ತ್ರಿಪುರಾ ಪರ ದೇಶೀಯ ಕ್ರಿಕೆಟ್ ಆಡಲು ಸಹಿ ಮಾಡಿದ ವೃದ್ದಿಮಾನ್ ಸಾಹಾ: 15 ವರ್ಷಗಳ ಬೆಂಗಾಲ್ ತಂಡಕ್ಕೆ ಗುಡ್‌ಬೈ

ಇತ್ತೀಚೆಗಷ್ಟೇ ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ದಿಮಾನ್ ಸಾಹಾ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್‌ನಿಂದ ನಿರಾಕ್ಷೇಪಣಾ ಪ್ರಮಾಣಪತ್ರ(ಎನ್‌ಒಸಿ) ಪಡೆದಿದ್ದು, ಇನ್ಮುಂದೆ ತ್ರಿಪುರಾ ಪರ ಆಡಲು ಸಜ್ಜಾಗಿದ್ದಾರೆ. ಈ ಕುರಿತಾಗಿ ಸಾಹಾ 2022-23ರ ಸೀಸನ್‌ನಲ್ಲಿ ತ್ರಿಪುರ ಪರ ಒಪ್ಪಂದಕ್ಕೆ ಸಹಿ ಮಾಡಿದ್ದು, ತಂಡದ ಮೆಂಟರ್ ಹಾಗೂ ಆಟಗಾರನಾಗಿ ಆಡಲಿದ್ದಾರೆ.
ಇದೇ ತಿಂಗಳು ಜುಲೈ 2ರಂದು ಬೆಂಗಾಲ್ ಕ್ರಿಕೆಟ್‌ನಿಂದ ಸಾಹಾ ಎನ್‌ಒಸಿ ಪಡೆದಿದ್ದರು. ಈ ಮೂಲಕ ತಮ್ಮ 15 ವರ್ಷಗಳ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ನಡುವಿನ ಸಂಬಂಧಕ್ಕೆ ಗುಡ್‌ಬೈ ಹೇಳಿದರು.

37 ವರ್ಷದ ಸಾಹಾ, ತ್ರಿಪುರ ತಂಡದ ನಾಯಕನಾಗಿ ಆಯ್ಕೆ
ಪ್ರಸ್ತುತ ವರ್ಷದ ದೇಶೀಯ ಕ್ರಿಕೆಟ್ ಆಡಲು ತ್ರಿಪುರಗೆ ಸಹಿ ಮಾಡಿರುವ ವೃದ್ದಿಮಾನ್ ಸಾಹಾ ತಂಡದ ನಾಯಕನಾಗಿಯೂ ಸಹ ಆಯ್ಕೆಯಾಗಿದ್ದಾರೆ. ತಂಡವನ್ನ ಮೆಂಟರ್ ಆಗಿಯೂ ಮುಂದುವರಿದಿರುವ ಸಾಹಾ ಯುವ ತಂಡವನ್ನ ಮುನ್ನಡೆಸಲಿದ್ದಾರೆ.
ಗಮನಾರ್ಹವಾಗಿ, 2021-22 ರ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ಗಿಂತ ಮೊದಲು ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್‌ನ ಅಧಿಕಾರಿಗಳಿಂದ ಬಂದಂತಹ ಹೇಳಿಕೆಗಳಿಂದ ನೊಂದ ಬಳಿಕ ಸಹಾ ತಮ್ಮ ಎನ್‌ಒಸಿಯನ್ನು ಕೇಳಿದ್ದರು.

