PKL 2022: ಪುಣೇರಿ ಪಲ್ಟನ್ ವಿರುದ್ಧ 1 ಪಾಯಿಂಟ್ ರೋಚಕ ಗೆಲುವು ಸಾಧಿಸಿದ ಯು ಮುಂಬಾ

ಪುಣೆಯ ಶ್ರೀ ಶಿವಛತ್ರಪತಿ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 9ನೇ ಸೀನಸ್‌ನ 71ನೇ ಪಂದ್ಯದಲ್ಲಿ ಯು ಮುಂಬಾ ತಂಡವು ಪುಣೇರಿ ಪಲ್ಟನ್ ವಿರುದ್ಧ 34-33 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದೆ. ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಯು ಮುಂಬಾ ತಂಡವು ಕೊನೆಯ ನಿಮಿಷಗಳಲ್ಲಿ 1 ಪಾಯಿಂಟ್ ರೋಚಕ ಗೆಲುವು ಸಾಧಿಸಿತು.
ಮೊದಲಾರ್ಧದಲ್ಲಿ ಉಭಯ ತಂಡಗಳು 15-15 ಪಾಯಿಂಟ್ಸ್‌ನೊಂದಿಗೆ ಸಖತ್ತಾಗಿ ಪೈಪೋಟಿ ನೀಡುವ ಮೂಲಕ ಸಮಬಲ ಸಾಧಿಸಿದವು. ರೈಡಿಂಗ್‌ನಲ್ಲಿ ತಲಾ 9 ಪಾಯಿಂಟ್ಸ್ ಮೂಲಕ ಪೈಪೋಟಿ ನಡೆಸಿದ ಉಭಯ ತಂಡಗಳು ಸುಲಭವಾಗಿ ಪಾಯಿಂಟ್ಸ್ ಬಿಟ್ಟುಕೊಡಲು ಸಿದ್ಧರಿರಲಿಲ್ಲ.
ದ್ವಿತಿಯಾರ್ಧದಲ್ಲಿ ಭರ್ಜರಿಯಾಗಿ ಪೈಪೋಟಿವೊಡ್ಡಿದ ಉಭಯ ತಂಡಗಳು ಆಕ್ರಮಣಾಕಾರಿ ಆಟಕ್ಕಿಳಿದವು. ಪುಣೇರಿ ಪಲ್ಟನ್ ರೈಡಿಂಗ್‌ನಲ್ಲಿ 14 ಪಾಯಿಂಟ್ಸ್ ಪಡೆದ್ರೆ, ಯು ಮುಂಬಾ 10 ಪಾಯಿಂಟ್ಸ್ ತನ್ನದಾಗಿಸಿಕೊಂಡಿತು. ಆದ್ರೆ ಯು ಮುಂಬಾ ಟ್ಯಾಕಲ್‌ನಲ್ಲಿ ಮಿಂಚುವ ಮೂಲಕ 7 ಪಾಯಿಂಟ್ಸ್ ತನ್ನದಾಗಿಸಿಕೊಂಡಿತು. ಪರಿಣಾಮ ಕೇವಲ ಒಂದು ಪಾಯಿಂಟ್‌ಗಳ ರೋಚಕ ಗೆಲುವಿನೊಂದಿಗೆ ಅಮೂಲ್ಯ ಪಾಯಿಂಟ್ಸ್ ತನ್ನದಾಗಿಸಿಕೊಂಡಿತು.
ಯು ಮುಂಬಾ ಪರ ರೈಡಿಂಗ್‌ನಲ್ಲಿ ಮಿಂಚಿದ ಗುಮಾ ಸಿಂಗ್ 13, ಆಶಿಶ್ 6 ಪಾಯಿಂಟ್ಸ್ ಕಬಳಿಸಿದ್ರು. ನಾಯಕ ರಿಂಕು ಮತ್ತು ಕಿರಣ್ ಕ್ರಮವಾಗಿ 4, 3 ಪಾಯಿಂಟ್ಸ್‌ಗಳನ್ನು ಟ್ಯಾಕಲ್‌ನಲ್ಲಿ ಪಡೆದರು. ಇನ್ನು ಪುಣೇರಿ ಪಲ್ಟನ್ ಪರ ರೈಡಿಂಗ್‌ನಲ್ಲಿ ಅಬ್ಬರಿಸಿದ ಮೋಯಿತ್ ಗೋಯತ್ 13, ಅಸ್ಲಾಂ ಇನಾಮ್ದಾರ್ 8 ಪಾಯಿಂಟ್ಸ್ ಕಲೆಹಾಕಿದರು.
ಯು ಮುಂಬಾ ತಂಡವು ಈ ಗೆಲುವಿನೊಂದಿಗೆ 12 ಪಂದ್ಯಗಳಲ್ಲಿ 7ನೇ ಗೆಲುವು ಸಂಪಾದಿಸಿ 38 ಪಾಯಿಂಟ್ಸ್ ಕಲೆಹಾಕಿದ್ದು 4 ಸ್ಥಾನಕ್ಕೆ ಜಿಗಿದಿದೆ. ಅಷ್ಟೇ ಅಂಕ ಸಂಪಾದಿಸಿರುವ ಪುಣೇರಿ ಪಲ್ಟನ್ 5ನೇ ಸ್ಥಾನದಲ್ಲಿದೆ. ಇನ್ನು ಪಂದ್ಯ ಸೋತರೂ ಅಗ್ರಸ್ಥಾನದಲ್ಲಿ ರಾರಾಜಿಸಿರುವ ಪುಣೇರಿ ಪಲ್ಟನ್ 13 ಪಂದ್ಯಗಳಲ್ಲಿ 7 ಗೆಲುವು, 4 ಸೋಲು, 2 ಟೈನಿಂದಾಗಿ 44 ಪಾಯಿಂಟ್ಸ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ.
ಪಿಕೆಎಲ್ 9ನೇ ಸೀಸನ್‌ನ ಸಂಪೂರ್ಣ ಪಾಯಿಂಟ್ಸ್ ಟೇಬಲ್ ನೋಡಲು ಇಲ್ಲಿ ಕ್ಲಿಕ್ ಮಾಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications