
ವಿರಾಟ್ ಕೊಹ್ಲಿಯನ್ನ ಬೆಂಬಲಿಸಿದ ರಾವಲ್ಪಿಂಡಿ ಎಕ್ಸ್‌ಪ್ರೆಸ್ ಶೊಯೆಬ್ ಅಖ್ತರ್
ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ತನ್ನದೇ ಆದ ರೀತಿಯಲ್ಲಿ ವಿರಾಟ್ ಕೊಹ್ಲಿಯನ್ನು ಬೆಂಬಲಿಸಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ ತನ್ನ ಬ್ಯಾಟಿಂಗ್‌ನತ್ತ ಗಮನಹರಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.
"ನಾನು ವಿರಾಟ್ ಕೊಹ್ಲಿ ಬಗ್ಗೆ ಸಾಕಷ್ಟು ಟೀಕೆಗಳನ್ನು ಕೇಳುತ್ತಿದ್ದೇನೆ. ಅವರನ್ನು ಕೈಬಿಡಬೇಕು ಎಂದು ಹೇಳಲಾಗುತ್ತಿದೆ. ವಿರಾಟ್ ಕೊಹ್ಲಿ ಕಥೆ ಮುಗಿದಿದೆ, ಅವರ ವೃತ್ತಿಜೀವನದಲ್ಲಿ ಇನ್ನೇನೂ ಉಳಿದಿಲ್ಲ ಮತ್ತು ಅವರು ತಮ್ಮ ವೃತ್ತಿಜೀವನದಲ್ಲಿ ಹೆಚ್ಚಿನದನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಈ ರೀತಿಯ ವಿಷಯಗಳನ್ನು ಇತರರು ನನಗೆ ಹೇಳುತ್ತಿದ್ದಾರೆ.''
"ಆದ್ರೆ, ನಾನು ಅವರಿಗೆ ಹೇಳಿದೆ, ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ, ಕಳೆದ 10 ವರ್ಷಗಳಲ್ಲಿ, ಯಾವುದೇ ಶ್ರೇಷ್ಠ ಆಟಗಾರನಿದ್ದರೆ ಅದು ವಿರಾಟ್ ಕೊಹ್ಲಿ ಮಾತ್ರ. ಅವರಿಗೆ 1-2 ಕೆಟ್ಟ ವರ್ಷಗಳಿವೆ, ಅವರು ಇನ್ನೂ ರನ್ ಗಳಿಸಿದ್ದಾರೆ, ಕೇವಲ ಶತಕ ಬಂದಿಲ್ಲ'' ಎಂದು ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ವಿಂಡೀಸ್ ವಿರುದ್ಧದ ಸರಣಿಗೆ ಆತನಿಗೆ ವಿಶ್ರಾಂತಿ ನೀಡಬಾರದಿತ್ತು: ಆಕಾಶ್ ಚೋಪ್ರಾ

