ಲಂಡನ್,ಏ.20: ಇಂಗ್ಲೆಂಡಿನ ಕೌಂಟಿ ಕ್ರಿಕೆಟ್‌ನ ಯುವ ಕ್ರಿಕೆಟರ್ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಲಂಕಾಷೈರ್ ನ ನ್ಯಾಟ್ ವಿಚ್ ತಂಡದ ಪರ ಆಡಿದ ಲಿಯಾಮ್ ಲಿವಿಂಗ್ ಸ್ಟೋನ್ ಅವರು ಏಕದಿನ ಪಂದ್ಯದಲ್ಲಿ ಬಾರಿಸಿದ ತ್ರಿಶತಕ ಹೊಸ ಇತಿಹಾಸ ಸೃಷ್ಟಿಸಿದೆ.
ನ್ಯಾಷನಲ್ ಕ್ಲಬ್ ಚಾಂಪಿಯನ್ಸ್‌ಷಿಪ್ ಟೂರ್ನಿಯಲ್ಲಿ ಕಾಲ್ಡಿ ಕ್ರಿಕೆಟ್ ಕ್ಲಬ್ ವಿರುದ್ಧ ನಡೆದ ಪಂದ್ಯದಲ್ಲಿ 21 ವರ್ಷದ ಲಿಯಾಮ್ ಲೀವಿಂಗ್ ಸ್ಟೋನ್ ಅವರು 138 ಎಸೆತಗಳಲ್ಲಿ 350 ರನ್‌ಗಳನ್ನು ಚೆಚ್ಚಿದ್ದಾರೆ.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಈ ಅದ್ಭುತ ಬ್ಯಾಟಿಂಗ್ ಶೋನಲ್ಲಿ 34 ಬೌಂಡರಿ ಹಾಗೂ 27 ಸಿಕ್ಸರ್ ಗಳನ್ನು ಲೀವಿಂಗ್ ಸ್ಟೋನ್ ಸಿಡಿಸಿದ್ದಾರೆ. [ಗೇಲ್ ಧೂಳಿಪಟ ಮಾಡಿದ ವಿಶ್ವ ದಾಖಲೆಗಳ ಪಟ್ಟಿ]

ಲೀವಿಂಗ್ ಸ್ಟೋನ್ ಬಾರಿಸಿದ ದಾಖಲೆಯ ತ್ರಿಶತಕದ ನೆರವಿನಿಂದ ನ್ಯಾಟ್ ವಿಚ್ XI 45 ಓವರ್ ಗಳಲ್ಲಿ 579/7 ಸ್ಕೋರ್ ಮಾಡಿತ್ತು. ಇದಕ್ಕೆ ಉತ್ತರವಾಗಿ ಕಾಲ್ಡಿ ತಂಡ 79ರನ್ನಿಗೆ ಆಲೌಟ್ ಆಯಿತು. ನ್ಯಾಟ್ ವಿಚ್ ತಂಡಕ್ಕೆ ದಾಖಲೆಯ 500 ರನ್ ಅಂತರದ ಜಯ ದಕ್ಕಿತು.
ಯಾವುದೇ ಮಾದರಿಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಲೀವಿಂಗ್ ಸ್ಟೋನ್ ಎನ್ನಬಹುದು. ಇದಕ್ಕೂ ಮುನ್ನ 2008ರಲ್ಲಿ ಹೈದ್ರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ 15 ವರ್ಷದ ನಿಕಿಲೇಶ್ ಸುರೇಂದ್ರನ್ ಅವರು ಭಾರತೀಯ ಶಾಲಾ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಅಜೇಯ 334 ರನ್‌ಗಳನ್ನು ಗಳಿಸಿದ್ದರು. [ಪ್ರಪ್ರಥಮ ದ್ವಿಶತಕವೀರ ಸಚಿನ್]
ಲಿಯಾಮ್ ಲೀವಿಂಗ್ ಸ್ಟೋನ್ ಹಾಗೂ ಬೆನ್ ಜಾನ್ಸನ್ ಅವರು 290 ರನ್ ಜೊತೆಯಾಟ ಕ್ಲಬ್ ಇತಿಹಾಸದ ದಾಖಲೆ ಜೊತೆಯಾಟ ಎನಿಸಿತು.
ಲೀವಿಂಗ್ ಸ್ಟೋನ್ ಭಾರತದ ವಿರುದ್ಧ ಕೂಡಾ ಆಡಿದ್ದರು. ಕಳೆದ ವರ್ಷ ಇಂಗ್ಲೆಂಡ್ ಹಾಗೂ ಭಾರತ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಗಾಯಗೊಂಡು ಪೆವಿಲಿಯನ್ ಸೇರಿದ ಮೇಲೆ ಬದಲಿ ಆಟಗಾರನಾಗಿ ಲೀವಿಂಗ್ ಸ್ಟೋನ್ ಫೀಲ್ಡ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು (ಒನ್ ಇಂಡಿಯಾ ಸುದ್ದಿ)