವಿರುದ್ಧ, ಅಡಿಲೇಡ್, 1992.
* ಐರ್ಲೆಂಡ್:77, 27.4 ಓವರ್ಸ್, ಶ್ರೀಲಂಕಾ ವಿರುದ್ಧ,ಸೈಂಟ್ ಜಾರ್ಜ್, 2007.
* ಬಾಂಗ್ಲಾದೇಶ:78, 28 ಓವರ್ಸ್, ದಕ್ಷಿಣ ಆಫ್ರಿಕಾ ವಿರುದ್ಧ, ಢಾಕಾ, 2011.
* ಬರ್ಮುಡಾ : 78, 24.4 ಓವರ್ಸ್, ಶ್ರೀಲಂಕಾ ವಿರುದ್ಧ, ಪೋರ್ಟ್ ಆಫ್ ಸ್ಪೇನ್, 2007.
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications