ಶೋಯೆಬ್ ಡಬ್ ಸ್ಮಾಶ್ ಗೆ ಯುವಿ ಸ್ಟೆಪ್ ಡ್ಯಾನ್ಸ್ ಉತ್ತರ
ಬೆಂಗಳೂರು ಜುಲೈ 27: ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಕ್ರಿಕೆಟರ್ ಶೋಯೆಬ್ ಮಲ್ಲಿಕ್ ದಂಪತಿ ಡಬ್ ಸ್ಮಾಶ್ ವಿಡಿಯೋ ಮಾಡಿ ಹೆಜ್ಜೆ ಹಾಕಿ ಸಂಭ್ರಮಿಸಿದ್ದು, ಅದಕ್ಕೆ ಯುವರಾಜ್ ಸಿಂಗ್ ಪ್ರತಿಕ್ರಿಯಿಸಿದ್ದು ನಿಮಗೆಲ್ಲ ತಿಳಿದಿದೆ. ಗೊತ್ತಿಲ್ಲದಿದ್ದರೆ ಸುದ್ದಿ ಇಲ್ಲಿದೆ ಓದಿಕೊಂಡು ಈ ಪುಟಕ್ಕೆ ಬನ್ನಿ...
ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯೆಬ್ ಮಲ್ಲಿಕ್ ಅವರಿಗೆ ತಮ್ಮ ತಂಡ ಶ್ರೀಲಂಕಾ ವಿರುದ್ದದ ಏಕ ದಿನ ಪಂದ್ಯದಲ್ಲಿ ಗೆದ್ದ ಸಂಭ್ರಮ, ಭಾರತದ ಹೆಮ್ಮೆಯ ಪುತ್ರಿ ಸಾನಿಯಾ ಮಿರ್ಜಾ ಅವರಿಗೆ ವಿಂಬಲ್ಡನ್ ಡಬಲ್ಸ್ ಕಿರೀಟ ಧರಿಸಿದ ಸಂಭ್ರಮ ಇಬ್ಬರನ್ನು ಕುಣಿಯುವಂತೆ ಮಾಡಿತ್ತು. [ಡಬ್ ಸ್ಮಾಶ್ ಗೆ ಟಾಂಗ್ ಕೊಡಲು ಬಂದ ಡುಬಾಕ್ ಸ್ಮಾಶ್]
ಬಾಲಿವುಡ್ ನ 'ಅಭಿ ತೋ ಪಾರ್ಟಿ ಶುರು ಹೋಯಿ ಹೈ' ಹಾಡಿಗೆ ಹೆಜ್ಜೆ ಹಾಕಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಯುವರಾಜ್ ಸಿಂಗ್ ಪ್ರತಿಕ್ರಿಯಿಸಿ, ನೀವಿಬ್ಬರು ಒಳ್ಳೆ ಸಾಧಕರು ಆದರೆ, ಕೆಟ್ಟ ಡ್ಯಾನ್ಸರ್ ಎಂದು ತಮಾಷೆ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಶೋಯೆಬ್ ಮಲ್ಲಿಕ್ 'ಮೈದಾನಕ್ಕೆ ಬಾ' ಎಂದು ಕರೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಯುವರಾಜ್ ಸಿಂಗ್ ಸ್ಟೆಪ್ ಡ್ಯಾನ್ಸ್ ಹಾಕಿದ್ದಾರೆ. ಯುವರಾಜ್ ಸಿಂಗ್ ಡ್ಯಾನ್ಸ್ ಸ್ಟೆಪ್ ಹಾಗೂ ಟ್ವೀಟ್ ಗೆ ಬಂದ ಪ್ರತಿಕ್ರಿಯೆಗಳು ಇಲ್ಲಿವೆ...

ಯುವರಾಜ್ ಹಾಕಿದ ಸ್ಟೆಪ್
ಖ್ಯಾತ ಪಾಪ್ ಗಾಯಕ ಮೈಕೆಲ್ ಜಾನ್ಸನ್ ರವರ 'ಬಿಲ್ಲಿ ಜೀನ್' ಗೆ ಮೂನ್ ವಾಕ್ ಮಾಡಿ ಅದನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ.
ಯುವರಾಜ್ ಹಾಕಿದ ಸ್ಟೆಪ್ ಗೆ ಪ್ರತಿಕ್ರಿಯೆ
ಯುವರಾಜ್ ಸಿಂಗ್ ಡ್ಯಾನ್ಸ್ ಗೆ ಪ್ರತಿಕ್ರಿಯಿಸಿರುವ ಅಭಿಮಾನಿಯೊಬ್ಬರು ನಿಮ್ಮ ಡ್ಯಾನ್ಸ್ ಗಿಂತ ಶೋಯೆಬ್ ಡ್ಯಾನ್ಸ್ 1000 ಪಾಲು ಉತ್ತಮ ಎಂದಿದ್ದಾರೆ.
ಕ್ರಿಸ್ ಗೇಲ್ ಸ್ಟೆಪ್ ಹಾಕಿದ್ದು ಹೀಗೆ
ಕ್ರಿಸ್ ಗೇಲ್ ಸ್ಟೆಪ್ ಹಾಕಿದ್ದು ಹೀಗೆ, ಏಂಜಾಯ್ ಮಾಡೋದು ಅಂದ್ರೆ ಹೀಗೆ
ಸಾನಿಯಾ-ಶೋಯೆಬ್ ಡಬ್ ಸ್ಮಾಶ್ ಜನಪ್ರಿಯತೆ
ಸಾನಿಯಾ-ಶೋಯೆಬ್ ಡಬ್ ಸ್ಮಾಶ್ ಜನಪ್ರಿಯವಾಗಿದೆ. ಈ ಸಮಯಕ್ಕೆ 4,982 ಸಲ ರೀ ಟ್ವೀಟ್ ಹಾಗೂ 8,377 ಬಾರಿ ಫೇವರೀಟ್ ಆಗಿದೆ. ಇದಕ್ಕೆ ಯುವರಾಜ್ ನೀಡಿದ ಪ್ರತಿಕ್ರಿಯೆ ಟ್ವೀಟ್ ಕೂಡಾ 795 ಬಾರಿ ರೀ ಟ್ವೀಟ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications