
ಪುಣೆಯ ಶ್ರೀ ಶಿವಛತ್ರಪತಿ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 9ನೇ ಸೀನಸ್‌ನ 82ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ಪಾಟ್ನಾ ಪೈರೇಟ್ಸ್ ನಡುವಿನ ಪಂದ್ಯವು 33-33 ಪಾಯಿಂಟ್ಸ್ ಮೂಲಕ ರೋಚಕ ಟೈನಲ್ಲಿ ಅಂತ್ಯಗೊಂಡಿದೆ.
ಮೊದಾಲಾರ್ಧದಲ್ಲಿ ಅಬ್ಬರಿಸಿದ ತಮಿಳ್ ತಲೈವಾಸ್ ತಂಡವು ರೈಡಿಂಗ್‌ನಲ್ಲಿ 13 ಪಾಯಿಂಟ್ಸ್ ಕಬಳಿಸಿದ್ರ ಜೊತೆಗೆ ಟ್ಯಾಕಲ್‌ನಲ್ಲಿ ಮಿಂಚುವ ಮೂಲಕ 20 ಪಾಯಿಂಟ್ಸ್ ಪಡೆಯಿತು. ಪಾಟ್ನಾ ಪರ ರೈಡಿಂಗ್‌ನಲ್ಲಿ ಸಚಿನ್ ಮಿಂಚಿನ ದಾಳಿಯಿಂದಾಗಿ ಪಾಟ್ನಾ ತಂಡವು 20-14 ಪಾಯಿಂಟ್‌ಗಳ ಅಂತರ ಕಾಯ್ದುಕೊಂಡಿತು.
ಆರು ಪಾಯಿಂಟ್‌ಗಳ ಮುನ್ನಡೆಯೊಂದಿಗೆ ವಿರಾಮದ ಬಳಿಕ ಮತ್ತೆ ಕಣಕ್ಕಿಳಿದ ಪಾಟ್ನಾಗೆ ಎದುರಾಳಿ ತಮಿಳ್ ತಲೈವಾಸ್ ಅಚ್ಚರಿಯ ತಿರುಗೇಟು ನೀಡಿತು. ತಮಿಳ್ ತಲೈವಾಸ್ ಪರ ನರೇಂದರ್ ಎದುರಾಳಿ ಕೋರ್ಟ್‌ನ ಬಹುತೇಕ ಆಟಗಾರರನ್ನ ಔಟ್ ಮಾಡುವ ಮೂಲಕ ಅಬ್ಬರಿಸಿದರು. ದ್ವಿತಿಯಾರ್ಧದಲ್ಲಿ ಆರು ಪಾಯಿಂಟ್ ಮುನ್ನಡೆ ಸಾಧಿಸುವ ಮೂಲಕ ಪಂದ್ಯವನ್ನು ರೋಚಕ ಟೈನಲ್ಲಿ ಕೊನೆಗೊಳಿಸಿತು.
ಪಾಟ್ನಾ ಪರ ರೈಡಿಂಗ್‌ನಲ್ಲಿ ಸಚಿನ್ 14, ಆಲ್‌ರೌಂಡರ್ ರೋಹಿತ್ ಗುಲಿಯಾ 9 ಪಾಯಿಂಟ್ಸ್ ಮೂಲಕ ತಂಡದ ಪರ ಬೆಸ್ಟ್ ಸ್ಕೋರರ್ ಆಗಿ ಗುರುತಿಸಿಕೊಂಡರು. ಇನ್ನು ತಮಿಳ್ ತಲೈವಾಸ್ ಪರ ರೈಡಿಂಗ್‌ನಲ್ಲಿ ಅಬ್ಬರಿಸಿದ ನರೇಂದರ್ 16 ಪಾಯಿಂಟ್ಸ್ ಕಬಳಿಸುವ ಮೂಲಕ ಲೀಡಿಂಗ್ ಸ್ಕೋರರ್ ಎನಿಸಿಕೊಂಡರು. ನರೇಂದರ್‌ಗೆ ಉತ್ತಮ ಸಾಥ್ ನೀಡಿದ ಅಜಿಂಕ್ಯ ಪವಾರ್ 7 ಪಾಯಿಂಟ್ ಕಲೆಹಾಕಿದರು. ಸಾಹಿಲ್ ಗುಲಿಯಾ 4 ಪಾಯಿಂಟ್ಸ್ ಕಬಳಿಸಿದರು.
ಪಂದ್ಯವು 33-33 ಪಾಯಿಂಟ್ಸ್ ಮೂಲಕ ಟೈನಲ್ಲಿ ಅಂತ್ಯಗೊಂಡ ಪರಿಣಾಮ ಉಭಯ ತಂಡಗಳಿಗೆ ಪಾಯಿಂಟ್ ಹಂಚಿಕೆಯಾಗಿದೆ. ಈ ಪಂದ್ಯದ ಬಳಿಕ ಪಾಟ್ನಾ ಪೈರೇಟ್ಸ್ ಆಡಿರುವ 14 ಪಂದ್ಯಗಳಲ್ಲಿ 6 ಗೆಲುವು, 5 ಸೋಲು, 3 ಟೈ ಮೂಲಕ ಒಟ್ಟು 41 ಪಾಯಿಂಟ್ಸ್ ಕಲೆಹಾಕಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಐದನೇ ಸ್ಥಾನ ಅಲಂಕರಿಸಿದೆ.
ಇನ್ನು ಆಡಿರುವ 14 ಪಂದ್ಯಗಳಲ್ಲಿ ತಮಿಳ್ ತಲೈವಾಸ್ 5 ಗೆಲುವು, 6 ಸೋಲು ಮತ್ತು 3 ಟೈ ಮೂಲಕ 38 ಪಾಯಿಂಟ್ಸ್ ಕಲೆಹಾಕಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ 7ನೇ ಸ್ಥಾನ ಅಲಂಕರಿಸಿದೆ.
ಪ್ರೊ ಕಬಡ್ಡಿ ಲೀಗ್ 9ನೇ ಸೀಸನ್‌ನ ಸಂಪೂರ್ಣ ಪಾಯಿಂಟ್ಸ್ ಟೇಬಲ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