ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫುಟ್ಬಾಲ್‌ನಿಂದ ಫಿಫಾ ಹೇಗೆ ಹಣ ಗಳಿಸುತ್ತದೆ? ವರ್ಷಕ್ಕೆ ಎಷ್ಟು ಆದಾಯ? ವಿಶ್ವಕಪ್‌ನಿಂದ ಎಷ್ಟು ಲಾಭ?

FIFA 2022

ಖತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ 2022ಕ್ಕೆ ಈಗಾಗಲೇ ಕ್ಷಣಗಣನೆ ಶುರುವಾಗಿದ್ದು, ವಿಶ್ವದ ಅತಿದೊಡ್ಡ ಕ್ರೀಡಾಹಬ್ಬಕ್ಕೆ ಫುಟ್ಬಾಲ್​ ಪ್ರೇಮಿಗಳ ಕಾತುರ ಹೆಚ್ಚಾಗಿದೆ. ಇದೇ ಭಾನುವಾರ ಅಂದ್ರೆ ನವೆಂಬರ್ 20ರಿಂದ ಆರಂಭಗೊಳ್ಳಲಿರುವ ಫಿಫಾ ವಿಶ್ವಕಪ್‌ಗೆ ಕತಾರ್‌ನಲ್ಲಿ ಅಧಿಕೃತ ಚಾಲನೆ ಸಿಗಲಿದೆ.

ಉದ್ಘಾಟನಾ ದಿನದಲ್ಲಿ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ನಡುವಿನ ಆರಂಭಿಕ ಪಂದ್ಯದ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ನವೆಂಬರ್ 20ರಂದು ರಾತ್ರಿ 9.30ಕ್ಕೆ ಈ ಪಂದ್ಯ ನಡೆಯಲಿದ್ದು, ಫುಟ್ಬಾಲ್ ಪ್ರೇಮಿಗಳು ಸೂಪರ್ ಸಂಡೇಗಾಗಿ ಎದುರು ನೋಡುತ್ತಿದ್ದಾರೆ.

ಫುಟ್ಬಾಲ್ ವಿಶ್ವಕಪ್‌ ಅಂದಾಕ್ಷಣ ಅದನ್ನೂ ಆಯೋಜಿಸುವ ಫಿಫಾ ಹಿಂದಿರುವ ಶ್ರಮ ಅಷ್ಟಿಷ್ಟಲ್ಲ. ಕಳೆದ ಬಾರಿಯ ಫಿಫಾ ವಿಶ್ವಕಪ್‌ ರಷ್ಯಾದಲ್ಲಿ ಆಯೋಜಿಸಲಾಗಿದ್ದು, ಭಾರೀ ಪ್ರಮಾಣದಲ್ಲಿ ಆದಾಯ ತನ್ನದಾಗಿಸಿಕೊಂಡಿದೆ. ವಿಶ್ವದ ಅತಿದೊಡ್ಡ ಕ್ರೀಡಾಭಿಮಾನಿಗಳನ್ನ ಹೊಂದಿರುವ ಫುಟ್ಬಾಲ್‌ನಿಂದ ಫಿಫಾ ಹೇಗೆ ಹಣ ಗಳಿಸುತ್ತದೆ? ಕಳೆದ ವಿಶ್ವಕಪ್‌ನಲ್ಲಿ ಫಿಫಾ ಎಷ್ಟು ಆದಾಯ ಗಳಿಸಿರಬಹುದು? ಎಂಬುದನ್ನ ಈ ಲೇಖನದಲ್ಲಿ ತಿಳಿಸಲಾಗಿದೆ.

ಫಿಫಾ ವಿಶ್ವಕಪ್ ಚಾಂಪಿಯನ್‌ಗೆ ಸಿಗಲಿದೆ 44 ಮಿಲಿಯನ್ ಡಾಲರ್ ಪ್ರಶಸ್ತಿ

ಫಿಫಾ ವಿಶ್ವಕಪ್ ಚಾಂಪಿಯನ್‌ಗೆ ಸಿಗಲಿದೆ 44 ಮಿಲಿಯನ್ ಡಾಲರ್ ಪ್ರಶಸ್ತಿ

ನಾಲ್ಕು ವರ್ಷಗಳಿಗೊಮ್ಮೆ ನಡೆಯಲಿರುವ ಫಿಫಾ ವಿಶ್ವಕಪ್‌ನಲ್ಲಿ ಒಟ್ಟು 32 ತಂಡಗಳು ಸ್ಪರ್ಧೆ ನಡೆಸಲಿವೆ. ಇದರಲ್ಲಿ ಬ್ರೆಜಿಲ್, ಪೋರ್ಚುಗಲ್, ಸ್ಪೇನ್, ಫ್ರಾನ್ಸ್‌, ಜರ್ಮನಿ, ಅರ್ಜೆಂಟೈನಾದಂತಹ ಬಲಿಷ್ಟ ತಂಡಗಳನ್ನು ಕಾಣಬಹುದಾಗಿದೆ. ಆದ್ರೆ ಇಷ್ಟು ದೊಡ್ಡ ಮಟ್ಟದ ಸ್ಪರ್ಧೆಯಲ್ಲಿ ಯಾರು ಚಾಂಪಿಯನ್ ಆಗಲಿದ್ದಾರೆ ಎಂಬುದನ್ನ ಊಹಿಸಲು ಸಾಧ್ಯವಿಲ್ಲ. ಏಕೆಂದರೆ ಇತ್ತಂಡಗಳ ನಡುವಿನ ಸ್ಪರ್ಧೆ ಅಷ್ಟು ದೊಡ್ಡ ಮಟ್ಟಿಗೆ ನಡೆಯಲಿದೆ.

ಫುಟ್ಬಾಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಟೂರ್ನಮೆಂಟ್ ಕತಾರ್‌ನಲ್ಲಿ ನಡೆಯುತ್ತಿದ್ದು, ಏಳು ನೂತನ ಸ್ಟೇಡಿಯಂ ಫಿಫಾ ವಿಶ್ವಕಪ್‌ ಪಂದ್ಯಗಳಿಗೆ ಸಜ್ಜಾಗಿವೆ.

ಕಳೆದ ವಿಶ್ವಕಪ್‌ನಲ್ಲಿ 4.6 ಬಿಲಿಯನ್ ಡಾಲರ್ ಆದಾಯ

ಕಳೆದ ವಿಶ್ವಕಪ್‌ನಲ್ಲಿ 4.6 ಬಿಲಿಯನ್ ಡಾಲರ್ ಆದಾಯ

2018ರಲ್ಲಿ ರಷ್ಯಾದಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಫಿಫಾ ಸಂಸ್ಥೆಯು ಬರೋಬ್ಬರಿ 4.6 ಬಿಲಿಯನ್ ಡಾಲರ್ ಆದಾಯವನ್ನು ಗಳಿಸಿದೆ. ಅಂದ್ರೆ ಪ್ರಸ್ತುತ ಭಾರತೀಯ ರೂಪಾಯಿಗಳಲ್ಲಿ 37,502 ಕೋಟಿ ರೂಪಾಯಿಗಳಾಗಿದೆ.

ಈ ಆದಾಯದಲ್ಲಿ ಫಿಫಾ , ವಿಶ್ವಕಪ್ ಆತಿಥ್ಯ ವಹಿಸುವ ರಾಷ್ಟ್ರಕ್ಕೆ ಹಣ ನೀಡುವುದರ ಜೊತೆಗೆ, ಪ್ರಶಸ್ತಿ ಮೊತ್ತ, ಪ್ರಯಾಣ ಮತ್ತು ಆಟಗಾರರು ಉಳಿದುಕೊಳ್ಳಲು ವ್ಯವಸ್ಥೆ ಮತ್ತು ಸಹಾಯಕ ಸಿಬ್ಬಂದಿಗಳು ಹೋಟೆಲ್ ಮತ್ತು ಊಟದ ವ್ಯವಸ್ಥೆ ಮಾಡಲಾಗುವುದು. ಇದಷ್ಟೇ ಅಲ್ಲದೆ ಫುಟ್ಬಾಲ್ ವಿಶ್ವಕಪ್ ಆತಿಥ್ಯದ ಬಳಿಕ ಆತಿಥೇಯ ರಾಷ್ಟ್ರದಲ್ಲಿ ಕ್ರೀಡೆಯ ಬೆಳವಣಿಗೆಗೆ ದೊಡ್ಡ ಮೊತ್ತದ ಹಣದ ಕೊಡುಗೆ ಸಹ ನೀಡಲಿದೆ.

ಫಿಫಾ ಸಂಘಟಕರು ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ವಿಶ್ವಕಪ್ ಅವಧಿಯಲ್ಲಿ ಒಟ್ಟು ಆದಾಯವನ್ನು ಲೆಕ್ಕಾಚಾರ ಹಾಕುತ್ತಾರೆ. ಇತ್ತೀಚೆಗೆ 2015-18ರ ಸೈಕಲ್‌ನಲ್ಲಿ ಆದಾಯ ಪ್ರಕಟಗೊಂಡಿದ್ದು, 2021ರ ಆವೃತ್ತಿಯಲ್ಲಿ 6.4 ಬಿಲಿಯನ್ ಡಾಲರ್ ಆದಾಯ ಸಂಗ್ರಹಿಸಿದೆ. ವಿಶ್ವಕಪ್‌ವಿಲ್ಲದ ಒಂದು ವರ್ಷದಲ್ಲಿಯೇ ಫಿಫಾ 766 ಮಿಲಿಯನ್ ಡಾಲರ್ ಹಣ ಗಳಿಸಿದೆ.

ಟಿವಿ ಹಕ್ಕುಗಳಿಂದಲೇ ಅತಿ ಹೆಚ್ಚಿನ ಆದಾಯ

ಟಿವಿ ಹಕ್ಕುಗಳಿಂದಲೇ ಅತಿ ಹೆಚ್ಚಿನ ಆದಾಯ

ಕ್ರೀಡೆ ಯಾವುದೇ ಆಗಿರಲಿ ನೇರ ಪ್ರಸಾರದ ಹಕ್ಕುಗಳನ್ನ ಮಾರಾಟ ಮಾಡುವ ಮೂಲಕ ಸಂಬಂಧಿಸಿದ ಕ್ರೀಡಾ ಸಂಸ್ಥೆಗಳು ಹೆಚ್ಚಿನ ಆದಾಯ ಗಳಿಸುತ್ತದೆ. ಕ್ರಿಕೆಟ್‌ನಲ್ಲಿ ಬಿಸಿಸಿಐ ಹೇಗೆ ಐಪಿಎಲ್ ಪ್ರಸಾರದ ಹಕ್ಕುಗಳನ್ನು ಮಾರಾಟ ಮಾಡಿ 40 ಸಾವಿರ ಕೋಟಿಗೂ ಅಧಿಕ ಹಣವನ್ನು ಸಂಪಾದಿಸಿದೆಯೋ, ಇದಕ್ಕಿಂತ ಎರಡು ಪಟ್ಟು ಹೆಚ್ಚಿನ ಹಣವನ್ನು ಫಿಫಾ ನೇರಪ್ರಸಾರದ ಹಕ್ಕನ್ನು ಕ್ರೀಡಾ ಚಾನೆಲ್‌ಗಳಿಗೆ ಮಾರಾಟ ಮಾಡುವ ಮೂಲಕ ಸಂಪಾದಿಸುತ್ತದೆ.

ಫಿಫಾ ಕಳೆದ ಆವೃತ್ತಿಯಲ್ಲಿ 6.4 ಬಿಲಿಯನ್ ಡಾಲರ್‌ನಷ್ಟು ಆದಾಯವನ್ನು ಗಳಿಸಿದ್ದು, ಇದರಲ್ಲಿ 4.6 ಬಿಲಿಯನ್ ಡಾಲರ್ ಟಿವಿ ಹಕ್ಕುಗಳಿಂದ ಪಡೆದಿದೆ.

ಫಿಫಾ ವಿಶ್ವಕಪ್ ಕತಾರ್-2022: ವಯಾಕಾಮ್​18 ಸ್ಪೋರ್ಟ್ಸ್‌ನಲ್ಲಿ ಲೈವ್, ಎಕ್ಸ್‌ಪರ್ಟ್‌ ಪ್ಯಾನೆಲ್‌ಗೆ ಫುಟ್ಬಾಲ್ ದಿಗ್ಗಜರು

ಪ್ರಾಯೋಜಕತ್ವದಿಂದ ಬಹುದೊಡ್ಡ ಮಟ್ಟಿನ ಆದಾಯ

ಪ್ರಾಯೋಜಕತ್ವದಿಂದ ಬಹುದೊಡ್ಡ ಮಟ್ಟಿನ ಆದಾಯ

ಟಿವಿ ಪ್ರಸಾರದ ಹಕ್ಕುಗಳ ಜೊತೆಗೆ ಪ್ರಾಯೋಜಕತ್ವದಿಂದಲೂ ಫಿಫಾ ಆದಾಯಗಳಿಸುತ್ತದೆ. ಫಿಫಾ ವಿಶ್ವಕಪ್‌ ವೇಳೆಯಲ್ಲಿ ಬೃಹತ್ ಕಂಪನಿಗಳು ಪ್ರಾಯೋಜಕತ್ವ ಪಡೆಯಲು ನಾ ಮುಂದು..ತಾ ಮುಂದು ಎಂದು ಬರುತ್ತವೆ. ಹೀಗಾಗಿ ಟೈಟಲ್ ಪ್ರಾಯೋಜಕತ್ವಕ್ಕಾಗಿ ಹೆಚ್ಚಿನ ಬಿಡ್ಡಿಂಗ್ ನಡೆಯಲಿದೆ.

ಫಿಫಾ ಸಾಮಾಜಿಕ ಜವಾಬ್ದಾರಿ ಜೊತೆಗೆ, ಫುಟ್ಬಾಲ್ ಅಭಿವೃದ್ದಿಯಲ್ಲಿ ತೊಡಗುವುದರಿಂದ ಯೋಜನೆಯ ಪಾಲುದಾರರಾಗಲು ಜಾಗತಿಕ ಬ್ರ್ಯಾಂಡ್‌ಗಳು ಸಾಕಷ್ಟು ಹಣವನ್ನು ಫಿಫಾಗೆ ನೀಡುತ್ತವೆ. ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ತಳಮಟ್ಟದಿಂದಲು ಫುಟ್ಬಾಲ್ ಅಭಿವೃದ್ದಿಗೆ ಫಿಫಾ ಹೆಚ್ಚು ಹಣ ಖರ್ಚು ಮಾಡಲಿದೆ.

2018ರ ವಿಶ್ವಕಪ್‌ ಆವೃತ್ತಿಯಲ್ಲಿ ಮಾರುಕಟ್ಟೆ ಹಕ್ಕುಗಳ ಆದಾಯದ ಮೂಲಕ ಫಿಫಾ 1.66 ಬಿಲಿಯನ್ ಡಾಲರ್ ಹಣವನ್ನು ಸಂಪಾದಿಸಿದೆ. 2021ರ ಏಕೈಕ ವರ್ಷದಲ್ಲಿ ಮಾರುಕಟ್ಟೆ ಹಕ್ಕುಗಳ ಆದಾಯವು 131 ಮಿಲಿಯನ್ ಡಾಲರ್‌ನಷ್ಟಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಜನರು ವೀಕ್ಷಿಸುವಂತಹ ಕ್ರೀಡೆ ಇದಾಗಿರುವುದರಿಂದ ಬಿಲಿಯನ್ ಡಾಲರ್ ಆದಾಯದ ಸಂಸ್ಥೆಗಳು ಪ್ರಾಯೋಜಕತ್ವ ಪಡೆಯಲು ಹೆಚ್ಚು ಯೋಚಿಸುವುದಿಲ್ಲ. ವರದಿಯೊಂದರ ಪ್ರಕಾರ 5 ಬಿಲಿಯನ್ ಜನರು ಫಿಫಾ ವಿಶ್ವಕಪ್‌ ಟೂರ್ನಮೆಂಟ್ ವೀಕ್ಷಿಸುತ್ತಾರೆ. ಅಂದ್ರೆ ಸರಿಸುಮಾರು ಭೂಮಿಯ ಅರ್ಧದಷ್ಟು ಜನರು ಫಿಫಾ ವಿಶ್ವಕಪ್ ವೀಕ್ಷಕರಾಗಿದ್ದಾರೆ.

ಟಿಕೆಟ್‌ಗಳ ಮಾರಾಟ ಮತ್ತು ಆತಿಥ್ಯತೆಯ ಆದಾಯ

ಟಿಕೆಟ್‌ಗಳ ಮಾರಾಟ ಮತ್ತು ಆತಿಥ್ಯತೆಯ ಆದಾಯ

ಫಿಫಾ ವಿಶ್ವಕಪ್‌ ಸಮಯದಲ್ಲಿ ಪಂದ್ಯಗಳನ್ನ ವೀಕ್ಷಿಸಲು ನೂರಾರು ದೇಶಗಳಿಂದ ಫುಟ್ಬಾಲ್ ಅಭಿಮಾನಿಗಳು ವಿಶ್ವಕಪ್ ಆತಿಥೇಯ ರಾಷ್ಟ್ರಕ್ಕೆ ಭೇಟಿ ನೀಡುತ್ತಾರೆ. ಟಿಕೆಟ್ ದರ ಎಷ್ಟಿದ್ದರೂ ಖರೀದಿಸಿ ತಮ್ಮ ನೆಚ್ಚಿನ ತಂಡದ ಹಾಗೂ ಆಟಗಾರರನ್ನು ಬೆಂಬಲಿಸಲು ಸ್ಟೇಡಿಯಂಗೆ ತೆರಳುತ್ತಾರೆ.

2015 ರಿಂದ 2018ರಲ್ಲಿ ಫಿಫಾ ಟಿಕೆಟ್‌ಗಳ ಮಾರಾಟದ ಹಕ್ಕುಗಳ ಮೂಲಕ 712 ಮಿಲಿಯನ್ ಡಾಲರ್ ಹಣ ಸಂಪಾದಿಸಿದೆ. 2021ರಲ್ಲಿ ನಡೆದ ಅರಬ್‌ ಕಪ್‌ನಲ್ಲಿ ಸುಮಾರು 6 ಲಕ್ಷ ಜನರು ಸ್ಟೇಡಿಯಂಗೆ ತೆರಳಿ ಪಂದ್ಯಗಳನ್ನು ವೀಕ್ಷಿಸಿದ್ದು, 12 ಮಿಲಿಯನ್ ಡಾಲರ್ ಆದಾಯ ಹರಿದುಬಂದಿದೆ.

ಇನ್ನು ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ 2022ರ ಸುಮಾರು 3 ಮಿಲಿಯನ್ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಈ ಮಾರಾಟವಾದ ಟಿಕೆಟ್‌ಗಳ ದರ 100 ಅಮೆರಿಕನ್ ಡಾಲರ್‌ನಿಂದ 1,100 ಅಮೆರಿಕನ್ ಡಾಲರ್‌ವರೆಗೆ ಕಾಣಬಹುದು. ಭಾರತದ ರೂಪಾಯಿಗಳಲ್ಲಿ ಸುಮಾರು 8000 ರೂಪಾಯಿಗಳಿಂದ 90,000 ರೂಪಾಯಿವರೆಗಿನ ಟಿಕೆಟ್‌ಗಳು ಮಾರಾಟವಾಗಿವೆ.

FIFA World Cup 2022: ನೇಮರ್ ನಾಯಕತ್ವದ 5 ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡ ಪ್ರಕಟ

ಬ್ರ್ಯಾಂಡಿಂಗ್‌ ಮತ್ತು ಪರವಾನಗಿ ಆದಾಯ

ಬ್ರ್ಯಾಂಡಿಂಗ್‌ ಮತ್ತು ಪರವಾನಗಿ ಆದಾಯ

ಫಿಫಾ ತನ್ನ ಬ್ರ್ಯಾಂಡ್‌ನ ಪರವಾನಗಿ ನೀಡುವ ಮೂಲಕ ಸಖತ್ತಾಗಿಯೇ ಆದಾಯವನ್ನು ಗಳಿಸುತ್ತದೆ. ಫಿಫಾ ಕುರಿತಾದ ಖ್ಯಾತ ಗೇಮಿಂಗ್ ಕಂಪನಿ ಎಲೆಕ್ಟಾನಿಕ್ ಆರ್ಟ್ಸ್ (EA) ಫುಟ್ಬಾಲ್‌ ಗೇಮ್ಸ್‌ಗಳನ್ನು ಪ್ರಸ್ತುತ ಪಡಿಸುತ್ತದೆ ಮತ್ತು ವರ್ಷಕ್ಕೆ ಇಂತಿಷ್ಟು ಎಂಬ ನಿಗದಿತ ಹಣವನ್ನು ಫಿಫಾಗೆ ಪಾವತಿಸುತ್ತದೆ.

20 ವರ್ಷಗಳ ದೀರ್ಘಾವಧಿಗೆ ಫಿಫಾ ಹಾಗೂ EA ನಡುವಿನ ಒಪ್ಪಂದದಿಂದಾಗಿ ಬರೋಬ್ಬರಿ 20 ಬಿಲಿಯನ್ ಡಾಲರ್ ಗೇಮಿಂಗ್ ಮಾರಾಟದಿಂದ ಪಡೆಯುತ್ತದೆ. ಅಂದ್ರೆ ಈ ಗೇಮಿಂಗ್ ಉತ್ಪಾದಕರು ಪ್ರತಿ ವರ್ಷ ಸುಮಾರು 150 ಮಿಲಿಯನ್ ಡಾಲರ್ ಹಣವನ್ನು ಬ್ರ್ಯಾಂಡಿಂಗ್ ಪರವಾನಗಿ ಶುಲ್ಕವಾಗಿ ಫಿಫಾಗೆ ಪಾವತಿಸುತ್ತದೆ.

2021ರಲ್ಲಿ ಫಿಫಾ ತನ್ನ ಬ್ರ್ಯಾಂಡಿಂಗ್ ಮತ್ತು ಪರವಾನಗಿ ಆದಾಯದ ಮೂಲಕ 180 ಮಿಲಿಯನ್ ಡಾಲರ್ ಹಣವನ್ನು ಸಂಪಾದಿಸಿದೆ. 2015ರಲ್ಲಿ ಫಿಫಾದ ಡಜನ್‌ಗಟ್ಟಲೆ ಎಕ್ಸಿಕ್ಯೂಟಿವ್‌ಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಸಾಭೀತಾದ ಬಳಿಕ ಅಮೆರಿಕಾದ ನ್ಯಾಯಾಂಗ ಇಲಾಖೆಯಿಂದ 201 ಮಿಲಿಯನ್ ಡಾಲರ್ ಪರಿಹಾರವನ್ನು ಫಿಫಾಗೆ ನೀಡಲಾಯಿತು.

Story first published: Thursday, November 17, 2022, 17:40 [IST]
Other articles published on Nov 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X