ರಣಜಿ ಟ್ರೋಫಿಯಿಂದ ಹಿಂದೆ ಸರಿದಿದ್ದರು
ಬಂಗಾಳ ತಂಡವನ್ನು ಪ್ರತಿನಿಧಿಸುತ್ತಿದ್ದ ಅವರು ಕಳೆದ ರಣಜಿ ಋತುವಿನಲ್ಲಿ ದೂರ ಉಳಿಯಲು ಬಯಸಿದ್ದರು. ಟೀಂ ಇಂಡಿಯಾಗೆ ಸಹಾ ಅವರ ಸೇವೆ ಅಗತ್ಯವಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾವಿಸಿರುವ ಹಿನ್ನೆಲೆಯಲ್ಲಿ ಸಾಹಾ ಈ ನಿರ್ಧಾರ ಕೈಗೊಂಡಿದ್ದರು. ಆದ್ರೆ ಇದನ್ನ ತಪ್ಪಾಗಿ ಭಾವಿಸಿದ ಸಿಎಬಿ ಟೀಕೆಗಳು ಸಾಹಾ ಅವರನ್ನ ರಾಜ್ಯದ ತಂಡದಿಂದ ಹೊರಬರುವಂತೆ ಮಾಡಿತು.
ಮತ್ತೊಮ್ಮೆ ಕೆಟ್ಟದಾಗಿ ಔಟಾದ ವಿರಾಟ್ ಕೊಹ್ಲಿ: ಇನ್ನೆಷ್ಟು ಚಾನ್ಸ್ ಕೊಡಬೇಕು ಎಂದ ನೆಟ್ಟಿಗರು!

ವಿವಾದಾತ್ಮಕ ಟ್ವೀಟ್ ಮಾಡಿದ್ದ ಸಾಹಾ
ಅನುಭವಿ ವಿಕೆಟ್ ಕೀಪರ್ ವೃದ್ದಿಮಾನ್ ಸಾಹಾ ಹಾಗೂ ಪತ್ರಕರ್ತರೊಂದಿಗಿನ ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಸಾಹಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಪತ್ರಕರ್ತನ ಬೆದರಿಕೆಯಿಂದ ಬೇಸರಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ರು, ಆದ್ರೆ ಆತನ ಹೆಸರನ್ನು ಮಾತ್ರ ಬಹಿರಂಗಪಡಿಸಿರಲಿಲ್ಲ. ಈ ಕುರಿತಾಗಿ ತುರ್ತಾಗಿ ತನಿಖೆ ನಡೆಸಬೇಕೆಂದು ಅನೇಕ ಮಾಜಿ ಕ್ರಿಕೆಟಿಗರು ಆಗ್ರಹಿಸಿದ್ದರು. ಈ ಕುರಿತು ತನಿಖೆ ನಡೆಸಿದ್ದ ಬಿಸಿಸಿಐ, ಸಾಹಾಗೆ ಬೆದರಿಕೆ ಹಾಕಿದ್ದ ಖ್ಯಾತ ಹಿರಿಯ ಪತ್ರಕರ್ತನಿಗೆ ಎರಡು ವರ್ಷಗಳ ನಿಷೇಧ ಕೂಡ ಹೇರಿತು.
ರಮೀಜ್ ರಾಜಾರನ್ನು ಐಪಿಎಲ್‌ಗೆ ಆಹ್ವಾನಿಸಿದ್ದ ಸೌರವ್ ಗಂಗೂಲಿ; ಪಾಕ್ ಕ್ರಿಕೆಟ್ ಅಧ್ಯಕ್ಷ ತಿರಸ್ಕರಿಸಿದ್ದೇಕೆ?

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಾಹಾ ರೆಕಾರ್ಡ್
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಹಾ ಅವರ ಅಂಕಿ-ಅಂಶಗಳನ್ನ ನೋಡಿದ್ರೆ, ಬಲಗೈ ಬ್ಯಾಟರ್ 122 ಪಂದ್ಯಗಳನ್ನು ಆಡಿದ್ದಾರೆ ಮತ್ತು ಸುಮಾರು 42 ರ ಅತ್ಯುತ್ತಮ ಸರಾಸರಿಯಲ್ಲಿ ಒಟ್ಟು 6423 ರನ್ ಗಳಿಸಿದ್ದಾರೆ. ಇವರ ವೃತ್ತಿಜೀವನದಲ್ಲಿ 38 ಅರ್ಧಶತಕ ಮತ್ತು 13 ಶತಕಗಳನ್ನು ಸಹ ಹೊಡೆದಿದ್ದಾರೆ. ಗರಿಷ್ಠ ಅಜೇಯ 203ರನ್ ಕಲೆಹಾಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications