ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಂಡೀಸ್ ವಿರುದ್ಧದ ಸರಣಿಗೆ ಆತನಿಗೆ ವಿಶ್ರಾಂತಿ ನೀಡಬಾರದಿತ್ತು: ಆಕಾಶ್ ಚೋಪ್ರಾ

Aakash chopra

ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಟಿ20 ಸರಣಿಯಲ್ಲಿ ಲೀಡಿಂಗ್ ಸ್ಪಿನ್ನರ್ ಯುಜವೇಂದ್ರ ಚಹಾಲ್‌ರನ್ನು ಹೊರಗಿಡಬಾರದಿತ್ತು ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ ಟೀಕಿಸಿದ್ದಾರೆ.

ವಿಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ 18 ಆಟಗಾರರ ತಂಡವನ್ನು ಪ್ರಕಟಿಸಲಾಗಿದ್ದು, ಕೆರಿಬಿಯನ್ ವಿರುದ್ಧ ಸರಣಿಗೆ ಯುಜವೇಂದ್ರ ಚಹಾಲ್‌ಗೆ ವಿಶ್ರಾಂತಿ ನೀಡಲಾಗಿದೆ. ಚಹಾಲ್ ಅಷ್ಟೇ ಅಲ್ಲದೆ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾರನ್ನು ಕೂಡ ಹೊರಗಿಡಲಾಗಿದೆ.

ಯುಜವೇಂದ್ರ ಚಹಾಲ್‌ಗೆ ಸತತವಾಗಿ ಕ್ರಿಕೆಟ್ ಆಡುವ ಅವಕಾಶ ನೀಡುತ್ತಿಲ್ಲ!

ಯುಜವೇಂದ್ರ ಚಹಾಲ್‌ಗೆ ಸತತವಾಗಿ ಕ್ರಿಕೆಟ್ ಆಡುವ ಅವಕಾಶ ನೀಡುತ್ತಿಲ್ಲ!

ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಮಾತನಾಡಿರುವ ಆಕಾಶ್ ಚೋಪ್ರಾ ವಿಂಡೀಸ್ ವಿರುದ್ಧ ಸರಣಿಗೆ ಚಹಾಲ್‌ಗೆ ವಿಶ್ರಾಂತಿ ನೀಡಿರುವುದನ್ನ ಪ್ರಶ್ನಿಸಿದ್ದಾರೆ.

"ನಾನು ಯುಜಿ ಚಹಾಲ್ ಅವರನ್ನು ಉಲ್ಲೇಖಿಸುತ್ತಿದ್ದೇನೆ, ಅವರು ಭಾರತಕ್ಕಾಗಿ ಒಟ್ಟು 17 ಪಂದ್ಯಗಳನ್ನು ಆಡಿದ್ದಾರೆ, 21 ರ ಸರಾಸರಿಯಲ್ಲಿ 20 ವಿಕೆಟ್‌ಗಳನ್ನು ಪಡೆದರು. ಅವರು ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ, ಆತ ಹೆಚ್ಚು ಬೌಲ್ ಮಾಡಿದಷ್ಟೂ ಒಳ್ಳೆಯದು. ಆದ್ದರಿಂದ ಅವನಿಗೆ ರಜೆ ನೀಡಬೇಡಿ, ಆತ ಇನ್ನಷ್ಟು ಕ್ರಿಕೆಟ್ ಆಡಲಿ, ಪ್ರದರ್ಶನ ಮುಂದುವರಿಯಲಿ'' ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ನನ್ನ ಪ್ರಕಾರ ಯುಜವೇಂದ್ರ ಚಹಾಲ್ ವಿಶ್ರಾಂತಿ ಕೇಳಿರುವುದಿಲ್ಲ!

ನನ್ನ ಪ್ರಕಾರ ಯುಜವೇಂದ್ರ ಚಹಾಲ್ ವಿಶ್ರಾಂತಿ ಕೇಳಿರುವುದಿಲ್ಲ!

ಯುಜವೇಂದ್ರ ಚಹಾಲ್ ಪ್ರದರ್ಶವನ್ನು ಗಮನಿಸಿದ್ರೆ, ಆತನೇ ಸ್ವತಃ ವಿಂಡೀಸ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಗೆ ವಿಶ್ರಾಂತಿ ಕೇಳಿದ್ದಾರೆ ಎಂದು ನನಗೆ ಅನಿಸುವುದಿಲ್ಲ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

"ನಿಸ್ಸಂದೇಹವಾಗಿ ಅವರು ಇಡೀ ಐಪಿಎಲ್ ಅನ್ನು ಆಡಿರುವುದರಿಂದ, ಆತ ವಿರಾಮವನ್ನು ಕೇಳುತ್ತಾನೆ ಎಂದು ನಾನು ನಂಬುವುದಿಲ್ಲ. ನಾವು ಏನನ್ನೂ ಕಲಿಯಲು ಸಾಧ್ಯವಾಗದ ಕಾರಣ ಮಾಹಿತಿಯು ಬರದಿದ್ದಾಗ ಕೇವಲ ಊಹೆಗಳಿಂದ ನಿರ್ಧರಿಸುತ್ತೇವೆ" ಎಂದು ಆಕಾಶ್ ಚೋಪ್ರಾ ಹೇಳಿದರು.

ಭಾರತ vs ಇಂಗ್ಲೆಂಡ್: ನಿರ್ಣಾಯಕ ಪಂದ್ಯಕ್ಕೆ ಅಡ್ಡಿಯಾಗಲಿದೆಯಾ ಮಳೆ?, ಪಿಚ್ ರಿಪೋರ್ಟ್ ಮಾಹಿತಿ

ಅರ್ಧಂಬರ್ದ ಅವಕಾಶ ನೀಡಬೇಡಿ ಎಂದ ಚೋಪ್ರಾ

ಅರ್ಧಂಬರ್ದ ಅವಕಾಶ ನೀಡಬೇಡಿ ಎಂದ ಚೋಪ್ರಾ

ಯುಜವೇಂದ್ರ ಚಹಾಲ್‌ ಉತ್ತಮ ಫಾರ್ಮ್‌ನಲ್ಲಿರುವಾಗ ಹೀಗೆ ಅರ್ಧಂಬರ್ದ ಅವಕಾಶ ನೀಡಬೇಡಿ ಎಂದು ಆಯ್ಕೆಗಾರರಿಗೆ ಮನವಿ ಮಾಡಿದ್ದಾರೆ. ಐರ್ಲೆಂಡ್ , ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸಂಪೂರ್ಣ ಅವಕಾಶ ನೀಡಿಲ್ಲ ಎಂದಿದ್ದರೆ.

" ನೀವು ಅವರನ್ನು ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡಿಸುತ್ತೀರಿ ಮತ್ತು T20 ಸರಣಿಗಳಲ್ಲಿ ಅಲ್ಲ; ಬದಲಿಗೆ, ನೀವು ಅವನನ್ನು ಐರ್ಲೆಂಡ್‌ನಲ್ಲಿ ಒಂದು ಪಂದ್ಯದಲ್ಲಿ, ಇಂಗ್ಲೆಂಡ್‌ನಲ್ಲಿ ಎರಡು ಪಂದ್ಯಗಳಲ್ಲಿ ಆಡಿಸಿದ್ದೀರಿ ಮತ್ತು ನಂತರ ವೆಸ್ಟ್ ಇಂಡೀಸ್‌ನಲ್ಲಿ ಯಾವುದೇ ಪಂದ್ಯವೂ ಇಲ್ಲ. ನೀವು ಅವನನ್ನು ಭಾಗವಹಿಸುವಂತೆ ಮಾಡಬೇಕೆಂದು ನಾನು ಭಾವಿಸುತ್ತೇನೆ'' ಎಂದು ಆಕಾಶ್ ಚೋಪ್ರಾ ಆಯ್ಕೆಗಾರರು ಮತ್ತು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಮನವಿ ಮಾಡಿದ್ದಾರೆ.

361 ರನ್ ಟಾರ್ಗೆಟ್‌: ನ್ಯೂಜಿಲೆಂಡ್ ವಿರುದ್ಧ ಐರ್ಲೆಂಡ್‌ಗೆ 1ರನ್‌ಗಳ ವೀರೋಚಿತ ಸೋಲು

ವೆಸ್ಟ್ ಇಂಡೀಸ್ ವಿರುದ್ಧ ಸರಣಿಯಲ್ಲಿ ಬದಲಿ ಸ್ಪಿನ್ನರ್ ಹುಡುಕಾಟ ನಡೆಯಲಿದೆ!

ವೆಸ್ಟ್ ಇಂಡೀಸ್ ವಿರುದ್ಧ ಸರಣಿಯಲ್ಲಿ ಬದಲಿ ಸ್ಪಿನ್ನರ್ ಹುಡುಕಾಟ ನಡೆಯಲಿದೆ!

ಯುಜವೇಂದ್ರ ಚಹಾಲ್ ಲಿಮಿಟೆಡ್‌ ಓವರ್ ಕ್ರಿಕೆಟ್‌ನಲ್ಲಿ ಭಾರತದ ಪ್ರಥಮ ಆಯ್ಕೆಯ ಸ್ಪಿನ್ನರ್ ಆಗಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಬ್ಯಾಕ್ ಅಪ್ ಸ್ಪಿನ್ನರ್ ಹುಡುಕಾಟ ನಡೆಯಲಿದೆ. ವ್ರಿಸ್ಟ್ ಸ್ಪಿನ್ನರ್‌ಗಳಾದ ರವಿ ಬಿಷ್ಣೋಯಿ ಮತ್ತು ಕುಲ್‌ದೀಪ್ ಯಾದವ್‌ ಯಾರು ಉತ್ತಮ ಅನ್ನುವುದನ್ನ ಆಯ್ಕೆಗಾರರು ಗಮನಿಸಲಿದ್ದು, ಟಿ20 ವಿಶ್ವಕಪ್‌ಗೆ ತಂಡವನ್ನ ರಚಿಸಲು ನೆರವಾಗಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ODI, T20 ಸರಣಿಗೆ ತಂಡವನ್ನ ಘೋಷಿಸಿದ ಇಂಗ್ಲೆಂಡ್: ಆದಿಲ್ ರಶೀದ್ ಕಂಬ್ಯಾಕ್

Shreyas Iyer ಆಯ್ಕೆಯಿಂದ ಸಂಜು ಸ್ಯಾಮ್ಸನ್ ಭವಿಷ್ಯ ಅತಂತ್ರ ಎಂದ ದೊಡ್ಡ ಗಣೇಶ್ *Cricket | OneIndia Kannada
ವೆಸ್ಟ ಇಂಡೀಸ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್‌

ವೆಸ್ಟ ಇಂಡೀಸ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್‌

ವಿಂಡೀಸ್ ವಿರುದ್ಧ ಟಿ20 ಹಾಗೂ ಏಕದಿನ ಸರಣಿಗೆ ಭಾರತ ತಂಡ
ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಆರ್ ಅಶ್ವಿನ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್ ಅವೇಶ್ ಖಾನ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

ಏಕದಿನ ತಂಡ: ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಠಾಕೂರ್, ಯುಜವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

Story first published: Saturday, July 16, 2022, 14:13 [IST]
Other articles published on Jul 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X