Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIBA U-16 ಏಷ್ಯನ್ ಚಾಂಪಿಯನ್‌ಶಿಪ್ 2022: ಇಂಡೋನೇಷಿಯಾವನ್ನ ಮಣಿಸಿ ಕ್ವಾರ್ಟರ್‌ಫೈನಲ್‌ಗೆ ಭಾರತ ಲಗ್ಗೆ

India U-16 Basketball Team

ಕತಾರ್‌ನ ದೋಹಾದಲ್ಲಿ ನಡೆಯುತ್ತಿರುವ FIBA U-16 ಏಷ್ಯನ್ ಚಾಂಪಿಯನ್‌ಶಿಪ್ 2022 ರ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದ ಅಂಡರ್-16 ಪುರುಷರ ಬ್ಯಾಸ್ಕೆಟ್‌ಬಾಲ್ ತಂಡವು ಇಂಡೋನೇಷ್ಯಾ ಅಂಡರ್-16 ಪುರುಷರ ಬ್ಯಾಸ್ಕೆಟ್‌ಬಾಲ್ ತಂಡವನ್ನು 44 ಅಂಕಗಳಿಂದ (97-53) ಸೋಲಿಸಿದೆ.

ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಭಾರತವು ಇಂಡೋನೇಷಿಯಾ ವಿರುದ್ಧ 20-18ರ ಮುನ್ನಡೆ ಕಾಯ್ದುಕೊಂಡಿತ್ತು. ನಂತರದಲ್ಲಿ ಎರಡನೇ ಕ್ವಾರ್ಟರ್‌ನಲ್ಲೂ ಪ್ರಾಬಲ್ಯ ಮೆರೆದ ಭಾರತದ ಯುವಕರ ತಂಡದ 43-29 ಅಂಕಗಳ ಅಂತರ ಕಾಯ್ದುಕೊಂಡಿತು. ಇನ್ನು ಮೂರನೇ ಕ್ವಾರ್ಟರ್‌ ಫೈನಲ್‌ನಲ್ಲೂ ಇಂಡೋನೇಷಿಯಾಗೆ ಭಾರತವು ಯಾವುದೇ ರೀತಿಯ ಅವಕಾಶ ನೀಡದೆ ಲೀಡ್ ಅನ್ನು 70-37ಕ್ಕೆ ಏರಿಸಿಕೊಂಡಿತು.

India U-16 Basketball Team 2

ಅಂತಿಮ ನಾಲ್ಕನೇ ಕ್ವಾರ್ಟರ್‌ನಲ್ಲಿ ಇಂಡೋನೇಷಿಯಾ ಪ್ರಬಲ ಹೋರಾಟ ತೋರಿಸಿತಾದ್ರೂ 44 ಅಂಕಗಳಿಂದ ಭಾರತ ವಿರುದ್ಧ ಸೋಲನ್ನ ಕಂಡಿತು. ಭಾರತವು 97- 53 ಅಂಕಗಳ ಅಂತರದ ಭಾರೀ ಗೆಲುವು ದಾಖಲಿಸಿದೆ.

ಭಾರತದ ಪರ ಗರಿಷ್ಕ ಸ್ಕೋರರ್ ಆಗಿ ಕುಶಾಲ್ ಸಿಂಗ್ 31 ಪಾಯಿಂಟ್ಸ್, ಜೈದೀಪ್ ರಾಥೋರ್ 18 ಪಾಯಿಂಟ್ಸ್‌, ಹರ್ಷ್ ಡಗಾರ್ 17 ಪಾಯಿಂಟ್ಸ್ ಕಲೆಹಾಕಿದ್ದಾರೆ. ಇನ್ನು ಇಂಡೋನೇಷಿಯಾ ಪರ ಗರಿಷ್ಠ ಸ್ಕೋರ್ ಕಲೆಹಾಕಿದ್ದವರಲ್ಲಿ ಹಮ್ಮದ್ ಯಾಸಿನ್ 15 ಪಾಯಿಂಟ್ಸ್ ಕಲೆಹಾಕಿದ್ದರು.

India U-16 Basketball Team

ಈ ಗೆಲುವಿನ ಮೂಲಕ ಭಾರತೀಯ U-16 ಪುರುಷರ ಬ್ಯಾಸ್ಕೆಟ್‌ಬಾಲ್ ತಂಡವು ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ. 17ನೇ ಜೂನ್ 2022 ರಂದು ದೋಹಾದಲ್ಲಿ ಜಪಾನ್ ವಿರುದ್ಧ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಆಡಲಿದೆ.

Story first published: Thursday, June 16, 2022, 22:52 [IST]
Other articles published on Jun 16, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+