Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PKL 2022: ದಬಾಂಗ್ ಡೆಲ್ಲಿಗೆ ಸೋಲುಣಿಸಿದ ಬೆಂಗಾಲ್ ವಾರಿಯರ್ಸ್

Dabang delhi vs Bengal warriors

ಪ್ರೊ ಕಬಡ್ಡಿ ಲೀಗ್ 9 ಸ್ಥಾನದ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ದಬಾಂಗ್ ಡೆಲ್ಲಿಗೆ ಬೆಂಗಾಲ್ ವಾರಿಯರ್ಸ್ ಸೋಲಿನ ರುಚಿ ತೋರಿಸಿದೆ. ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವು ದಬಾಂಗ್ ಡೆಲ್ಲಿ ವಿರುದ್ಧ 35-30 ಅಂಕಗಳಿಂದ ಪಂದ್ಯವನ್ನ ಗೆದ್ದು ಬೀಗಿದೆ. ಈ ಮೂಲಕ ಸೀಸನ್‌ನಲ್ಲಿ ಡೆಲ್ಲಿ ಎರಡನೇ ಸೋಲನ್ನ ಅನುಭವಿಸಿದೆ.

ಮೊದಲಾರ್ಧದಲ್ಲಿ 15-13 ಪಾಯಿಂಟ್ಸ್ ಮೂಲಕ ಮೇಲುಗೈ ಸಾಧಿಸಿದ ಬೆಂಗಾಲ್ ವಾರಿಯರ್ಸ್ ತಂಡವು ದ್ವಿತಿಯಾರ್ಧದಲ್ಲೂ ಮಿಂಚಿನ ದಾಳಿ ನಡೆಸಿತು. 20-17 ಪಾಯಿಂಟ್ಸ್‌ಗಳ ಲೀಡ್ ಪಡೆದ ಬೆಂಗಾಲ್‌ ಟ್ಯಾಕಲ್‌ಗಳ ಮೂಲಕ ಡೆಲ್ಲಿಗೆ ದಂಗು ಬಡಿಸಿತು.

ದ್ವಿತಿಯಾರ್ಧದಲ್ಲಿ 20 ಪಾಯಿಂಟ್ಸ್ ಕಲೆಹಾಕಿದ ಬೆಂಗಾಲ್ ವಾರಿಯರ್ಸ್ ಟ್ಯಾಕಲ್ ಮೂಲಕವೇ 10 ಪಾಯಿಂಟ್ಸ್ ಸಂಪಾದಿಸಿದೆ. ರೈಡಿಂಗ್‌ನಲ್ಲಿ ಡೆಲ್ಲಿ ಕೊಂಚ ಮುನ್ನಡೆ ಸಾಧಿಸಿದ್ರು ಸಹ ಒಟ್ಟಾರೆ ಪಾಯಿಂಟ್ಸ್‌ನಲ್ಲಿ ಮೂರು ಪಾಯಿಂಟ್ಸ್ ಹಿಂದೆ ಬಿದ್ದಿತು. ಒಟ್ಟಾರೆ ಪಂದ್ಯದಲ್ಲಿ ಐದು ಪಾಯಿಂಟ್ಸ್‌ ಹಿನ್ನಡೆ ಸಾಧಿಸುವ ಮೂಲಕ ಬೆಂಗಾಲ್‌ ವಾರಿಯರ್ಸ್‌ಗೆ ಶರಣಾಗಿದೆ.

ಬೆಂಗಾಲ್ ವಾರಿಯರ್ಸ್ ಪರ ರೈಡಿಂಗ್‌ನಲ್ಲಿ ಮಿಂಚಿದ ಮಣಿಂದರ್ ಸಿಂಗ್ 10 ಪಾಯಿಂಟ್ಸ್ ದಾಖಲಿಸಿದ್ರೆ, ವೈಭವ್ ಗಾರ್ಜೆ 6, ಗಿರೀಶ್ ಮಾರುತಿ 5 ಅಂಕ ಸಂಪಾದಿಸಿದ್ರು. ದಬಾಂಗ್ ಡೆಲ್ಲಿ ಪರ ನಾಯಕ ನವೀನ್ ಕುಮಾರ್ 10 ಪಾಯಿಂಟ್ಸ್ ಸಂಪಾದಿಸಿ ಏಕಾಂಗಿ ಹೋರಾಟ ನಡೆಸಿದ್ರು.

ಈ ಗೆಲುವಿನೊಂದಿಗೆ ಬೆಂಗಾಲ್ ವಾರಿಯರ್ಸ್ ಯು ಮುಂಬಾವನ್ನು ಹಿಂದಿಕ್ಕಿ ಪಾಯಿಂಟ್ಸ್ ಟೇಬಲ್‌ನಲ್ಲಿ ಐದನೇ ಸ್ಥಾನ ಅಲಂಕರಿಸಿದೆ. ಆಡಿರುವ ಏಳು ಪಂದ್ಯಗಳಲ್ಲಿ ಐದು ಸ್ಥಾನ ಗೆದ್ದಿರುವ ದಬಾಂಗ್ ಡೆಲ್ಲಿ ಪಂದ್ಯ ಸೋತರು ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ಪ್ರೊ ಕಬಡ್ಡಿ ಸೀಸನ್ 2022ರ ಸಂಪೂರ್ಣ ಪಾಯಿಂಟ್ಸ್‌ ಟೇಬಲ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

Story first published: Wednesday, October 26, 2022, 22:03 [IST]
Other articles published on Oct 26, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+