ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಪೆನಾಲ್ಟಿ ಶೂಟೌಟ್ ನಲ್ಲಿ 3-2ರಿಂದ ಡೆನ್ಮಾರ್ಕ್ ಸೋಲಿಸಿದ ಕ್ರೋಷಿಯಾ

ಪೆನಾಲ್ಟಿ ಶೂಟೌಟ್ ನಲ್ಲಿ 3-2ರಿಂದ ಡೆನ್ಮಾರ್ಕ್ ಸೋಲಿಸಿದ ಕ್ರೋಷಿಯಾ | Oneindia Kannada
FIFA World Cup 2018: Croatia beat Denmark 3-2 on penalties

ಮಾಸ್ಕೋ, ಜು. 2: ರಷ್ಯಾದ ನಿಜ್ನಿ ನವ್ಗೊರೊಡ್ ಸ್ಟೇಡಿಯಂನಲ್ಲಿ ನಡೆದ ಫೀಫಾ ವಿಶ್ವಕಪ್ ಅಂತಿಮ 16ರ ಸುತ್ತಿನ ಕ್ರೋಷಿಯಾ-ಡೆನ್ಮಾರ್ಕ್ ಕಾದಾಟದಲ್ಲಿ ಕ್ರೋಷಿಯಾ ಪೆನಾಲ್ಟಿ ಶೂಟೌಟ್ ನಲ್ಲಿ 3-2ರ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಕ್ರೋಷಿಯಾ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡಿದೆ.

ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಕ್ಲಿಕ್ ಮಾಡಿ

ಪಂದ್ಯ ಆರಂಭವಾಗುತ್ತಲೇ ಅಂದರೆ 1ನೇ ನಿಮಿಷದಲ್ಲೇ ಡೆನ್ಮಾರ್ಕ್ ಮೊದಲ ಗೋಲು ಬಾರಿಸಿತು. ಡೆನ್ಮಾರ್ಕ್ ನ ಝಾಂಕಾ ತಂಡಕ್ಕೆ ಮುನ್ನಡೆ ಕೊಟ್ಟಿದ್ದರು. ಅದಾಗಿ 4ನೇ ನಿಮಿಷದಲ್ಲಿ ಎದುರಾಳಿ ಕ್ರೋಷಿಯಾ ಕೂಡ ಗೋಲ್ ದಾಖಲಿಸಿತು. ಮಾರಿಯೋ ಮ್ಯಾಂಜುಕಿಕ್ ಅವರು ಇತ್ತಂಡಗಳ ಅಂಕವನ್ನು 1-1ಕ್ಕೆ ಸರಿದೂಗಿಸಿದ್ದರು.

ಅದಾಗಿ ಪಂದ್ಯದ ಪ್ರಥಮಾರ್ಧ, ದ್ವಿತಿಯಾರ್ಧ ಮುಕ್ತಾಯಗೊಂಡರೂ ಇತ್ತಂಡಗಳು ಗೋಲ್ ದಾಖಲಿಸಲಿಲ್ಲ. ಹೆಚ್ಚುವರಿ ಕಾಲಾವಕಾಶ ನೀಡಲಾಯಿತಾದರೂ ಆಗಲೂ ಅಂಕ 1-1ರಲ್ಲೇ ಉಳಿಯಿತು. ಕೊನೆಗೆ ಪೆನಾಲ್ಟಿ ಶೂಟೌಟ್ ಗೆ ಅವಕಾಶ ನೀಡಲಾಯಿತು. ಈ ವೇಳೆ ಕ್ರೋರಿಯಾ 3, ಡೆನ್ಮಾರ್ಕ್ 2 ಗೋಲ್ ಬಾರಿಸಿತು.

ಭಾನುವಾರದ ಮೊದಲ ಸ್ಪೇನ್-ರಷ್ಯಾ ಪಂದ್ಯದಲ್ಲೂ ರಷ್ಯಾ ಶೂಟೌಟ್ ನಲ್ಲಿ 4-3ರ ಅಂತರದಿಂದ ಗೆಲುವು ಸಾಧಿಸಿತ್ತು. ಆಗಲೂ ಹೆಚ್ಚುವರಿ ಕಾಲಾವಕಾಶ ನೀಡಿದಾಗಲೂ ಗೋಲ್ ದಾಖಲಾಗಿರಲಿಲ್ಲ. ದ್ವಿತೀಯ ಪಂದ್ಯದಲ್ಲೂ 120+1ನೇ ನಿಮಿಷದವರೆಗೂ ಇತ್ತಂಡಗಳ ಅಂಕ 1-1ರಲ್ಲೇ ಉಳಿದಿದ್ದು ವಿಶೇಷವೆನಿಸಿತು.

Story first published: Monday, July 2, 2018, 2:51 [IST]
Other articles published on Jul 2, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X