
ಸರಿಯಾದ ಸಮಯದಲ್ಲಿ ಕೈ ಕೊಟ್ಟ ಮಧ್ಯಮ ಕ್ರಮಾಂಕದ ಬ್ಯಾಟರ್ಸ್
ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ತಲಾ 28 ರನ್‌ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕ ಭದ್ರವಾಗಿ ನೆಲೆಯೂರಿದ್ದ ವಿರಾಟ್ ಕೊಹ್ಲಿಗೆ ಟೀಂ ಇಂಡಿಯಾ ಬ್ಯಾಟರ್‌ಗಳು ಸಾಥ್ ನೀಡಲು ವಿಫಲಗೊಂಡರು. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. 10 ಎಸೆತಗಳಲ್ಲಿ 13 ರನ್ ಕಲೆಹಾಕಿದ್ದ ಸೂರ್ಯ, ಮೊಹಮ್ಮದ್ ನವಾಜ್ ಬೌಲಿಂಗ್‌ನಲ್ಲಿ ಆಸಿಫ್ ಅಲಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.
ಸೂರ್ಯ ವಿಕೆಟ್ ಪತನದ ಬಳಿಕ ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ರಿಷಭ್ ಪಂತ್ ಆದ್ರೂ ಕೊಹ್ಲಿ ಜೊತೆಗೆ ಇನ್ನಿಂಗ್ಸ್ ಕಟ್ಟಿ ತಂಡವನ್ನ ಉತ್ತಮ ಹಂತದತ್ತ ಕೊಂಡೊಯ್ಯುವ ಜವಾಬ್ದಾರಿ ಹೆಗಲ ಮೇಲಿತ್ತು. ದಿನೇಶ್ ಕಾರ್ತಿಕ್ ಬದಲು ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದಿದ್ದ ಪಂತ್ ಮೇಲೆ ಎಲ್ಲರ ಕಣ್ಣಿತ್ತು. ಆದ್ರೆ ರಿಷಭ್ ಪಂತ್ ಮತ್ತೊಮ್ಮೆ ನಿರಾಸೆ ಮೂಡಿಸಿದ್ರು.
IND vs PAK: 181 ಬಾರಿಸಿಯೂ ಸೋತೆವು; ಪಾಕ್ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರೋಹಿತ್ ಶರ್ಮಾ!

ಕೇವಲ 14ರನ್‌ಗೆ ಇನ್ನಿಂಗ್ಸ್ ಮುಗಿಸಿದ ರಿಷಭ್ ಪಂತ್
ಟೀಂ ಇಂಡಿಯಾ ಉತ್ತಮ ಲಯದಲ್ಲಿರುವಾಗ ರಿಷಭ್ ಪಂತ್ ಮತ್ತೊಮ್ಮೆ ಉತ್ತಮ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದ್ರು. 12 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 14ರನ್ ಕಲೆಹಾಕಿದ್ದ ಪಂತ್ ಕೆಟ್ಟ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು.
ಪಂದ್ಯದ 14ನೇ ಓವರ್‌ನಲ್ಲಿ ಶದಾಬ್ ಖಾನ್ ಬೌಲಿಂಗ್‌ನ ನಾಲ್ಕನೇ ಎಸೆತದಲ್ಲಿ ಇನ್‌ಸೈಟ್ ಎಡ್ಜ್ ಆಗಿ ಬೌಂಡರಿ ಸಿಡಿಸಿದ್ದ ಪಂತ್ ನಂತರದಲ್ಲಿ ಎಸೆತದಲ್ಲಿ ಗೂಗ್ಲಿ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಲು ಹೋಗಿ ಸೀದಾ ಫೀಲ್ಡರ್ ಕ್ಯಾಚ್ ನೀಡುವ ಮೂಲಕ ಪೆವಿಲಿಯನ್ ಸೇರಿಕೊಂಡರು.
Asia Cup 2022: ಪಾಕ್ ವಿರುದ್ಧದ ಪಂದ್ಯದ ಬೆನ್ನಲ್ಲೇ ಅರ್ಷ್‌ದೀಪ್ ಭಾರತೀಯನಲ್ಲ ಎಂದ ವಿಕಿಪಿಡಿಯಾ!
ಡ್ರೆಸ್ಸಿಂಗ್ ರೂಂನಲ್ಲಿ ಪಂತ್‌ನನ್ನ ತರಾಟೆಗೆ ತೆಗೆದುಕೊಂಡ ರೋಹಿತ್
ರಿಷಭ್ ಪಂತ್ ಕೆಟ್ಟ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದ್ದಲ್ಲದೆ ಟೀಂ ಇಂಡಿಯಾ ಕುಸಿತಕ್ಕೂ ದಾರಿ ಮಾಡಿಕೊಟ್ಟರು. ಈ ವೇಳೆಯಲ್ಲಿ ಡ್ರೆಸ್ಸಿಂಗ್ ರೂಂ ತಲುಪಿದ್ದ ರಿಷಭ್ ಪಂತ್‌ಗೆ ನಾಯಕ ರೋಹಿತ್ ಶರ್ಮಾ ಚೆನ್ನಾಗಿ ಕ್ಲಾಸ್ ತೆಗೆದುಕೊಂಡರು. ಬ್ಯಾಟರ್ ಅನ್ನು ಮೊದಲೇ ಜಡ್ಜ್ ಮಾಡಿದ್ದ ಶದಾಬ್ ಖಾನ್ ಗೂಗ್ಲಿ ಹಾಕುವ ಮೂಲಕ ತನ್ನ ಖೆಡ್ಡಾದಲ್ಲಿ ಕೆಡವಿದ್ರು.
ಶದಾಬ್ ಖಾನ್‌ರ ಆ ಗೂಗ್ಲಿ ಎಸೆತವು ರಿವರ್ಸ್ ಸ್ವೀಪ್ ಮಾಡಲು ಯೋಗ್ಯವಾಗಿರಲಿಲ್ಲ. ಆದ್ರೆ ಅದಾಗಲೇ ರಿವರ್ಸ್ ಸ್ವೀಪ್ ಶಾಟ್ ಹೊಡೆಯಬೇಕೆಂದು ನಿರ್ಧರಿಸಿದಂತೆ ಕಂಡಿದ್ದ ಪಂತ್ ಸೀದಾ ಫೀಲ್ಡರ್‌ಗೆ ಕ್ಯಾಚಿತ್ತರು. ಹೀಗಾಗಿಯೇ ಡ್ರೆಸ್ಸಿಂಗ್ ರೂಂನಲ್ಲಿ ರಿಷಭ್ ಪಂತ್‌ಗೆ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದ ರೋಹಿತ್ ಶರ್ಮಾ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಟೀಂ ಇಂಡಿಯಾ ಏಷ್ಯಾ ಕಪ್ ಫೈನಲ್ ತಲುಪಲು ಇನ್ನುಳಿದ ಎರಡೂ ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಶ್ರೀಲಂಕಾ ಈಗಾಗಲೇ ಒಂದು ಪಂದ್ಯ ಗೆದ್ದಿದ್ದು, ಅಫ್ಘಾನಿಸ್ತಾನ ಲಂಕಾ ವಿರುದ್ಧ ಸೋತ ಪರಿಣಾಮ ಟೀಂ ಇಂಡಿಯಾ ವಿರುದ್ಧ ಗೆಲ್ಲಲೇಬೇಕಿದೆ.


Click it and Unblock the Notifications
