ಟಾರೋ ಕಾರ್ಡ್ ಭವಿಷ್ಯ: ಸ್ಪೇನ್ ವಿರುದ್ಧ ಪೋರ್ಚುಗಲ್ ಗೆ ಜಯ

ಬೆಂಗಳೂರು, ಜೂನ್ 15: ಫೀಫಾ ವಿಶ್ವಕಪ್ 2018 ಜಾಗತಿಕ ಫುಟ್ಬಾಲ್ ಸಮರದ ಮಹತ್ವದ ಪಂದ್ಯದಲ್ಲಿ ಸ್ಪೇನ್ ಹಾಗೂ ಪೋರ್ಚುಗಲ್ ತಂಡಗಳು ಸೆಣಸಲಿವೆ. ಆರಂಭಿಕ ಪಂದ್ಯದಲ್ಲಿ ಅತಿಥೇಯ ರಷ್ಯಾ ಭರ್ಜರಿಯಾಗಿ ಜಯ ದಾಖಲಿಸಿದ್ದು, ಸೌದಿ ಅರೇಬಿಯಾ ವಿರುದ್ಧ 5-0 ಅಂತರದಲ್ಲಿ ಗೆದ್ದು ಸಂಭ್ರಮಿಸಿದೆ.
ಫೀಫಾ 2018 ಮುನ್ನೋಟ: ಪೋರ್ಚುಗಲ್ ವಿರುದ್ಧ ಸ್ಪೇನ್ ಮೇಲುಗೈ ನಿರೀಕ್ಷೆ
ಸ್ಪೇನ್ ಹಾಗೂ ಪೋರ್ಚುಗಲ್ ನಡುವಿನ ಪಂದ್ಯದಲ್ಲಿ ಯಾರಿಗೆ ಗೆಲುವು? ಎಂಬ ಪ್ರಶ್ನೆಗೆ ಟಾರೋ ಕಾರ್ಡ್ ಭವಿಷ್ಯ ಇಲ್ಲಿದೆ. ಶ್ವೇತಾ ಆನಂದ್ ಅವರು ನೀಡಿದ ಭವಿಷ್ಯದಂತೆ ಪೋರ್ಚುಗಲ್ ಗೆ ಗೆಲುವಿನ ಬಲ ಸಿಗುವ ಸಾಧ್ಯತೆಯಿದೆ.
ಸ್ಪೇನ್ ತಂಡ ಬಲಿಷ್ಠವಾಗಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ಸಾಲಿನಲ್ಲಿ ನಿಂತಿದೆ. ಪೋರ್ಚುಗಲ್ ಗೆ ಸ್ಟಾರ್ ಆಟಗಾರ ರೊನಾಲ್ಡೋ ಬಲ ಇದೆ.
ಜೂನ್ 14ರಿಂದ ಜುಲೈ 15ರ ತನಕ 32 ದೇಶಗಳು, 12 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದೆ. ಜರ್ಮನಿಯಲ್ಲಿ 2006 ಟೂರ್ನಮೆಂಟ್ ನಡೆದ ಬಳಿಕ ಪುನಃ ಯುರೋಪಿಗೆ ಈ ಪ್ರತಿಷ್ಠಿತ ಟೂರ್ನಮೆಂಟ್ ಹಿಂತಿರುಗಿದೆ.
ಅತಿಥೇಯ ರಾಷ್ಟ್ರವಾಗಿ ರಷ್ಯಾಕ್ಕೆ ಸುಲಭವಾಗಿ ಅರ್ಹತೆ ಸಿಕ್ಕಿದ್ದರೆ, ಮಿಕ್ಕ 31 ರಾಷ್ಟ್ರಗಳು ಅರ್ಹತಾ ಸುತ್ತಿನಲ್ಲಿ ಸೆಣಸಾಡಿ, ಆಯ್ಕೆಯಾಗಿವೆ.
ಬೆಟ್ಟಿಂಗ್: ಬೆಟ್ಟಿಂಗ್ ಲೋಕದಲ್ಲಿ ಸ್ಪೇನ್ ಪರ 11/10 ಬಿಡ್ಡಿಂಗ್ ಇದ್ದು ನೆಚ್ಚಿನ ತಂಡ ಎನಿಸಿದೆ. ಪೋರ್ಚುಗಲ್ 3/1 ನಷ್ಟಿದೆ. ರೊನಾಲ್ಡೊ ಗೋಲು ಹೊಡೆಯುವುದರ ಬಗ್ಗೆ 4/1ರಂತೆ ಬೆಟ್ಟಿಂಗ್ ನಡೆದಿದೆ. ಡಿಯಾಗೋ ಕೋಸ್ಟರ್ 9/2 ರಂತೆ ಟ್ರೆಂಡಿಂಗ್ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications