Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup: ಚಿನ್ನದ ಬಾಲ್, ಚಿನ್ನದ ಬೂಟ್, ಚಿನ್ನದ ಗ್ಲೌಸ್ ಗೆದ್ದವರ ಪಟ್ಟಿ

FIFA World cup 2022

ಕ್ರೀಡಾಲೋಕದ ಮಹಾಸಮರ, ಫುಟ್ಬಾಲ್ ಅಭಿಮಾನಿಗಳ ಬಹುದೊಡ್ಡ ಹಬ್ಬ ಫಿಫಾ ವಿಶ್ವಕಪ್ 2022 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ನವೆಂಬರ್ 20ರಿಂದ ಆರಂಭಗೊಳ್ಳಲಿರುವ ಫಿಫಾ ವಿಶ್ವಕಪ್‌ಗೆ ಕತಾರ್‌ ಆತಿಥ್ಯ ವಹಿಸಿದ್ದು, ಏಳು ಬೃಹತ್ ಸ್ಟೇಡಿಯಂಗಳು ಅಧಿಕೃತ ಚಾಲನೆಗೆ ರೆಡಿಯಾಗಿವೆ.

ಉದ್ಘಾಟನಾ ದಿನದಲ್ಲಿ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ನಡುವಿನ ಆರಂಭಿಕ ಪಂದ್ಯದ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ನವೆಂಬರ್ 20ರಂದು ರಾತ್ರಿ 9.30ಕ್ಕೆ ಈ ಪಂದ್ಯ ನಡೆಯಲಿದ್ದು, ಫುಟ್ಬಾಲ್ ಪ್ರೇಮಿಗಳು ಸೂಪರ್ ಸಂಡೇಗಾಗಿ ಎದುರು ನೋಡುತ್ತಿದ್ದಾರೆ.

ನಾಲ್ಕು ವರ್ಷಗಳಿಗೊಮ್ಮೆ ನಡೆಯಲಿರುವ ಫಿಫಾ ವಿಶ್ವಕಪ್‌ನಲ್ಲಿ ಒಟ್ಟು 32 ತಂಡಗಳು ಸ್ಪರ್ಧೆ ನಡೆಸಲಿವೆ. ಫುಟ್ಬಾಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಕತಾರ್‌ನಲ್ಲಿ ಟೂರ್ನಮೆಂಟ್ ನಡೆಯುತ್ತಿದೆ. ಬ್ರೆಜಿಲ್, ಪೋರ್ಚುಗಲ್, ಸ್ಪೇನ್, ಫ್ರಾನ್ಸ್‌, ಜರ್ಮನಿ, ಅರ್ಜೆಂಟೀನಾದಂತಹ ಬಲಿಷ್ಟ ತಂಡಗಳ ಜೊತೆಗೆ ಅಚ್ಚರಿ ಫಲಿತಾಂಶ ನೀಡುವ ಹಲವು ತಂಡಗಳಿವೆ.

ಲಿಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ, ನೇಮರ್, ಕೈಯ್ಲಿನ್ ಎಂಬಾಪೆ, ಹ್ಯಾರಿ ಕೇನ್ ನಂತಹ ಸೂಪರ್‌ಸ್ಟಾರ್‌ ಆಟಗಾರರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಜೊತೆಗೆ ಈ ಬಾರಿಯ ವಿಶ್ವಕಪ್‌ನಲ್ಲಿ ಚಿನ್ನದ ಬೂಟ್, ಬಾಲ್ ಹಾಗೂ ಗ್ಲೌಸ್ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲವು ಎದುರಾಗಿದೆ.

