ಕೊಹ್ಲಿ, ಧೋನಿಗೆ ತನ್ನನ್ನು ಹೋಲಿಸಿಕೊಂಡ ಜೆಮಿಮಾ ರೋಡ್ರಿಗಸ್‌: ಟ್ವೀಟ್ ವೈರಲ್

ಭಾರತ ಮಹಿಳಾ ಕ್ರಿಕೆಟ್‌ನ ಮಧ್ಯಮ ಕ್ರಮಾಂಕದ ಬ್ಯಾಟರ್ ಜೆಮಿಮಾ ರೋಡ್ರಿಗಸ್ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್‌ನಿಂದ ಫೋಟೋವೊಂದನ್ನ ಶೇರ್ ಮಾಡಿದ್ದು, ಸ್ವತಃ ತನ್ನನ್ನು ಲೆಜೆಂಡರಿ ಬ್ಯಾಟರ್ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡಿದ್ದಾರೆ.

ಭಾರತ ಕಂಡಂತಹ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬಾತ ಮಹೇಂದ್ರ ಸಿಂಗ್ ಧೋನಿ, ನಾಯಕತ್ವ ಅಷ್ಟೇ ಅಲ್ಲದೆ ಆಟಗಾರನಾಗಿಯು ಮಿಂಚಿದ್ದಾರೆ. ಬ್ಯಾಟಿಂಗ್‌ನಲ್ಲಿ ಸಹಸ್ರಾರು ರನ್‌ ಕಲೆಹಾಕಿದ್ದಷ್ಟೇ ಅಲ್ಲದೆ ವಿಕೆಟ್ ಹಿಂಬಂದಿಯಲ್ಲಿಯೂ ಮ್ಯಾಜಿಕ್ ಆಟವಾಡಿದ್ದಾರೆ. ವಿಶ್ವದ ಫಾಸೆಸ್ಟ್ ಸ್ಟಂಪರ್ ಆಗಿರುವ ಮಾಹಿ ಮೂರು ಐಸಿಸಿ ಟ್ರೋಪಿಗಳನ್ನ ಗೆದ್ದಿರುವ ಏಕೈಕ ನಾಯಕರಾಗಿದ್ದಾರೆ.

ಮೂರು ಟ್ರೋಫಿಗಳನ್ನ ಗೆದ್ದಿರುವ ಏಕೈಕ ನಾಯಕ ಧೋನಿ

ಮೂರು ಟ್ರೋಫಿಗಳನ್ನ ಗೆದ್ದಿರುವ ಏಕೈಕ ನಾಯಕ ಧೋನಿ

ಭಾರತ ಕಂಡಂತಹ ಅತ್ಯಂತ ಯಶಸ್ವಿ ನಾಯಕ ಎಂದೇ ಕರೆಯಲ್ಪಡುವ ಮಹೇಂದ್ರ ಸಿಂಗ್ ಧೋನಿ, ಭಾರತಕ್ಕಷ್ಟೇ ಅಲ್ಲದೆ ಇಡೀ ವಿಶ್ವದಲ್ಲಿಯೇ ಶ್ರೇಷ್ಟ ನಾಯಕರ ಸಾಲಿನಲ್ಲಿದ್ದಾರೆ. ಅದ್ರಲ್ಲೂ ಮೂರು ಐಸಿಸಿ ಟ್ರೋಫಿಗಳನ್ನ ಗೆದ್ದಿರುವ ವಿಶ್ವದ ಏಕೈಕ ನಾಯಕ ಎಂಬ ಸಾಧನೆ ಹೊಂದಿದ್ದಾರೆ.

2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್, 2013ರಲ್ಲಿ ಚಾಂಪಿಯನ್ ಟ್ರೋಫಿ ಗೆದ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್, ವಿಂಡೀಸ್‌ ಕ್ಲೈವ್‌ ಲಾಯ್ಡ್‌ ಎರಡು ಬಾರಿ ಐಸಿಸಿ ಏಕದಿನ ವಿಶ್ವಕಪ್‌ ಗೆದ್ದಿರಬಹುದು, ವೆಸ್ಟ್ ಇಂಡೀಸ್‌ನ ಡರೆನ್ ಸ್ಯಾಮಿ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ನಾಯಕನಾಗಿರಬಹುದು. ಆದ್ರೆ ಇದುವರೆಗೆ ಧೋನಿ ಬಿಟ್ಟರೆ ಬೇರೆ ಯಾವೊಬ್ಬ ನಾಯಕನು ಮೂರು ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.

ಸೂರ್ಯಕುಮಾರ್ ಅನ್ನು ಇಷ್ಟು ಬೇಗ ಎಬಿಡಿಗೆ ಹೋಲಿಸಬೇಡಿ: ಸಲ್ಮಾನ್ ಬಟ್‌

ಗ್ರೇಟೆಸ್ಟ್‌ ಬ್ಯಾಟರ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ

ಗ್ರೇಟೆಸ್ಟ್‌ ಬ್ಯಾಟರ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ

ಇನ್ನು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕ ಕಂಡಂತಹ ಗ್ರೇಟೆಸ್ಟ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಈಗಾಗಲೇ 70 ಅಂತರಾಷ್ಟ್ರೀಯ ಶತಕಗಳ ಒಡೆಯನಾಗಿರುವ ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಿಂದ ಫಾರ್ಮ್‌ನಲ್ಲಿರದಿದ್ದರೂ ಸಹ ಸಾರ್ವಕಾಲಿಕ ಬೆಸ್ಟ್ ಬ್ಯಾಟರ್‌ಗಳಲ್ಲಿ ಒಬ್ಬರು.

ಸಚಿನ್‌ ತೆಂಡೂಲ್ಕರ್‌ ಶತಕಗಳ ಶತಕದ ದಾಖಲೆಯನ್ನ ಮುರಿಯಬಲ್ಲ ಏಕೈಕ ಆಟಗಾರ ಎಂದು ಸದ್ಯ ಗುರುತಿಸಿಕೊಂಡಿರುವ ಕೊಹ್ಲಿಯು ಭಾರತ ಕ್ರಿಕೆಟ್‌ನಲ್ಲಿ ತನ್ನದೇ ಆದ ಪ್ರಭಾವ ಬೀರಿದ್ದಾರೆ. ಹೀಗಿರುವಾಗ ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಟ್ವಿಟ್ಟರ್‌ನಲ್ಲಿ ತನ್ನನ್ನು ಧೋನಿ ಮತ್ತು ಕೊಹ್ಲಿಗೆ ಹೋಲಿಸಿಕೊಂಡಿದ್ದಾರೆ.

ಶಿಖರ್ ಧವನ್‌ರನ್ನ ಕೊನೆಯ ಕ್ಷಣದಲ್ಲಿ ನಾಯಕತ್ವದಿಂದ ಕೆಳಗಿಳಿಸಿದ್ದು ತಪ್ಪು: ಮೊಹಮ್ಮದ್ ಕೈಫ್‌

ನಾನು ಬೆಂಕಿ ಅಂತಾ Ishan Kishan BCCI ಗೆ ಬಿಸಿ‌ ಮುಟ್ಟಿಸಿದ್ದು ಯಾಕೆ? |*Cricket | OneIndia Kannada

ಲೆಗ್ಸ್‌ ಸ್ಟ್ರೆಚ್‌ ಮಾಡಿದ ಜೆಮಿಮಾ ರೋಡ್ರಿಗಸ್‌

ಟ್ವಿಟ್ಟರ್ ಪೋಸ್ಟ್‌ನಲ್ಲಿ ಜೆಮಿಮಾ ಶೇರ್ ಮಾಡಿರುವ ಫೋಟೋದಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ರೀತಿಯಲ್ಲಿಯೇ ಇಂಗ್ಲೆಂಡ್ ವಿರುದ್ಧದ ಕಳೆದ ಪಂದ್ಯದಲ್ಲಿ ಲೆಗ್ಸ್‌ ಸ್ಟ್ರೆಚ್‌ ಮಾಡಿರುವುದನ್ನ ಹೋಲಿಕೆ ಮಾಡಿದ್ದಾರೆ. ಜೊತೆಗೆ ತಾನು ಕೂಡ ಎಲೈಟ್‌ ಕ್ಲಬ್‌ಗೆ ಸೇರಿಕೊಂಡಿದ್ದೇನೆ ಎಂದು ತಮಾಷೆಯ ಶೀರ್ಷಿಕೆ ನೀಡಿದ್ದಾರೆ.

ಜೆಮಿಮಾ ರೋಡ್ರಿಗಸ್‌ರ ಈ ಫೋಟೋಗೆ ಸಾಕಷ್ಟು ಲೈಕ್ಸ್ ಮತ್ತು ಕಾಮೆಂಟ್ಸ್ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕೆಯ ಫೋಟೋ ಸಾಕಷ್ಟು ಶೇರ್ ಆಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, August 17, 2022, 14:34 [IST]
Other articles published on Aug 17, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X