For Quick Alerts
ALLOW NOTIFICATIONS  
For Daily Alerts
 

Ind vs Zim 1st ODI: ಹೆಡ್‌ ಟು ಹೆಡ್ ರೆಕಾರ್ಡ್‌, ಆಟಗಾರರು ತಲುಪಲಿರುವ ಮೈಲಿಗಲ್ಲು

India vs Zimbabwe

ವೆಸ್ಟ್ ಇಂಡೀಸ್‌ ಏಕದಿನ ಹಾಗೂ ಟಿ20 ಸರಣಿ ಗೆದ್ದು ಬೀಗಿದ ಟೀಂ ಇಂಡಿಯಾ, ಮತ್ತೊಂದು ಆಫ್ರಿಕನ್ ರಾಷ್ಟ್ರ ಜಿಂಬಾಬ್ವೆ ಕಾಲಿಟ್ಟಿದೆ. ಆಗಸ್ಟ್ 18ರಂದು ಭಾರತ ಮತ್ತು ಜಿಂಬಾಬ್ವೆ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ಮುನ್ನಡೆಯಲಿರುವ ಭಾರತ ತಂಡದಲ್ಲಿ ಸ್ಟಾರ್ ಆಟಗಾರರು ವಿಶ್ರಾಂತಿ ಪಡೆದಿದ್ದು, ಯುವ ಆಟಗಾರರ ಸಮ್ಮಿಶ್ರಣವಿದೆ. ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತವು ತನ್ನ ಗೆಲುವಿನ ಓಟ ಮುಂದುವರಿಸುವ ಲೆಕ್ಕಾಚಾರದಲ್ಲಿದೆ.

ಲಿಮಿಟೆಡ್ ಓವರ್‌ ಕ್ರಿಕೆಟ್‌ನಲ್ಲಿ ಭಾರತದ ಪಾರುಪತ್ಯ

ಲಿಮಿಟೆಡ್ ಓವರ್‌ ಕ್ರಿಕೆಟ್‌ನಲ್ಲಿ ಭಾರತದ ಪಾರುಪತ್ಯ

ಲಿಮಿಟೆಡ್‌ ಓವರ್‌ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ವಿಶ್ವ ಅಗ್ರ ಕ್ರಿಕೆಟ್ ರಾಷ್ಟ್ರಗಳಲ್ಲಿ ಒಂದಾಗಿದೆ. 2022ರಲ್ಲಿ ಭಾರತ 33 ಲಿಮಿಟೆಡ್‌ ಓವರ್‌ ಪಂದ್ಯಗಳಲ್ಲಿ 24 ಪಂದ್ಯದಲ್ಲಿ ಜಯ ಸಾಧಿಸಿದೆ. ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿ, ವೆಸ್ಟ್ ಇಂಡೀಸ್‌ನಲ್ಲಿ ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಎದುರಾಳಿಯನ್ನ ವೈಟ್ ವಾಶ್ ಮಾಡಿದ ಬಳಿಕ ಭಾರತ ಜಿಂಬಾಬ್ವೆ ವಿರುದ್ಧ ಕಾದಾಟಕ್ಕೆ ಸಾಕ್ಷಿಯಾಗಿದೆ.

ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಗೆದ್ದ ಬಳಿಕ ಭಾರತ ವೆಸ್ಟ್ ಇಂಡೀಸ್‌ನಲ್ಲಿ ಏಕದಿನ ಸರಣಿಯನ್ನ 3-0 ಅಂತರದಲ್ಲಿ ಗೆದ್ರೆ, ಟಿ20 ಸರಣಿಯನ್ನು 4-1 ಅಂತರದಲ್ಲಿ ಜಯ ಸಾಧಿಸಿತು. ಮತ್ತೊಂದೆಡೆ ಜಿಂಬಾಬ್ವೆ ತಂಡವು ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಏಕದಿನ ಹಾಗೂ ಟಿ20 ಸರಣಿ ಎರಡನ್ನೂ ಗೆದ್ದಿದೆ.

ಫೆಬ್ರವರಿಯಲ್ಲಿ ಕೊನೆಯದಾಗಿ ಆಡಿರುವ ಕೆ.ಎಲ್ ರಾಹುಲ್

ಫೆಬ್ರವರಿಯಲ್ಲಿ ಕೊನೆಯದಾಗಿ ಆಡಿರುವ ಕೆ.ಎಲ್ ರಾಹುಲ್

ಐಪಿಎಲ್ 2022ರ ಸೀಸನ್‌ಗೂ ಮುನ್ನ ಫೆಬ್ರವರಿಯಲ್ಲಿ ಟೀಂ ಇಂಡಿಯಾ ಪರ ಆಡಿದ್ದ ಕೆ.ಎಲ್ ರಾಹುಲ್ ಬಳಿಕ ಅನೇಕ ಕ್ರಿಕೆಟ್ ಸರಣಿಗಳನ್ನ ಮಿಸ್ ಮಾಡಿಕೊಂಡಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಇದೀಗ ತಂಡವನ್ನ ಮುನ್ನಡೆಸುವ ಜವಾಬ್ದಾರಿ ಹೊಂದಿದ್ದಾರೆ. ರೋಹಿತ್ ಶರ್ಮಾ ಜೊತೆಗೆ ಕೊಹ್ಲಿ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿರಂತಹ ಪ್ರಮುಖ ಸ್ಟಾರ್‌ ಆಟಗಾರರು ತಂಡದಿಂದ ಹೊರಗುಳಿದಿದ್ದಾರೆ.

ಏಷ್ಯಾಕಪ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದವರು: ಶ್ರೀಲಂಕಾ ಆಟಗಾರರ ದರ್ಬಾರ್; ಒಬ್ಬನೇ ಭಾರತೀಯ!

ಶಿಖರ್ ಧವನ್ ಜೊತೆಗೆ ಕೆ.ಎಲ್ ರಾಹುಲ್ ಓಪನಿಂಗ್ ಬ್ಯಾಟಿಂಗ್ ಮಾಡಲಿದ್ದು, ಶುಭಮನ್ ಗಿಲ್‌ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು. ಜೊತೆಗೆ ರಾಹುಲ್ ತ್ರಿಪಾಠಿ ಭಾರತದ ಪರ ಚೊಚ್ಚಲ ಪಂದ್ಯವನ್ನಾಡಲು ಸಿದ್ಧರಾಗಿದ್ದಾರೆ.

ಜಿಂಬಾಬ್ವೆ ಪರ ಭರ್ಜರಿ ಫಾರ್ಮ್‌ನಲ್ಲಿರುವ ಸಿಕಂದರ್ ರಾಜಾ

ಜಿಂಬಾಬ್ವೆ ಪರ ಭರ್ಜರಿ ಫಾರ್ಮ್‌ನಲ್ಲಿರುವ ಸಿಕಂದರ್ ರಾಜಾ

ಜಿಂಬಾಬ್ವೆ ಪರ ಸಿಕಂದರ್ ರಾಜಾ ಭರ್ಜರಿ ಫಾರ್ಮ್‌ನಲ್ಲಿದ್ದು ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಗರಿಷ್ಠ ರನ್‌ಕಲೆಹಾಕಿದ ಬ್ಯಾಟರ್ ಆಗಿದ್ದಾರೆ. ಬಾಂಗ್ಲಾದೇಶ ವಿರುದ್ಧ ಮೂರು ಏಕದಿನ ಪಂದ್ಯಗಳಲ್ಲಿ ಬಲಗೈ ಬ್ಯಾಟರ್ 252 ರನ್ ಕಲೆಹಾಕಿದ್ದಾರೆ. ಇದರಲ್ಲಿ ಎರಡು ಸೆಂಚುರಿ ಸಹ ಸೇರಿದ್ದು, ಗೆಲುವಿಗೆ ಕಾರಣವಾಗಿದೆ.

ಬ್ಯಾಟಿಂಗ್ ಅಷ್ಟೇ ಅಲ್ಲದೆ ಸಿಕಂದರ್ ರಾಜಾ ಕೂಡ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದು, ಐದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಹ್ಲಿ, ಧೋನಿಗೆ ತನ್ನನ್ನು ಹೋಲಿಸಿಕೊಂಡ ಜೆಮಿಮಾ ರೋಡ್ರಿಗಸ್‌: ಟ್ವೀಟ್ ವೈರಲ್

ಭಾರತ-ಜಿಂಬಾಬ್ವೆ ಹೆಡ್ ಟು ಹೆಡ್ ರೆಕಾರ್ಡ್‌

ಭಾರತ-ಜಿಂಬಾಬ್ವೆ ಹೆಡ್ ಟು ಹೆಡ್ ರೆಕಾರ್ಡ್‌

ಜಿಂಬಾಬ್ವೆ ಮತ್ತು ಭಾರತ ತಂಡಗಳು ಇದುವರೆಗೆ 63 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಜಿಂಬಾಬ್ವೆ ಕೇವಲ 10 ಪಂದ್ಯಗಳಲ್ಲಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಭಾರತ 51 ಪಂದ್ಯಗಳಲ್ಲಿ ಗೆಲುವಿನ ಗೆರೆ ದಾಟಿದ್ದು, ಎರಡು ಪಂದ್ಯಗಳು ಟೈನಲ್ಲಿ ಅಂತ್ಯಗೊಂಡಿವೆ.

ಇನ್ನು ಜಿಂಬಾಬ್ವೆಯಲ್ಲಿ ನಡೆದ 23 ಪಂದ್ಯಗಳಲ್ಲಿ ಆತಿಥೇಯ ತಂಡವು ಕೇವಲ ನಾಲ್ಕು ಬಾರಿ ಮಾತ್ರ ಪಂದ್ಯ ಜಯಿಸಿದ್ದು, ಉಳಿದಂತೆ 19 ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿದೆ.

ಆಟಗಾರರು ತಲುಪಲಿರುವ ಪ್ರಮುಖ ಮೈಲಿಗಲ್ಲುಗಳು

ಆಟಗಾರರು ತಲುಪಲಿರುವ ಪ್ರಮುಖ ಮೈಲಿಗಲ್ಲುಗಳು

1 - ODIಗಳಲ್ಲಿ 50 ಕ್ಯಾಚ್‌ಗಳನ್ನು ಪೂರ್ಣಗೊಳಿಸಲು ರೆಗಿಸ್ ಚಕಬ್ವಾ (49) ಗೆ ಒಂದು ಕ್ಯಾಚ್ ಅಗತ್ಯವಿದೆ.

17 - ಸಿಕಂದರ್ ರಜಾ (3483) ODIಗಳಲ್ಲಿ 3500 ರನ್ ತಲುಪಲು 17 ರನ್ ಅಗತ್ಯವಿದೆ.

7 - ಶಿಖರ್ ಧವನ್ (6493) 50 ಓವರ್‌ಗಳ ಫಾರ್ಮೆಟ್‌ನ್ಲಲಿ 6500 ರನ್‌ಗಳನ್ನು ತಲುಪಲು ಏಳು ರನ್‌ಗಳು ಬಾಕಿ ಇದೆ.

2 - ಸಿಕಂದರ್ ರಜಾ (48) ಅವರು ODI ಕ್ರಿಕೆಟ್‌ನಲ್ಲಿ 50 ಕ್ಯಾಚ್‌ಗಳನ್ನು ಪೂರ್ಣಗೊಳಿಸಲು ಎರಡು ಕ್ಯಾಚ್‌ಗಳ ಅಂತರವಿದೆ.

3 - ಅಕ್ಷರ್ ಪಟೇಲ್ (47) ಏಕದಿನ ಪಂದ್ಯಗಳಲ್ಲಿ 50 ವಿಕೆಟ್‌ಗಳನ್ನು ತಲುಪಲು ಮೂರು ವಿಕೆಟ್‌ಗಳಷ್ಟೇ ಬಾಕಿಯಿದೆ.

2 - ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಬೌಂಡರಿಗಳನ್ನು ಗಳಿಸಲು ಶುಭಮನ್ ಗಿಲ್ (98) ಅವರಿಗೆ ಎರಡು ಬೌಂಡರಿಗಳ ಅಗತ್ಯವಿದೆ.

2 - ಕೆ.ಎಲ್ ರಾಹುಲ್ (598) ಮೂರು ಫಾರ್ಮೆಟ್‌ನಿಂದ 600 ಬೌಂಡರಿಗಳನ್ನು ತಲುಪಲು ಎರಡು ಬೌಂಡರಿಗಳ ಅಗತ್ಯವಿದೆ.

Story first published: Wednesday, August 17, 2022, 18:14 [IST]
Other articles published on Aug 17, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+