ಫೀಫಾ: ಕ್ರೋಷಿಯಾ ಪರ ತಾನೇ ಗೋಲು ಬಾರಿಸಿ ಸೋತ ನೈಜೀರಿಯಾ

ಮಾಸ್ಕೋ, ಜೂ. 17: ಫೀಫಾ ವಿಶ್ವಕಪ್ ಗಾಗಿ ಮುಖಾಮುಖಿಯಾಗಿದ್ದ ಕ್ರೋಷಿಯಾ-ನೈಜೀರಿಯಾ ಪಂದ್ಯದಲ್ಲಿ ಕ್ರೋಷಿಯಾವು ನೈಜೀರಿಯಾ ವಿರುದ್ಧ 2-0 ಅಂತರದ ಜಯ ಸಾಧಿಸಿದೆ.
ಗ್ರೂಪ್ ಡಿಯಿಂದ ಕಣಕ್ಕಿಳಿದಿದ್ದ ನೈಜೀರಿಯಾ-ಕ್ರೋಷಿಯಾ ಪಂದ್ಯದಲ್ಲಿ ಮೊದಲು ಕ್ರೋಷಿಯಾ ಗೋಲ್ ಖಾತೆ ತೆರೆಯಿತು. ನೈಜೀರಿಯಾದ ಓಗೆನೆಕೆರೊ ಎಟೆಬೊ ಅವರು ತಮ್ಮದೇ ನೆಟ್ ನೊಳಗೆ ಗೋಲ್ ಬಾರಿಸಿ ಎದುರಾಳಿಗೆ 1-0ಯ ಮುನ್ನಡೆ ತಂದುಕೊಟ್ಟರು.
ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಕ್ಲಿಕ್ ಮಾಡಿ
ಮೊದಲಾರ್ಧದಲ್ಲಿ ಒಂದೇ ಗೋಲ್ ದಾಖಲಾಯಿತು. ಪಂದ್ಯದ ಮೊದಲಾರ್ಧ ಮುಗಿಯುವುದಕ್ಕೂ ಮುನ್ನ ಕ್ರೋಷಿಯಾದ ಇವಾನ್ ರಾಕಿಟಿಕ್ ಅವರು ಯೆಲ್ಲೋ ಕಾರ್ಡ್ ಗೆ ಗುರಿಯಾದರು.
32ನೇ ನಿಮಿಷದಲ್ಲಿನ ಗೋಲ್ ಬಳಿಕ ಇತ್ತಂಡಗಳು ಭಾರೀ ಸೆಣಸಾಟ ನಡೆಸಿದವು. 55ನೇ ನಿಮಿಷದಲ್ಲಿ ಕ್ರೋಷಿಯಾ ಪರ ಗೋಲ್ ದಾಖಲಾಗುವುದರಲ್ಲಿತ್ತು. ಆದರೆ ಅದು ಸ್ವಲ್ಪದರಲ್ಲೇ ತಪ್ಪಿ ಹೋಯಿತು.
71ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡ ಕ್ರೋಷಿಯಾದ ಲುಕಾ ಮಾಡ್ರಿಕ್ ಅವರು ತಂಡಕ್ಕೆ 2-0ಯ ಮುನ್ನಡೆ ತಂದುಕೊಟ್ಟರು. 76ನೇ ನಿಮಿಷದಲ್ಲಿ ನೈಜೀರಿಯಾ, 78ನೇ ನಿಮಿಷದಲ್ಲಿ ಕ್ರೋಷಿಯಾ ಆಟಗಾರರನ್ನು ಬದಲಿಸಿತು.
ಕಾಲಾವಧಿ ಮುಗಿಯುತ್ತಾ ಬಂದಂತೆ ನೈಜೀರಿಯಾ ಒತ್ತಡಕ್ಕೆ ಸಿಲುಕಿತು. ತಾನೇ ಗೋಲ್ ಸಿಡಿಸಿ ಎದುರಾಳಿಗೆ ದಾರಿ ಮಾಡಿಕೊಟ್ಟ ನೈಜೀರಿಯಾ ಅಂತಿಮವಾಗಿ ಸೋಲಿನ ಬೆಲೆ ತೆರುವಂತಾಯ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications