FIFA World Cup 2022: ಲಿಯೋನೆಲ್ ಮೆಸ್ಸಿ ಮ್ಯಾಜಿಕ್ ಗೋಲು; ಫೈನಲ್ ತಲುಪಿದ ಅರ್ಜೆಂಟೀನಾ

ಕತಾರ್‌ನಲ್ಲಿ ನಡೆಯುತ್ತಿರುವ 2022ರ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಕ್ರೊಯೇಷಿಯಾ ವಿರುದ್ಧ ಗೆದ್ದು ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಫೈನಲ್ ತಲುಪಿದೆ.
ಎರಡು ಬಾರಿಯ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಲುಸೇಲ್ ಕ್ರೀಡಾಂಗಣದಲ್ಲಿ ಬಹುಪಾಲು ಪ್ರೇಕ್ಷಕರ ಬೆಂಬಲದೊಂದಿಗೆ ಮಂಗಳವಾರ ತಡರಾತ್ರಿಯ ರೋಚಕ ಪಂದ್ಯದಲ್ಲಿ ಕ್ರೊಯೇಷಿಯಾವನ್ನು 3-0 ಗೋಲುಗಳಿಂದ ಸೋಲಿಸಿ ಎಂಟು ವರ್ಷಗಳಲ್ಲಿ ಎರಡನೇ ಬಾರಿ ವಿಶ್ವಕಪ್ ಫೈನಲ್ ತಲುಪಿತು.
ಕತಾರ್‌ನಲ್ಲಿ ಮತ್ತೊಮ್ಮೆ ವಿಶ್ವದ ಅತ್ಯುತ್ತಮ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಮಹತ್ವದ ಪಂದ್ಯದಲ್ಲಿ ಗೋಲು ಗಳಿಸಿ ತಮ್ಮ ತಂಡವನ್ನು ಫೈನಲ್‌ಗೆ ಕೊಂಡೊಯ್ದರು ಮತ್ತು ತಾನು ಫುಟ್ಬಾಲ್‌ನ ಶ್ರೇಷ್ಠ ಆಟಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಪೆನಾಲ್ಟಿ ಸ್ಪಾಟ್‌ನಿಂದ ಲಿಯೋನೆಲ್ ಮೆಸ್ಸಿ ಒಂದು ಗೋಲು ಗಳಿಸಿದರು ಮತ್ತು ಜೂಲಿಯನ್ ಅಲ್ವಾರೆಜ್ ಎರಡು ಬಾರಿ ಗೋಲು ಹೊಡೆದರು. ಎದುರಾಳಿ ಕ್ರೊಯೇಷಿಯಾ ತಂಡ ಒಂದೂ ಗೋಲು ಗಳಿಸಲು ವಿಫಲವಾಯಿತು.
ಬುಧವಾರ ತಡರಾತ್ರಿ ಫ್ರಾನ್ಸ್ ಮತ್ತು ಮೊರಾಕ್ಕೊ ನಡುವಿನ ಎರಡನೇ ಸೆಮಿಫೈನಲ್‌ನಲ್ಲಿ ಸೆಣಸಾಡಲಿದ್ದು, ಈ ಪಂದ್ಯದ ವಿಜೇತರು ಪ್ರಶಸ್ತಿಗಾಗಿ ನಡೆಯುವ ಭಾನುವಾರದ ಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಮುಖಾಮುಖಿಯಾಗಲಿದೆ.
ಅರ್ಜೆಂಟೀನಾ ಪರ ಅತಿ ಹೆಚ್ಚು ಗೋಲು ಗಳಿಸಿದ ಮೆಸ್ಸಿ
ಫಿಫಾ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಕ್ರೊಯೇಷಿಯಾ ವಿರುದ್ಧ ಅರ್ಜೆಂಟೀನಾ 1-0 ಮುನ್ನಡೆ ಸಾಧಿಸಲು ಲಿಯೋನೆಲ್ ಮೆಸ್ಸಿ ಪೆನಾಲ್ಟಿ ಸ್ಪಾಟ್‌ನಿಂದ ಗೋಲು ಗಳಿಸಿದರು.
