Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PKL 2022: ತೆಲುಗು ಟೈಟನ್ಸ್ ವಿರುದ್ಧ ಪಿಂಕ್ ಪ್ಯಾಂಥರ್ಸ್‌ ಭಾರೀ ಗೆಲುವು, ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ!

Jaipur pink panthers

ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ 9ನೇ ಸೀಸನ್‌ ಶನಿವಾರದ(ಅ.23) ಪಂದ್ಯದಲ್ಲಿ ತೆಲುಗು ಟೈಟನ್ಸ್ ವಿರುದ್ಧ ಜೈಪುರ್ ಪಿಂಕ್ ಪ್ಯಾಂಥರ್ಸ್‌ ಸುಲಭ ಗೆಲುವು ದಾಖಲಿಸಿದ್ದು, 51-27 ಅಂತರದ ಭಾರೀ ಗೆಲುವು ಪಡೆದಿದೆ.

ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿರುವ ತೆಲುಗು ಟೈಟನ್ಸ್‌ ಆಟದ ಆರಂಭದಿಂದಲೂ ನೀರಸ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳನ್ನ ನಿರಾಸೆ ಮೂಡಿಸಿತು. ಅದೇ ತದ್ವಿರುದ್ಧವಾಗಿ ಆಟವಾಡಿದ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮಾಲೀಕತ್ವದ ಪಿಂಕ್ ಪ್ಯಾಂಥರ್ಸ್ ಅಬ್ಬರದ ಆಟವಾಡಿದ ಮೊದಲಾರ್ಧರದಲ್ಲಿ 19 ಪಾಯಿಂಟ್ಸ್ ಅಂತರ ಪಡೆಯಿತು.

ದ್ವಿತಿಯಾರ್ಧದ ಪಂದ್ಯದಲ್ಲಿ ಎದುರಾಳಿಗೆ ಯಾವುದೇ ಅವಕಾಶ ನೀಡದ ಪಿಂಕ್ ಫ್ಯಾಂಥರ್ಸ್ ಮಿಂಚಿನ ರೈಡ್‌ಗಳು ಹಾಗೂ ಟ್ಯಾಕಲ್‌ಗಳ ಮೂಲಕ ಎದುರಾಳಿಯನ್ನ ಕಟ್ಟಿಹಾಕಿತು.

25 ರೈಡಿಂಗ್ ಪಾಯಿಂಟ್ಸ್, 17 ಟ್ಯಾಕಲ್ ಪಾಯಿಂಟ್ಸ್‌, 8 ಆಲೌಟ್ ಪಾಯಿಂಟ್ಸ್ ಜೊತೆಗೆ ಒಟ್ಟು 51 ಪಾಯಿಂಟ್‌ಗಳನ್ನ ಸಂಪಾದಿಸಿತು. ಅದೇ ತೆಲುಗು ಟೈಟನ್ಸ್‌ 19 ರೈಡ್‌ ಪಾಯಿಂಟ್ಸ್‌ ಜೊತೆಗೆ ಟ್ಯಾಕಲ್ ಮಾಡುವಲ್ಲಿ ಎಡವಿ ಕೇವಲ 6 ಪಾಯಿಂಟ್ಸ್ ಪಡೆಯಿತು. ಜೊತೆಗೆ ಪಂದ್ಯದ ಕೊನೆಗೆ 27 ಪಾಯಿಂಟ್ಸ್‌ ಸಂಪಾದಿಸಿ 24 ಪಾಯಿಂಟ್ಸ್ ಅಂತರದ ಸೋಲನ್ನ ಅನುಭವಿಸಿತು.

ಪಿಂಕ್ ಪ್ಯಾಂಥರ್ಸ್ ಪರ ಮಿಂಚಿದ ರೈಡರ್ ಅರ್ಜುನ್ ದೇಶ್ವಾಲ್ 10 ಪಾಯಿಂಟ್‌ ಸಹಿತ 12 ಪಾಯಿಂಟ್ ಕಲೆಹಾಕಿದರು. ಪೋಸ್ಟರ್ ಬಾಯ್ ರಾಹುಲ್ ಚೌಧರಿ 7 ಪಾಯಿಂಟ್ಸ್‌ ತನ್ನದಾಗಿಸಿಕೊಂಡರು. ಇನ್ನು ಟ್ಯಾಕಲ್‌ನಲ್ಲಿ ಮಿಂಚಿದ ಅಂಕುಶ್, ಸುನಿಲ್ ಕುಮಾರ್ ತಲಾ 4 ಪಾಯಿಂಟ್ಸ್ ಸಂಪಾದಿಸಿದರು.

ಮತ್ತೊಂದೆಡೆ ತೆಲುಗು ಟೈಟನ್ಸ್ ಪರ ಏಕಾಂಗಿ ಹೋರಾಟ ಪ್ರದರ್ಶಿಸಿದ ಆದರ್ಶ್‌ 8 ರೈಡ್ ಪಾಯಿಂಟ್ಸ್ ಸೇರಿ 9 ಪಾಯಿಂಟ್ಸ್‌, ಮೋನು ಗೋಯತ್ 5 ಪಾಯಿಂಟ್ಸ್‌ ಪಡೆದಿದ್ದೇ ತಂಡದ ಪರ ಗರಿಷ್ಠ ಸ್ಕೋರರ್ ಆಗಿದ್ದರು.

ಈ ಸೋಲಿನ ಮೂಲಕ ತೆಲುಗು ಟೈಟನ್ಸ್‌ ಪಾಯಿಂಟ್ಸ್ ಪಟ್ಟಿಯ ತಳಭಾಗದಲ್ಲೇ ಉಳಿದ್ರೆ, ಜೈಪುರ್ ಪಿಂಕ್ ಪ್ಯಾಂಥರ್ಸ್‌ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆಡಿರುವ 6 ಪಂದ್ಯಗಳಲ್ಲಿ ಪ್ಯಾಂಥರ್ಸ್‌ 5 ಗೆಲುವು ಮತ್ತು 1 ಸೋಲನ್ನ ಕಂಡಿದ್ದು 26 ಪಾಯಿಂಟ್ಸ್ ಹೊಂದಿದೆ. ಅಷ್ಟೇ ಪಾಯಿಂಟ್ಸ್ ಹೊಂದಿರುವ ದಬಾಂಗ್ ಡೆಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದು, ಬೆಂಗಳೂರು ಬುಲ್ಸ್‌ 3ನೇ ಸ್ಥಾನದಲ್ಲಿದೆ.

ಪ್ರೊ ಕಬಡ್ಡಿ ಪೂರ್ಣ ಪಾಯಿಂಟ್ಸ್‌ ಟೇಬಲ್ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

PKL 2022 ಪಾಯಿಂಟ್ಸ್‌ ಟೇಬಲ್

Story first published: Saturday, October 22, 2022, 22:10 [IST]
Other articles published on Oct 22, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+