ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ : ಕೆನಡಾ ದಾಖಲೆ ಮುರಿಯಲು ಯಾರು ಬಯಸಲ್ಲ!

By Mahesh

ದುಬೈ, ಫೆ.10: ವಿಶ್ವಕಪ್ ಎಂದರೆ ಹಾಗೆ ಅನೇಕ ದಾಖಲೆಗಳು ನಿರ್ಮಾಣವಾಗುತ್ತವೆ. ಹೊಸ ಹೊಸ ಸ್ಟಾರ್ ಗಳು ಏಕದಿನ ಕ್ರಿಕೆಟ್ ನಲ್ಲಿ ಉದಯಿಸುತ್ತಾರೆ. ಕ್ರಿಕೆಟ್ ಶಿಶುಗಳೆನಿಸಿರುವ ರಾಷ್ಟ್ರಗಳಿಗೂ ವಿಶ್ವಕಪ್ ಟೂರ್ನಿ ಅದ್ಭುತ ವೇದಿಕೆ ಒದಗಿಸುತ್ತದೆ. ವಿಶ್ವಕಪ್ ಟೂರ್ನಿಯಲ್ಲಿ ಹೊಸ ದಾಖಲೆ ನಿರ್ಮಿಸಲು ಬಯಸುತ್ತಾರೆ. ಅದರೆ, ಕೆನಡಾ ನಿರ್ಮಿಸಿದ ದಾಖಲೆ ಮುರಿಯಲು ಯಾರೂ ಬಯಸುವುದಿಲ್ಲ.

2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ ಪಂದ್ಯವೊಂದರಲ್ಲಿ ಕೆನಡಾ 36 ರನ್ನಿಗೆ ಆಲೌಟ್ ಆಗಿತ್ತು. ಪೀಟರ್ ಮರಿಟ್ಜ್ ಬರ್ಗ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆನಡಾ ತಂಡವನ್ನು ಶ್ರೀಲಂಕಾ ಈ ಅಲ್ಪಮೊತ್ತಕ್ಕೆ ಪೆವಿಲಿಯನ್ ಗೆ ಕಳಿಸಿತ್ತು. [ಶತಕ ವೀರರ ಪೈಕಿ ಸಚಿನ್ ಇಸ್ ಬೆಸ್ಟ್]

ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ

ವಿಶ್ವಕಪ್ ಇತಿಹಾಸದಲ್ಲೆ ಅತಿ ಕಡಿಮೆ ಮೊತ್ತದ ಟೀಂ ಸ್ಕೋರ್ ಇದಾಗಿದೆ. ಈ ಪಂದ್ಯದಲ್ಲಿ ಚಮಿಂಡಾ ವಾಸ್ ಹಾಗೂ ನಿಸ್ಸಾಕಾ ಪ್ರಭಾತ್ ಅವರು ಕೆನಡಾ ಬ್ಯಾಟಿಂಗ್ ಬೆನ್ನಲುಬು ಮುರಿದರು, ತಲಾ 4 ಹಾಗೂ 3 ವಿಕೆಟ್ ಕಿತ್ತರು. [ವೀಕ್ಷಕ ವಿವರಣೆ ಕಸ್ತೂರಿ ಕನ್ನಡದಲ್ಲಿ!]

ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ ಓಲ್ಡ್ ಟ್ರಾಫರ್ಡ್ ನಲ್ಲಿ 1979ರಲ್ಲಿ ನಡೆದ ಪಂದ್ಯದಲ್ಲಿ ಕೂಡಾ ಕೆನಡಾ ಅಲ್ಪ ಮೊತ್ತಕ್ಕೆ ಕುಸಿದಿತ್ತು. 45 ರನ್ನಿಗೆ ಕೆನಡಾ ಮಕಾಡೆ ಮಲಗಿತ್ತು.

10 lowest team totals in the tournament history

11ನೇ ವಿಶ್ವಕಪ್ ಟೂರ್ನಿಯಲ್ಲಿ ಈ ರೀತಿ ಸಾಧನೆಯನ್ನು ನೋಡಲು ಅಭಿಮಾನಿಗಳು ಬಯಸುವುದಿಲ್ಲ. ಬ್ಯಾಟಿಂಗ್ ಪರಾಕ್ರಮ ಮೆರೆಯುವುದನ್ನು ಕಾಣಲು ಬಯಸುತ್ತಾರೆ. ಅದರಲ್ಲೂ ಕೆನಡಾ ದಾಖಲೆ ಕನಸಿನಲ್ಲೂ ಯಾರೂ ನೆನಪಿಸಿಕೊಳ್ಳುವುದಿಲ್ಲ. [ವಿಶ್ವಕಪ್ 2015: ಎಲ್ಲಾ ತಂಡಗಳ ಪಟ್ಟಿ]

ವಿಶ್ವಕಪ್ ಇತಿಹಾಸದಲ್ಲಿ ಟಾಪ್ 10 ಅಲ್ಪ ಮೊತ್ತದ ಸ್ಕೋರ್ ಇಲ್ಲಿದೆ:

1. ಕೆನಡಾ -36 ರನ್ vs ಶ್ರೀಲಂಕಾ, 2003 ವಿಶ್ವಕಪ್

2. ಕೆನಡಾ -45 ರನ್ vs ಇಂಗ್ಲೆಂಡ್, 1979

3. ನಮೀಬಿಯಾ- 45 vs ಆಸ್ಟ್ರೇಲಿಯಾ, 2003

4. ಬಾಂಗ್ಲಾದೇಶ-58 vs ವೆಸ್ಟ್ ಇಂಡೀಸ್, ಮೀರ್ಪುರ್, 2011

5. ಸ್ಕಾಟ್ಲೆಂಡ್ 68 vs ವೆಸ್ಟ್ ಇಂಡೀಸ್, ಲೀಸ್ಟೆಸ್ಟರ್ , 1999

6. ಕೀನ್ಯಾ-69 vs ನ್ಯೂಜಿಲೆಂಡ್, ಚೆನ್ನೈ, 2011

7.ಪಾಕಿಸ್ತಾನ-72 vs ಇಂಗ್ಲೆಂಡ್, ಅಡಿಲೇಡ್, 1992

8. ಐರ್ಲೆಂಡ್-77, ಶ್ರೀಲಂಕಾ, 2007

9. ಬಾಂಗ್ಲಾದೇಶ-78 vs ದಕ್ಷಿಣ ಆಫ್ರಿಕಾ, 2011

10. ಬರ್ಮುಡಾ 78 vs ಶ್ರೀಲಂಕಾ ಪೋರ್ಟ್ ಆಫ್ ಸ್ಪೇನ್, 2007

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X