ಕೊಹ್ಲಿಯನ್ನ ಮಾಧ್ಯಮದ ಮುಂದೆ ಅವಮಾನಿಸದಿರಿ ಎಂದ ಅಖ್ತರ್
ವಿರಾಟ್ ಕೊಹ್ಲಿ ರನ್‌ಗಳಿಸುತ್ತಿಲ್ಲ ಎಂದ ಮಾತ್ರಕ್ಕೆ ಆತನನ್ನು ಅವಮಾನಿಸಬೇಡಿ, ಆತನೊಬ್ಬ ಲೆಜೆಂಡ್ ಎಂದು ಶೋಯೆಬ್ ಅಖ್ತರ್ ಕೊಹ್ಲಿಗೆ ಬೆಂಬಲ ನೀಡಿದ್ದಾರೆ.
"ನೀವು ಮಾಧ್ಯಮಗಳಲ್ಲಿ ವ್ಯಕ್ತಿಯನ್ನು ಅವಮಾನಿಸುತ್ತಿದ್ದೀರಿ, ಅವನನ್ನು ಅಪಖ್ಯಾತಿ ಮಾಡುವುದು ಸರಿಯಲ್ಲ, ಅವನನ್ನು ಕೈಬಿಡುವ ಬಗ್ಗೆ ಹೇಗೆ ಮಾತನಾಡುತ್ತಿದ್ದೀರಿ ಎಂದು ನನಗೆ ತಿಳಿಯುತ್ತಿಲ್ಲ?''
"ಕಪಿಲ್ ದೇವ್ ನನ್ನ ಸೀನಿಯರ್, ನಾನು ಅವರನ್ನು ಗೌರವಿಸುತ್ತೇನೆ ಮತ್ತು ಅವರು ತಮ್ಮದೇ ಆದ ಅಭಿಪ್ರಾಯವನ್ನು ಹೊಂದಿದ್ದಾರೆ. ಅವರೊಬ್ಬ ಲೆಜೆಂಡ್, ಅವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು. ಒಬ್ಬ ಶ್ರೇಷ್ಠ ಕ್ರಿಕೆಟಿಗ ಹೀಗೆ ಮಾತನಾಡಬಲ್ಲರು. ಆದ್ರೆ ವಿರಾಟ್ ಕೊಹ್ಲಿ 70 ಶತಕಗಳನ್ನು ಹೊಂದಿದ್ದಾರೆ ಮತ್ತು ಒಬ್ಬ ಶ್ರೇಷ್ಠ ಆಟಗಾರ ಮಾತ್ರ ಇಷ್ಟೊಂದು ರನ್ ಗಳಿಸಬಹುದು" ಎಂದು ಅಖ್ತರ್ ಹೇಳಿದ್ದಾರೆ.
361 ರನ್ ಟಾರ್ಗೆಟ್: ನ್ಯೂಜಿಲೆಂಡ್ ವಿರುದ್ಧ ಐರ್ಲೆಂಡ್‌ಗೆ 1ರನ್‌ಗಳ ವೀರೋಚಿತ ಸೋಲು

ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ, ಕೊಹ್ಲಿ ಬ್ಯಾಟಿಂಗ್‌ನತ್ತ ಗಮನಹರಿಸಲಿ!
"ವಿರಾಟ್ ತಮ್ಮ ಬ್ಯಾಟಿಂಗ್ ಮೇಲೆ ಗಮನ ಹರಿಸಬೇಕು, ನೀವು ಪ್ರದರ್ಶನ ನೀಡದಿದ್ದರೆ, ಏನೂ ತಪ್ಪಿಲ್ಲ. ಇವೆಲ್ಲಾ ನೀವು ದೊಡ್ಡ ಕ್ರಿಕೆಟಿಗರಾಗಲು ನಡೆಯುತ್ತಿವೆ. ನೀವು ಭಯಪಡಬಾರದು, ಏಕೆಂದರೆ ಅವರು ಕಠಿಣ ಕ್ರಿಕೆಟಿಗನ ವಿರುದ್ಧ ಹೋರಾಡುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು'' ಎಂದಿದ್ದಾರೆ.
''ನೀವು ಕ್ರೀಸ್‌ನಲ್ಲಿ ಉಳಿಯುವುದು ಮುಖ್ಯ, ನೀವು ಸಾಮಾಜಿಕ ಮಾಧ್ಯಮಗಳಿಂದ ದೂರವಿರಬೇಕು ಮತ್ತು ಟೀಕೆಗಳಿಗೆ ಗಮನ ಕೊಡಬೇಡಿ'' ಎಂದು ಅಖ್ತರ್ ಕೊಹ್ಲಿಗೆ ಸಲಹೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್, ಎರಡು ಟಿ20 ಹಾಗೂ ಎರಡು ಏಕದಿನ ಪಂದ್ಯಗಳನ್ನ ಆಡಿದ್ದು, ಮೂರನೇ ಪಂದ್ಯದಲ್ಲೂ ಆಡುವ ಭರವಸೆ ಹೊಂದಿದ್ದಾರೆ. ಆನಂತರ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ.


Click it and Unblock the Notifications