ಫುಟ್ಬಾಲ್ ವಿಶ್ವಕಪ್‌ ಇತಿಹಾಸದಲ್ಲಿ ಈ ಮೂರು ಪ್ರಶಸ್ತಿಗಳು ತನ್ನದೇ ಆದ ಶ್ರೇಷ್ಟತೆಯನ್ನು ಹೊಂದಿವೆ. ಅತಿ ಹೆಚ್ಚು ಗೋಲ್ ಹೊಡೆದ ಆಟಗಾರನಿಗೆ ಚಿನ್ನದ ಬೂಟ್ ನೀಡಲಾಗುತ್ತದೆ. ಟೂರ್ನಮೆಂಟ್‌ನಲ್ಲಿ ಅತ್ಯುತ್ತಮ ಆಟಗಾರನಿಗೆ ಚಿನ್ನದ ಬಾಲ್ ಹಾಗೂ ಅತ್ಯುತ್ತಮ ಗೋಲ್‌ಕೀಪರ್‌ಗೆ ಚಿನ್ನದ ಗ್ಲೌಸ್ ನೀಡಲಾಗುತ್ತದೆ. ಇದುವರೆಗೂ ಈ ಪ್ರಶಸ್ತಿಗಳನ್ನ ಯಾರು ಗೆದ್ದಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದ್ದು, ಮುಂದೆ ಓದಿ..

ಗೋಲ್ಡನ್ ಬಾಲ್ ಗೆದ್ದವರು

ಗೋಲ್ಡನ್ ಬಾಲ್ ಗೆದ್ದವರು

1930 - ಜೋಸ್ ನಾಸಾಝಿ (ಉರುಗ್ವೆ)

1934 - ಗೈಸೆಪ್ಪೆ ಮೀಝಾ (ಇಟಲಿ)

1938 - ಲಿಯೊನಿಡಾಸ್ ಡ ಸಿಲ್ವಾ (ಬ್ರೆಜಿಲ್)

1950 - ಜಿಝಿನ್ಹೋ (ಬ್ರೆಜಿಲ್)

1954 - ಫೆರೆಂಕ್ ಪುಸ್ಕಾಸ್ (ಹಂಗೇರಿ)

1958 - ಡಿಡಿ (ಬ್ರೆಜಿಲ್)

1962 - ಗ್ಯಾರಿಂಚಾ (ಬ್ರೆಜಿಲ್)

1966 - ಬಾಬಿ ಚಾರ್ಲ್ಟನ್ (ಇಂಗ್ಲೆಂಡ್)

1970 - ಪೀಲೆ (ಬ್ರೆಜಿಲ್)

1974 - ಜೋಹಾನ್ ಕ್ರೂಫ್ (ನೆದರ್ಲ್ಯಾಂಡ್ಸ್)

1982 - ಪಾವೊಲೊ ರೊಸ್ಸಿ (ಇಟಲಿ)

1986 - ಡಿಯಾಗೋ ಮರಡೋನಾ (ಅರ್ಜೆಂಟೀನಾ)

1990 - ಸಾಲ್ವಟೋರ್ ಶಿಲಾಸಿ (ಇಟಲಿ)

1994 - ರೊಮಾರಿಯೊ (ಬ್ರೆಜಿಲ್)

1998 - ರೊನಾಲ್ಡೊ (ಬ್ರೆಜಿಲ್)

2002 - ಆಲಿವರ್ ಕಾನ್ (ಜರ್ಮನಿ)

2006 - ಜಿನೆಡಿನ್ ಜಿಡಾನೆ (ಫ್ರಾನ್ಸ್)

2010 - ಡಿಯಾಗೋ ಫೋರ್ಲಾನ್ (ಉರುಗ್ವೆ)

2014 - ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ)

2018 - ಲುಕಾ ಮೊಡ್ರಿಕ್ (ಕ್ರೊಯೇಷಿಯಾ)

ಫುಟ್ಬಾಲ್‌ನಿಂದ ಫಿಫಾ ಹೇಗೆ ಹಣ ಗಳಿಸುತ್ತದೆ? ವರ್ಷಕ್ಕೆ ಎಷ್ಟು ಆದಾಯ? ವಿಶ್ವಕಪ್‌ನಿಂದ ಎಷ್ಟು ಲಾಭ?

ಗೋಲ್ಡನ್ ಬೂಟ್ ಗೆದ್ದವರು

ಗೋಲ್ಡನ್ ಬೂಟ್ ಗೆದ್ದವರು

1930 - ಗಿಲ್ಲೆರ್ಮೊ ಸ್ಟೇಬೈಲ್ (ಅರ್ಜೆಂಟೀನಾ)

1934 - ಓಲ್ಡ್ರಿಚ್ ನೆಜೆಡ್ಲಿ (ಜೆಕ್ ರಿಪಬ್ಲಿಕ್)

1938 - ಲಿಯೊನಿಡಾಸ್ (ಬ್ರೆಜಿಲ್)

1950 - ಅಡೆಮಿರ್ (ಬ್ರೆಜಿಲ್)

1954 - ಸ್ಯಾಂಡರ್ ಕೊಕ್ಸಿಸ್ (ಹಂಗೇರಿ)

1958 - ಜಸ್ಟ್ ಫಾಂಟೈನ್ (ಫ್ರಾನ್ಸ್)

1962 - ಫ್ಲೋರಿಯನ್ ಆಲ್ಬರ್ಟ್ (ಹಂಗೇರಿ), ವ್ಯಾಲೆಂಟಿನ್ ಇವನೊವ್ (ಸೋವಿಯತ್ ಯೂನಿಯನ್), ಗ್ಯಾರಿಂಚಾ (ಬ್ರೆಜಿಲ್), ವಾವಾ (ಬ್ರೆಜಿಲ್), ಡ್ರಾಜಾನ್ ಜೆರ್ಕೊವಿಕ್ (ಯುಗೊಸ್ಲಾವಿಯಾ), ಲಿಯೋನೆಲ್ ಸ್ಯಾಂಚೆಜ್ (ಚಿಲಿ)

1966 - ಯುಸೆಬಿಯೊ (ಪೋರ್ಚುಗಲ್)

1970 - ಗೆರ್ಡ್ ಮುಲ್ಲರ್ (ಜರ್ಮನಿ)

1974 - ಗ್ರ್ಜೆಗೋರ್ಜ್ ಲಾಟೊ (ಪೋಲೆಂಡ್)

1978 - ಮಾರಿಯೋ ಕೆಂಪೆಸ್ (ಅರ್ಜೆಂಟೀನಾ)

1982 - ಪಾವೊಲೊ ರೊಸ್ಸಿ (ಇಟಲಿ)

1986 - ಗ್ಯಾರಿ ಲಿನೆಕರ್ (ಇಂಗ್ಲೆಂಡ್)

1990 - ಸಾಲ್ವಟೋರ್ ಶಿಲಾಸಿ (ಇಟಲಿ)

1994 - ಒಲೆಗ್ ಸಲೆಂಕೊ (ರಷ್ಯಾ), ಹ್ರಿಸ್ಟೊ ಸ್ಟೊಯಿಚ್ಕೊವ್ (ಬಲ್ಗೇರಿಯಾ)

1998 - ಡೇವರ್ ಸುಕರ್ (ಕ್ರೊಯೇಷಿಯಾ)

2002 - ರೊನಾಲ್ಡೊ (ಬ್ರೆಜಿಲ್)

2006 - ಮಿರೋಸ್ಲಾವ್ ಕ್ಲೋಸ್ (ಜರ್ಮನಿ)

2010 - ಥಾಮಸ್ ಮುಲ್ಲರ್ (ಜರ್ಮನಿ)

2014 - ಜೇಮ್ಸ್ ರೋಡ್ರಿಗಸ್ (ಕೊಲಂಬಿಯಾ)

2018 - ಹ್ಯಾರಿ ಕೇನ್ (ಇಂಗ್ಲೆಂಡ್)

ಫಿಫಾ ವಿಶ್ವಕಪ್ ಆರಂಭಕ್ಕೂ ಮುನ್ನ ಮದ್ಯ ಮಾರಾಟ ನಿಷೇಧ ಮಾಡಿದ ಆಯೋಜಕರು

ಗೋಲ್ಡನ್ ಗ್ಲೌಸ್ ಗೆದ್ದವರು

ಗೋಲ್ಡನ್ ಗ್ಲೌಸ್ ಗೆದ್ದವರು

1930 - ಎನ್ರಿಕ್ ಬ್ಯಾಲೆಸ್ಟ್ರೆರೊ (ಉರುಗ್ವೆ)

1934 - ರಿಕಾರ್ಡೊ ಝಮೊರಾ (ಸ್ಪೇನ್)

1938 - ಫ್ರಾಂಟಿಸೆಕ್ ಪ್ಲಾನಿಕಾ (ಜೆಕೊಸ್ಲೊವಾಕಿಯಾ)

1950 - ರೋಕ್ ಮಾಸ್ಪೊಲಿ (ಉರುಗ್ವೆ)

1954 - ಗ್ಯುಲಾ ಗ್ರೋಸಿಕ್ಸ್ (ಹಂಗೇರಿ)

1958 - ಹ್ಯಾರಿ ಗ್ರೆಗ್ (ಉತ್ತರ ಐರ್ಲೆಂಡ್)

1962 - ವಿಲಿಯಮ್ ಸ್ಕ್ರೋಜ್ಫ್ (ಜೆಕೊಸ್ಲೊವಾಕಿಯಾ)

1966 - ಗಾರ್ಡನ್ ಬ್ಯಾಂಕ್ಸ್ (ಇಂಗ್ಲೆಂಡ್)

1970 - ಲಾಡಿಸ್ಲಾವೊ ಮಜುರ್ಕಿವಿಚ್ (ಉರುಗ್ವೆ)

1974 - ಸೆಪ್ ಮೇಯರ್ (ಪಶ್ಚಿಮ ಜರ್ಮನಿ)

1978 - ಉಬಾಲ್ಡೊ ಫಿಲೋಲ್ (ಅರ್ಜೆಂಟೀನಾ)

1982 - ಡಿನೋ ಝೋಫ್ (ಇಟಲಿ)

1986 - ಜೀನ್-ಮೇರಿ ಪ್ಫಾಫ್ (ಬೆಲ್ಜಿಯಂ)

1990 - ಲೂಯಿಸ್ ಗೇಬೆಲೊ ಕೊನೆಜೊ (ಕೋಸ್ಟರಿಕಾ), ಸೆರ್ಗಿಯೋ ಗೊಯ್ಕೊಚಿಯಾ (ಅರ್ಜೆಂಟೀನಾ)

1994 - ಮೈಕೆಲ್ ಪ್ರುಡ್ಹೋಮ್ (ಬೆಲ್ಜಿಯಂ)

1998 - ಫ್ಯಾಬಿಯನ್ ಬರ್ತೇಜ್ (ಫ್ರಾನ್ಸ್)

2002 - ಆಲಿವರ್ ಕಾನ್ (ಜರ್ಮನಿ)

2006 - ಜಿಯಾನ್ಲುಗಿ ಬಫನ್ (ಇಟಲಿ)

2010 - ಇಕರ್ ಕ್ಯಾಸಿಲ್ಲಾಸ್ (ಸ್ಪೇನ್)

2014 - ಮ್ಯಾನುಯೆಲ್ ನ್ಯೂಯರ್ (ಜರ್ಮನಿ)

2018 - ಥಿಬೌಟ್ ಕೋರ್ಟೊಯಿಸ್ (ಬೆಲ್ಜಿಯಂ)

Story first published: Saturday, November 19, 2022, 13:35 [IST]
Other articles published on Nov 19, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+