ಆ ಗೋಲಿನೊಂದಿಗೆ ಅವರು ಗೇಬ್ರಿಯಲ್ ಬಟಿಸ್ಟುಟಾ ಅವರ ದಾಖಲೆಯನ್ನು ಮುರಿದರು. ಫಿಫಾ ವಿಶ್ವಕಪ್ ಪಂದ್ಯಾವಳಿಯ ಇತಿಹಾಸದಲ್ಲಿ ಅರ್ಜೆಂಟೀನಾ ದೇಶಕ್ಕಾಗಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆ ಬರೆದರು.
ಲಿಯೋನೆಲ್ ಮೆಸ್ಸಿ ಈಗ 2022ರ ಫಿಫಾ ಆವೃತ್ತಿಯಲ್ಲಿ ಐದು ಗೋಲುಗಳನ್ನು ಗಳಿಸಿದ್ದಾರೆ ಮತ್ತು ಗೋಲ್ಡನ್ ಶೂಗಾಗಿ ಓಟದಲ್ಲಿ ಫ್ರೆಂಚ್‌ನ ಕೈಲಿಯನ್ ಎಂಬಪ್ಪೆ ಅವರೊಂದಿಗೆ ಸಮಬಲ ಸಾಧಿಸಿದ್ದಾರೆ. ನಿರ್ದಿಷ್ಟ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರಿಗೆ ಗೋಲ್ಡನ್ ಶೂ ನೀಡಲಾಗುತ್ತದೆ.
ಲಿಯೋನೆಲ್ ಮೆಸ್ಸಿ ಈಗ ಹಂಗೇರಿಯ ಶ್ರೇಷ್ಠ ಸ್ಯಾಂಡರ್ ಕೊಕ್ಸಿಸ್ ಮತ್ತು ಜರ್ಮನ್ ಗೋಲ್-ಮೆಷಿನ್ ಜುರ್ಗೆನ್ ಕ್ಲಿನ್ಸ್‌ಮನ್ ಅವರೊಂದಿಗೆ 11 ಗೋಲುಗಳನ್ನು ಗಳಿಸಿದ್ದಾರೆ.
ಇದೇ ವೇಳೆ ಅರ್ಜೆಂಟೀನಾದ ಇತರ ಅಟಗಾರರಿಗಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಇದು ಅವರ 25ನೇ ವಿಶ್ವಕಪ್ ಪಂದ್ಯವಾಗಿದೆ. ಇದು ಲೋಥರ್ ಮ್ಯಾಥೌಸ್ ಅವರೊಂದಿಗೆ ಯಾವುದೇ ಆಟಗಾರನಿಗಿಂತ ಹೆಚ್ಚಿನ ಪಂದ್ಯವಾಡಿದ ಸ್ಥಾನ ಹಂಚಿಕೊಂಡಿದ್ದಾರೆ.
ಬ್ರೆಜಿಲ್‌ನ ಪೀಲೆ (12), ಜಸ್ಟ್ ಫಾಂಟೈನ್ (13), ಗೆರ್ಡ್ ಮುಲ್ಲರ್ (14), ಬ್ರೆಜಿಲ್‌ನ ರೊನಾಲ್ಡೊ (15) ಮತ್ತು ಜರ್ಮನಿಯ ಮಿರೊಸ್ಲಾವ್ ಕ್ಲೋಸ್ (16) ಮಾತ್ರ ಅರ್ಜೆಂಟೀನಾ ದಂತಕಥೆ ಲಿಯೋನೆಲ್ ಮೆಸ್ಸಿಗಿಂತ ಹೆಚ್ಚಿನ ಗೋಲು ಗಳಿಸಿದವರಾಗಿದ್ದಾರೆ. ಮುಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications