"ಧೋನಿ ರಾವಣ ಇದ್ದಂತೆ, ಅವನು ನಿರ್ಗತಿಕನಾಗಲಿ"
ನವದೆಹಲಿ, ಏ.7: ಇಂಡಿಯನ್ ಪ್ರಿಮಿಯರ್ ಲೀಗ್ 8ನೇ ಆವೃತ್ತಿಯ ದುಬಾರಿ ಆಟಗಾರ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಮತ್ತೊಮ್ಮೆ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಮೇಲೆ ಕಿಡಿಕಾರಿದ್ದಾರೆ. ಧೋನಿ ರಾಮಾಯಣದ ರಾಕ್ಷಸ ರಾವಣನಿದ್ದಂತೆ ಎಂದು ಸಿಂಗ್ ಹೇಳಿದ್ದಾರೆ.
ವಿಶ್ವಕಪ್ 2015 ಟೂರ್ನಿಗೆ ಯುವರಾಜ್ ಸಿಂಗ್ ಆಯ್ಕೆಯಾಗದಿದ್ದಾಗ ನೊಂದ ಯೋಗರಾಜ್ ಅವರು ಇದೇ ರೀತಿ ಧೋನಿ ವಿರುದ್ಧ ಹೇಳಿಕೆ ನೀಡಿದ್ದರು. ಭಾರತ ಕ್ರಿಕೆಟ್ ನ ಮಾಜಿ ಟೆಸ್ಟ್ ಆಟಗಾರ ಯೋಗರಾಜ್ ಅವರು ಇಂಡಿಯಾ ನ್ಯೂಸ್ ಎಂಬ ಹಿಂದಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮತ್ತೊಮ್ಮೆ ಧೋನಿ ವಿರುದ್ಧ ಹರಿಹಾಯ್ದಿದ್ದಾರೆ. [ಅಭಿಮಾನಿಗಳಿಗೆ ಅಗತ್ಯವಾದ ಮಾರ್ಗದರ್ಶಿ]
ಧೋನಿ ಅತ್ಯಂತ ಕುತಂತ್ರಿ, ಧೋನಿ ಮಾಡಿದ ಪಾಪದ ಕಾರ್ಯಗಳಿಗೆ ಪ್ರಾಯಶ್ಚಿತ ಅನುಭವಿಸಲಿದ್ದಾನೆ. ಒಂದಲ್ಲ ಒಂದು ದಿನ ನಿರ್ಗತಿಕನಾಗಿ ಭಿಕ್ಷೆ ಬೇಡುವ ಸ್ಥಿತಿ ತಲುಪುತ್ತಾನೆ ಎಂದು ಯೋಗರಾಜ್ ಹೇಳಿದರು. [8 ತಂಡಗಳ ನೂರೆಂಟು ಆಟಗಾರರು]

ಎಂಎಸ್ ಧೋನಿಯನ್ನು ಮಾಧ್ಯಮದವರು 'ಕ್ರಿಕೆಟ್ ಜಗತ್ತಿನ ದೇವರು' ಎಂದು ಹಾಡಿ ಹೊಗಳಲು ಯತ್ನಿಸುತ್ತಿವೆ. ನಾನೇನಾದರೂ ಪತ್ರಕರ್ತನಾಗಿದ್ದರೆ ಧೋನಿ ಕೆನ್ನೆಗೆ ಬಾರಿಸುತ್ತಿದ್ದೆ ಎಂದು ಯೋಗರಾಜ್ ಬುಸುಗುಟ್ಟಿದ್ದಾರೆ. [47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್]|
ಸಂದರ್ಶನದುದ್ದಕ್ಕೂ 2011ರಲ್ಲಿ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ನಾಯಕ ಧೋನಿ ಅವರಿಗೆ ಯೋಗರಾಜ್ ಶಾಪ ಹಾಕಿದ್ದಾರೆ. [ಐಪಿಎಲ್ 8 ಮ್ಯಾಚ್ ಪುಕ್ಶೇಟಿ ನೋಡ್ರಿ!]
ಏ.8ರಿಂದ ಆರಂಭವಾಗುವ ಇಂಡಿಯನ್ ಪ್ರಿಮಿಯರ್ ಲೀಗ್ ನ 8ನೇ ಆವೃತ್ತಿ ಪಂದ್ಯಗಳಿಗಾಗಿ ಯುವರಾಜ್ ಹಾಗೂ ಧೋನಿ ತಯಾರಿ ನಡೆಸಿದ್ದಾರೆ. ಯುವರಾಜ್ ಸಿಂಗ್ ಅವರನ್ನು 16 ಕೋಟಿ ರು ನೀಡಿ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಸೇರಿಸಿಕೊಂಡಿತ್ತು. ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ನ ನಾಯಕರಾಗಿ ಈ ಬಾರಿಯೂ ತಂಡವನ್ನು ಮುನ್ನಡೆಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications