For Quick Alerts
ALLOW NOTIFICATIONS  
For Daily Alerts

36ನೇ ರಾಷ್ಟ್ರೀಯ ಗೇಮ್ಸ್‌ಗೆ ಅಮಿತ್‌ ಶಾರಿಂದ ಚಾಲನೆ: ಅಧಿಕೃತ ಗೀತೆ ಮತ್ತು ಲಾಂಛನ ಅನಾವರಣ

36th National Games

ಸೆಪ್ಟೆಂಬರ್ 29ರಿಂದ ಅಕ್ಟೋಬರ್ 12ರ ವರೆಗೂ ಗುಜರಾತ್ ರಾಜ್ಯದ ಆರು ನಗರಗಳಲ್ಲಿ ನಡೆಯುವ 36ನೇ ರಾಷ್ಟ್ರೀಯ ಕ್ರೀಡಾಕೂಟದ ಅಧಿಕೃತ ಗೀತೆ ಮತ್ತು ಮ್ಯಾಸ್ಕಟ್ (ಲಾಂಛನ) ಅನಾವರಣ ಮಾಡಲಾಗಿದೆ. 7 ವರ್ಷಗಳ ಬಳಿಕ ರಾಷ್ಟ್ರೀಯ ಗೇಮ್ಸ್ ನಡೆಯುತ್ತಿದ್ದು, ಅದಕ್ಕೆ ಗುಜರಾತ್ ಆತಿಥ್ಯ ವಹಿಸ್ತಿದೆ.

ಅಧಿಕೃತ ಗೀತೆ ಮತ್ತು ಮ್ಯಾಸ್ಕಟ್ (ಲಾಂಛನ) ಅನಾವರಣ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಹಮದಾಬಾದ್ ಅನ್ನು ಸದ್ಯದಲ್ಲೇ ವಿಶ್ವದ ಅತಿದೊಡ್ಡ ಕ್ರೀಡಾ ನಗರವಾಗಿ ಅಭಿವೃದ್ಧಿ ಮಾಡಲಿದ್ದೇವೆ ಎಂದು ಘೋಷಿಸಿದ್ದಾರೆ.

ಅಹಮದಾಬಾದ್ ವಿಶ್ವದ ಅತಿ ದೊಡ್ಡ ಕ್ರೀಡಾ ನಗರವಾಗಲಿದೆ!

ಅಹಮದಾಬಾದ್ ವಿಶ್ವದ ಅತಿ ದೊಡ್ಡ ಕ್ರೀಡಾ ನಗರವಾಗಲಿದೆ!

''10 ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದಾಗ ಖೇಲ್ ಮಹಾಕುಂಭ್ ಆರಂಭಿಸಿದ್ದರು. ಆ ಸಮಯದಲ್ಲಿ ಗುಜರಾತ್ ಜಾಗತಿಕ ಕ್ರೀಡಾ ಭೂಪಟದಲ್ಲಿ ಕಾಣಸಿಗುತ್ತಿರಲಿಲ್ಲ. ಆದರೆ ಈಗ ವಿಶ್ವದ ಅತಿದೊಡ್ಡ ಕ್ರೀಡಾಂಗಣ ಎನ್ನುವ ಖ್ಯಾತಿ ಪಡೆದಿರುವ ನರೇಂದ್ರ ಮೋದಿ ಕ್ರೀಡಾಂಗಣವಿದೆ. ಅತಿ ಶೀಘ್ರದಲ್ಲಿ ಅಹಮದಾಬಾದ್ ಅನ್ನು ವಿಶ್ವದ ಅತಿದೊಡ್ಡ ಕ್ರೀಡಾ ನಗರವಾಗಿ ಅಭಿವೃದ್ಧಿ ಮಾಡಲಿದ್ದೇವೆ' ಎಂದು ಘೋಷಿಸಿದರು.

ಗುಜರಾತಿಯಲ್ಲಿ ಸಿಂಹವನ್ನು 'ಸಾವಜ್' ಎಂದು ಕರೆಯಲಾಗುತ್ತದೆ. ಇದನ್ನೇ ಕ್ರೀಡಾಕೂಟದ ಅಧಿಕೃತ ಮ್ಯಾಸ್ಕಟ್ ಆಗಿ ರೂಪಿಸಲಾಗಿದೆ. ಅತಿವೇಗವಾಗಿ ಬೆಳೆಯುತ್ತಿರುವ ಭಾರತ, ಜಾಗತಿಕ ಮಟ್ಟದಲ್ಲಿ ನಂ.1 ಆಗಲಿದೆ ಎನ್ನುವುದನ್ನು ಈ ಲಾಂಛನವು ಪ್ರತಿನಿಧಿಸಲಿದೆ.

ಕ್ರೀಡಾಕೂಟದ ಅಧಿಕೃತ ಗೀತೆಯು ಘೋಷಣೆ

ಕ್ರೀಡಾಕೂಟದ ಅಧಿಕೃತ ಗೀತೆಯು ಘೋಷಣೆ

'ಇನ್ನು ಜುಡೇಗಾ ಇಂಡಿಯಾ, ಜೀತೇಗಾ ಇಂಡಿಯಾ' ಎನ್ನುವುದು ಕ್ರೀಡಾಕೂಟದ ಅಧಿಕೃತ ಗೀತೆ ಆಗಿದೆ. ಖ್ಯಾತ ಬಾಲಿವುಡ್ ಗಾಯಕ ಸುಖ್ವಿಂದರ್ ಸಿಂಗ್ ಈ ಗೀತೆಯನ್ನು ಹಾಡಿದ್ದಾರೆ.

ಗಾಂಧಿನಗರದ ಸಂಸದರೂ ಆಗಿರುವ ಕೇಂದ್ರ ಗೃಹ ಸಚಿವ ಶಾ ಅದ್ಧೂರಿ ಕರ್ಟನ್ ರೈಸರ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ಕಾರ್ಯಕ್ರಮದಲ್ಲಿ ಗುಜರಾತ್‌ನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸಹ ಪಾಲ್ಗೊಂಡಿದ್ದರು. ಅಲ್ಲದೆ 10000ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು , ಕಾರ್ಯಕ್ರಮದ ಮಹತ್ವವನ್ನ ಸಾರಿದೆ.

''ಒಂದು ಕಾಲದಲ್ಲಿ ನಾವು ಗುಜ್ಜುಗಳನ್ನು ಕೇವಲ ವ್ಯಾಪಾರಿಗಳನ್ನಾಗಿ ನೋಡಲಾಗುತ್ತಿತ್ತು. ಆದರೆ ಮೋದಿ ಅವರು ಖೇಲ್ ಮಹಾಕುಂಭ್ ಆರಂಭಿಸಿ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದರು. ಈ ಆವೃತ್ತಿಯಲ್ಲಿ ಬರೋಬ್ಬರಿ 55 ಲಕ್ಷ ಯುವಕರು ಪಾಲ್ಗೊಂಡಿದ್ದರು ಎನ್ನುವುದು ಬಹಳ ವಿಶೇಷ. ಕೂಟದಲ್ಲಿ ವಿಜೇತರಿಗೆ ಒಟ್ಟು 29 ಕೋಟಿ ರುಪಾಯಿ ಬಹುಮಾನ ಮೊತ್ತವನ್ನು ವಿತರಿಸಿದೆವು ಎನ್ನುವುದು ಹೆಮ್ಮೆಯ ವಿಚಾರ'' ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದರು.

ಸೂರ್ಯಕುಮಾರ್ ಯಾದವ್‌ನನ್ನ ಕೆಣಕಿದ ಪಾಕಿಗಳು: ರಿಜ್ವಾನ್, ಶದಾಬ್ ಸ್ಲೆಡ್ಜಿಂಗ್ ವೀಡಿಯೋ

7 ವರ್ಷಗಳ ಬಳಿಕ ನಡೆಯುತ್ತಿದೆ ರಾಷ್ಟ್ರೀಯ ಗೇಮ್ಸ್

7 ವರ್ಷಗಳ ಬಳಿಕ ನಡೆಯುತ್ತಿದೆ ರಾಷ್ಟ್ರೀಯ ಗೇಮ್ಸ್

ಹೌದು 2015ರ ಬಳಿಕ ಬರೋಬ್ಬರಿ ಏಳು ವರ್ಷಗಳ ಗೇಮ್ಸ್ ದೇಶ ಸಾಕ್ಷಿಯಾಗುತ್ತಿದ್ದು, 36ನೇ ರಾಷ್ಟ್ರೀಯ ಗೇಮ್ಸ್‌ಗೆ ಅಹಮದಾದ್ ಸಾಕ್ಷಿಯಾಗುತ್ತಿದೆ.

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಈ ಕುರಿತು ಮಾತನಾಡಿ ''7 ವರ್ಷಗಳ ಬಳಿಕ ರಾಷ್ಟ್ರೀಯ ಗೇಮ್ಸ್ ನಡೆಯುತ್ತಿರುವುದು ಖುಷಿ ನೀಡಿದೆ. ಈ ಆವೃತ್ತಿ ಈ ಹಿಂದಿನ ಆವೃತ್ತಿಗಳಿಗಿಂತ ಅತಿದೊಡ್ಡ ಹಾಗೂ ಗ್ರ್ಯಾಂಡ್ ಆಗಿ ಇರಲಿದೆ'' ಎಂದರು.

''ಈ ರೀತಿಯ ಕ್ರೀಡಾಕೂಟಗಳನ್ನು ಆಯೋಜಿಸಲು ಹಲವು ವರ್ಷಗಳ ಸಿದ್ಧತೆ ಅಗತ್ಯವಿರುತ್ತದೆ. ಆದರೆ ಗುಜರಾತ್ ಮೂರು ತಿಂಗಳುಗಳಿಗಿಂತ ಕಡಿಮೆ ಸಮಯದಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಕ್ರೀಡಾಪಟುಗಳು, ಅಧಿಕಾರಿಗಳು, ಸಹಾಯಕ ಸಿಬ್ಬಂದಿ ಎಲ್ಲಾ ಸೇರಿ ಕ್ರೀಡಾಕೂಟದಲ್ಲಿ 12000ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ'' ಎಂದು ಠಾಕೂರ್ ಹೇಳಿದರು.

ಕೆಟ್ಟ ಶಾಟ್‌ ಹೊಡೆದು ಔಟಾದ ರಿಷಭ್ ಪಂತ್‌: ತರಾಟೆಗೆ ತೆಗೆದುಕೊಂಡ ನಾಯಕ ರೋಹಿತ್ ಶರ್ಮಾ

ಗುಜರಾತ್‌ನ 6 ನಗರಗಳು ರಾಷ್ಟ್ರೀಯ ಗೇಮ್ಸ್‌ಗೆ ಆತಿಥ್ಯ

ಗುಜರಾತ್‌ನ 6 ನಗರಗಳು ರಾಷ್ಟ್ರೀಯ ಗೇಮ್ಸ್‌ಗೆ ಆತಿಥ್ಯ

36ನೇ ರಾಷ್ಟ್ರೀಯ ಕ್ರೀಡಾಕೂಟವು 7 ವರ್ಷಗಳ ಬಳಿಕ ಆಯೋಜನೆಗೊಳ್ಳುತ್ತಿದ್ದು, ಸೆಪ್ಟೆಂಬರ್ 29ರಿಂದ ಅಕ್ಟೋಬರ್ 12ರ ವರೆಗೂ ನಡೆಯಲಿದೆ. ಗುಜರಾತ್‌ನ 6 ನಗರಗಳಾದ ಅಹಮದಾಬಾದ್, ಗಾಂಧಿನಗರ, ಸೂರತ್, ವಡೋದರ, ರಾಜ್‌ಕೋಟ್ ಮತ್ತು ಭಾವ್‌ನಗರಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸೈಕ್ಲಿಂಗ್ ಸ್ಪರ್ಧೆಗಳನ್ನು ನವದೆಹಲಿಯಲ್ಲಿ ನಡೆಸಲಾಗುತ್ತದೆ.

28 ರಾಜ್ಯ ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 7000ಕ್ಕೂ ಹೆಚ್ಚು ಕ್ರೀಡಾಪಟುಗಳು, 36ಕ್ಕೂ ಹೆಚ್ಚು ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಇದೇ ಮೊದಲ ಬಾರಿಗೆ ಕ್ರೀಡಾಕೂಟದಲ್ಲಿ ದೇಸಿ ಕ್ರೀಡೆಗಳಾದ ಮಲ್ಲಕಂಭ ಮತ್ತು ಯೋಗಾಸನವನ್ನು ಸೇರ್ಪಡೆಗೊಳಿಸಲಾಗಿದೆ. ಕಳೆದ ಆವೃತ್ತಿಯ ರಾಷ್ಟ್ರೀಯ ಕ್ರೀಡಾಕೂಟವು 2015ರಲ್ಲಿ ಕೇರಳದಲ್ಲಿ ನಡೆದಿತ್ತು.

Story first published: Tuesday, September 6, 2022, 9:14 [IST]
Other articles published on Sep 6, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+