Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CWG 2022: ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದ ಮೀರಾಬಾಯಿ ಚಾನು; ಭಾರತಕ್ಕೆ 3ನೇ ಪದಕ

CWG 2022: Mirabai Chanu Wins Gold Medal In Weightlifting; 3rd Medal For India

ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಮಹಿಳಾ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ತಮ್ಮ ಮೇಲಿದ್ದ ಭರವಸೆಯನ್ನು ಈಡೇರಿಸಿದ್ದಾರೆ ಮತ್ತು ಕಾಮನ್‌ವೆಲ್ತ್ ಪಂದ್ಯಾವಳಿಯ ಎರಡನೇ ದಿನದಂದು ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದು ಕೊಟ್ಟಿದ್ದಾರೆ.

ಮಹಿಳೆಯರ 49 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲಲು ಮೀರಾಬಾಯಿ ಚಾನು ಒಟ್ಟು 201 ಕೆಜಿ ಎತ್ತಿದರು. ಇದು ಎರಡನೇ ದಿನದಂದು ಸಂಕೇತ್ ಸರ್ಗಾರ್ (ಬೆಳ್ಳಿ) ಮತ್ತು ಗುರುರಾಜ (ಕಂಚಿನ) ನಂತರ ವೇಟ್‌ಲಿಫ್ಟಿಂಗ್ ಕ್ರೀಡೆಯಿಂದ ಭಾರತಕ್ಕೆ ದಿನದ ಮೂರನೇ ಪದಕವಾಗಿದೆ.

ಗೋಲ್ಡ್ ಕೋಸ್ಟ್‌ನಲ್ಲಿ ನಡೆದ 2018ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಮೀರಾಬಾಯಿ ಚಾನು, ಸ್ನ್ಯಾಚ್‌ನಲ್ಲಿ 88 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 113 ಕೆಜಿ ಎತ್ತುವ ಮೂಲಕ ಸ್ಪರ್ಧೆಯಲ್ಲಿ ಮೈಲುಗಳಷ್ಟು ಮುಂದಿದ್ದರು.

ಮೀರಾಬಾಯಿ ಚಾನು ದೇಶದ ಅತ್ಯಂತ ಪ್ರಬಲ ವೇಟ್‌ಲಿಫ್ಟರ್‌ಗಳಲ್ಲಿ ಒಬ್ಬರು. 2022ರಲ್ಲಿ ಮತ್ತೊಮ್ಮೆ ಹಳದಿ ಲೋಹವನ್ನು ಗೆಲ್ಲುವ ಮೊದಲು ಅವರು ಈಗಾಗಲೇ ಕಾಮನ್‌ವೆಲ್ತ್ ಗೇಮ್ಸ್ ಬೆಳ್ಳಿ (2014) ಮತ್ತು ಚಿನ್ನವನ್ನು (2018) ಹೊಂದಿದ್ದರು.

ಮೀರಾಬಾಯಿ ಚಾನು 2017ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ ಮತ್ತು ಹಲವಾರು ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ಪದಕಗಳು ಮತ್ತು ಏಷ್ಯನ್ ಚಾಂಪಿಯನ್‌ಶಿಪ್ ಪದಕಗಳನ್ನು ಹೊಂದಿದ್ದಾರೆ. ಹೀಗಾಗಿ ಅವರನ್ನು ಗೋಲ್ಡನ್ ಗರ್ಲ್ ಎಂದೇ ಚಿರಪರಿಚಿತರಾಗಿದ್ದಾರೆ.

ಕಳೆದ ವರ್ಷ ಟೋಕಿಯೊದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಮೊದಲ ಬೆಳ್ಳಿ ಪದಕ ವಿಜೇತೆಯಾಗಿ ಆಕೆಯ ವೃತ್ತಿಜೀವನದ ಪ್ರಮುಖ ಅಂಶವಾಗಿದೆ. 2000ರಲ್ಲಿ ಸಿಡ್ನಿಯಲ್ಲಿ ಕರ್ಣಂ ಮಲ್ಲೇಶ್ವರಿ ಗೆದ್ದ ಕಂಚಿನ ಪದಕವನ್ನು ಉತ್ತಮಗೊಳಿಸಿದರು.

CWG 2022: Mirabai Chanu Wins Gold Medal In Weightlifting; 3rd Medal For India

ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನ, ಬೆಳ್ಳಿ, ಕಂಚು
ಇದಕ್ಕೂ ಮುನ್ನ ಮತ್ತೊಬ್ಬ ವೇಟ್‌ಲಿಫ್ಟರ್ ಸಂಕೇತ್ ಸರ್ಗಾರ್ ಅವರು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕವನ್ನು ತಂದರು. ಮಹಾರಾಷ್ಟ್ರದ ಸಂಕೇತ್ ಸರ್ಗಾರ್ ಅವರು ಶನಿವಾರ ನಡೆದ 55 ಕೆಜಿ ಪುರುಷರ ಫೈನಲ್‌ನಲ್ಲಿ ಬೆಳ್ಳಿ ಪದಕ ಗೆದ್ದರು.

ನಂತರ ಇನ್ನೊಬ್ಬ ವೇಟ್‌ಲಿಫ್ಟರ್ ಗುರುರಾಜ ಪೂಜಾರಿ ಪುರುಷರ 61 ಕೆಜಿ ವಿಭಾಗದಲ್ಲಿ ಕಂಚು ಗೆದ್ದ ನಂತರ ಭಾರತಕ್ಕೆ ಎರಡನೇ ಪದಕವನ್ನು ನೀಡಿದರು. ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಪದಕ ಗೆದ್ದ ಭಾರತದ ಎರಡನೇ ಕ್ರೀಡಾಪಟು ಎನಿಸಿದ್ದಾರೆ. ಕರ್ನಾಟಕದ ಉಡುಪಿ ಜಿಲ್ಲೆಯ ಗುರುರಾಜ ಪೂಜಾರಿ ಒಟ್ಟು 269 ಕೆ.ಜಿ.ಯೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದರು.

ಚಿನ್ನದ ಹುಡುಗಿಗೆ ಪ್ರಧಾನಿ ಮೋದಿ ಅಭಿನಂದನೆ
ಅಸಾಧಾರಣ ಪ್ರದರ್ಶನ ನೀಡಿದ ಮೀರಾಬಾಯಿ ಚಾನು ಭಾರತಕ್ಕೆ ಮತ್ತೊಮ್ಮೆ ಹೆಮ್ಮೆ ತಂದಿದ್ದಾರೆ! ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅವರು ಚಿನ್ನ ಗೆದ್ದಿದ್ದಾರೆ ಮತ್ತು ಹೊಸ ಕಾಮನ್ವೆಲ್ತ್ ದಾಖಲೆಯನ್ನು ಸ್ಥಾಪಿಸಿದ್ದಾರೆ ಎಂದು ಪ್ರತಿಯೊಬ್ಬ ಭಾರತೀಯನು ಸಂತೋಷಪಡುತ್ತಾನೆ. ಆಕೆಯ ಯಶಸ್ಸು ಹಲವಾರು ಭಾರತೀಯರಿಗೆ, ವಿಶೇಷವಾಗಿ ಉದಯೋನ್ಮುಖ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

Story first published: Saturday, July 30, 2022, 23:13 [IST]
Other articles published on Jul 30, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+