ಭಾರತದ ಜಿಂಬಾಬ್ವೆ ಕ್ರಿಕೆಟ್ ಟೂರ್ ಫುಲ್ ಗೈಡ್
ಬೆಂಗಳೂರು, ಜುಲೈ 08: ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ಜುಲೈ 10ರಿಂದ ತನ್ನ ಜಿಂಬಾಬ್ವೆ ಪ್ರವಾಸ ಆರಂಭಿಸಲಿದೆ. 3 ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ 2 ಟ್ವೆಂಟಿ 20 ಪಂದ್ಯಗಳನ್ನಾಡಲಿದೆ.
ನಾಯಕ ಎಂಎಸ್ ಧೋನಿ, ಟೆಸ್ಟ್ ನಾಯಕ ವಿರಾಟ್ ಕೊಹ್ಲಿ, ಸುರೇಶ್ ರೈನಾ, ರೋಹಿತ್ ಶರ್ಮ, ಶಿಖರ್ ಧವನ್ ಹಾಗೂ ಆರ್ ಅಶ್ವಿನ್ ಅವರಿಲ್ಲದ ಎರಡನೇ ದರ್ಜೆ ತಂಡವನ್ನು ಅಜಿಂಕ್ಯ ರಹಾನೆ ಮೊದಲ ಬಾರಿಗೆ ಮುನ್ನಡೆಸುತ್ತಿದ್ದಾರೆ. ಹಿರಿಯ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಸಲಹೆ ಮಾರ್ಗದರ್ಶನ ರಹಾನೆಗೆ ಸಿಗಲಿದೆ. [2015-16 ಟೀಂ ಇಂಡಿಯಾಕ್ಕೆ ಬಿಗಿ ವೇಳಾಪಟ್ಟಿ ]

ಜಿಂಬಾಬ್ವೆ ಪ್ರವಾಸದ ಟೂರ್ ಗೈಡ್ ಹೀಗಿದೆ:
ಜಿಂಬಾಬ್ವೆ ಗೆ ಬಂದಿಳಿದ 15 ಸದಸ್ಯರ ಟೀಂ ಇಂಡಿಯಾಕ್ಕೆ ಸ್ಥಳೀಯ ವಾದ್ಯಗಾರರಿಂದ ಸುಸ್ವಾಗತ ಸಿಕ್ಕಿದ್ದರ ಬಗ್ಗೆ ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಒಟ್ಟು ಪಂದ್ಯಗಳು
* 3 ಏಕದಿನ ಪಂದ್ಯ ಹಾಗೂ 2 ಟಿ20
ಪಂದ್ಯಗಳು ಯಾವಾಗ ಎಲ್ಲಿ ನಡೆಯಲಿದೆ?
* ಎಲ್ಲಾ ಪಂದ್ಯಗಳು ಹರಾರೆ ಕ್ರೀಡಾ ಕ್ಲಬ್ ಮೈದಾನದಲ್ಲೇ ನಡೆಯಲಿದೆ.

ಏಕದಿನ ಪಂದ್ಯಗಳು (12.30 IST)
* ಜುಲೈ 10 (ಶುಕ್ರವಾರ); ಜುಲೈ 12(ಭಾನುವಾರ); ಜುಲೈ 14(ಮಂಗಳವಾರ)
ಟಿ20 (4.30 PM IST) [ರಾಹುಲ್ ದ್ರಾವಿಡ್ ಕೋಚಿಂಗ್ ಮಾಡಲು ತಂಡ ಪ್ರಕಟ]
* ಜುಲೈ 17 (ಶುಕ್ರವಾರ); ಜುಲೈ 19 (ಭಾನುವಾರ)
ಭಾರತದಲ್ಲಿ ಯಾವ ವಾಹಿನಿಯಲ್ಲಿ ಪ್ರಸಾರ?
* ಟೆನ್ ಸ್ಫೋರ್ಟ್ಸ್/ ಟೆನ್ ಕ್ರಿಕೆಟ್ ನಲ್ಲಿ ಎಲ್ಲಾ ಪಂದ್ಯಗಳು ಪ್ರಸಾರ
* ಐಸಿಸಿ ಹೊಸ ನಿಯಮಗಳ ಅಡಿಯಲ್ಲಿ ಭಾರತದ ಮೊದಲ ಸರಣಿ ಇದಾಗಲಿದೆ.[ಐಸಿಸಿ ಹೊಸ ನಿಯಮ ಇಲ್ಲಿ ಓದಿ]
* ಅಜಿಂಕ್ಯ ರಹಾನೆ ಭಾರತದ ಏಕದಿನ ಕ್ರಿಕೆಟ್ ತಂಡದ 23ನೇ ನಾಯಕರಾಗಿ ಕಣಕ್ಕಿಳಿಯಲಿದ್ದಾರೆ.
ಈ ಹಿಂದಿನ ಮುಖಾಮುಖಿ
* ಐಸಿಸಿ ವಿಶ್ವಕಪ್ 2015ರಲ್ಲಿ ಆಕ್ಲೆಂಡ್ ನಲ್ಲಿ ಕೊನೆಯಬಾರಿಗೆ ಮುಖಾಮುಖಿ, ಭಾರತಕ್ಕೆ 6ವಿಕೆಟ್ ಗಳಿಂದ ಜಯ.
ಈ ಹಿಂದಿನ ಸರಣಿ
* 2013ರಲ್ಲಿ ನಡೆದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ತಂಡ 5-0 ಅಂತರದ ಸರಣಿ ಜಯ ದಾಖಲಿಸಿತ್ತು.
ಒಟ್ಟಾರೆ ಬಲಾಬಲ
* ಏಕದಿನ ಸರಣಿ (57 ಪಂದ್ಯಗಳು 1983 ರಿಂದ 2015) ಭಾರತಕ್ಕೆ 45ರಲ್ಲಿ ಜಯ, ಜಿಂಬಾಬ್ವೆ 10;2 ಪಂದ್ಯ ಟೈ
* ಟಿ20 ಪಂದ್ಯಗಳು (2010ರಲ್ಲಿ 2 ಪಂದ್ಯಗಳು) ಭಾರತಕ್ಕೆ 2ರಲ್ಲೂ ಜಯ.
ತಂಡ ಇಂತಿದೆ: ಅಜಿಂಕ್ಯ ರಹಾನೆ (ನಾಯಕ), ಮುರಳಿ ವಿಜಯ್, ಅಂಬಟಿ ರಾಯುಡು, ಮನೋಜ್ ತಿವಾರಿ, ಕೇದಾರ್ ಜಾಧವ್, ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಹರ್ಭಜನ್ ಸಿಂಗ್, ಅಕ್ಷರ್ ಪಟೇಲ್, ಕರಣ್ ಶರ್ಮ(ಗಾಯಳುವಾಗಿ ಪ್ರವಾಸದಿಂದ ಹೊರಕ್ಕೆ), ಧವಳ್ ಕುಲಕರ್ಣಿ, ಸ್ಟುವರ್ಟ್ ಬಿನ್ನಿ, ಭುವನೇಶ್ವರ್ ಕುಮಾರ್, ಮೋಹಿತ್ ಶರ್ಮ ಹಾಗೂ ಸಂದೀಪ್ ಶರ್ಮ.
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications