Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾಕಿ ಪ್ರಾಬಲ್ಯದ ಕಾಲದಿಂದ ನೀರಜ್ ಚೋಪ್ರಾವರೆಗೆ.. ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದ ಚಿನ್ನದ ಪದಕಗಳು ಎಷ್ಟು ಗೊತ್ತಾ!!

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವುದು ಯಾವುದೇ ಕ್ರೀಡಾಪಟುವಿನ ಅತ್ಯುನ್ನತ ಕನಸು. ವಿಶ್ವದ ಅತ್ಯುನ್ನತ ಕ್ರೀಡಾಕೂಟ ಎನಿಸಿಕೊಂಡಿರುವ ಈ ಒಲಿಂಪಿಕ್ಸ್‌ನಲ್ಲಿ ಭಾರತದಿಂದ ಶ್ರೇಷ್ಠ ಸಾಧನೆ ಹೊರಹೊಮ್ಮಿಲ್ಲ. ಇತ್ತೀಚಿನ ಕೆಲ ವರ್ಷಗಳಲ್ಲಿ ಭಾರತದಿಂದ ಕೆಲ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡುತ್ತಾ ಭರವಸೆ ಮೂಡಿಸಿದರೂ ಈ ವಿಚಾರದಲ್ಲಿ ಭಾರತವಿನ್ನೂ ಸಾಕಷ್ಟು ಹೆಜ್ಜೆ ಮುಂದಿಡಬೇಕು ಎಂಬುದು ಅಷ್ಟೇ ನಿಜ.

ಅಂದಹಾಗೆ ಭಾರತ ಇಲ್ಲಿವರೆಗೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿರುವುದು ಕೇವಲ 10 ಮಾತ್ರ. ಇದರಲ್ಲಿ 8 ಪದಕಗಳನ್ನು ತಂಡವಾಗಿ ಗೆದ್ದಿದ್ದರೆ ಉಳಿದ ಎರಡು ಪದಕಗಳ ಪೈಕಿ ಒಂದು ಶೂಟಿಂಗ್ ಹಾಗೂ ಮತ್ತೊಂದು ಅಥ್ಲೆಟಿಕ್ಸ್‌ನಲ್ಲಿ ಗಳಿಸಿದೆ. ಒಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತ ಗೆದ್ದುಕೊಂಡಿರುವ ಚಿನ್ನದ ಪದಕಗಳ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Indias Olympic gold medals: from hockey dominance to Neeraj Chopras huge throw

ಹಾಕಿಯಲ್ಲಿ ಭಾರತದ ಪಾರಮ್ಯ; 1928ರಲ್ಲಿ ಮೊದಲ ಚಿನ್ನ

ಹಾಕಿ ಕ್ರೀಡೆಯಲ್ಲಿ ಭಾರತ 1920ರಿಂದ ಸಂಪೂರ್ಣ ಪಾರಮ್ಯವನ್ನು ಹೊಂದಿದ್ದು ಅದು 1950ರ ದಶಕದ ವರೆಗೂ ಮುಂದುವರಿದಿತ್ತು. 1928ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ತನ್ನ ಪ್ರಪ್ರಥಮ ಒಲಿಂಪಿಕ್ಸ್ ಚಿನ್ನದ ಪದಕದ ಗೆಲುವಿಗೂ ಈ ಹಾಕಿ ಕಾರಣವಾಯಿತು. ಈ ಟೂರ್ನಿಯಲ್ಲಿ ಭಾರತ 29 ಗೋಲು ಗಳಿಸಿದ್ದರೆ ಅದರಲ್ಲಿ 14 ಗೋಲುಗಳನ್ನು ದಿಗ್ಗಜ ಧ್ಯಾನ್‌ಚಂದ್ ಅವರು ಬಾರಿಸಿದ್ದರು. ಈ ಮೂಲಕ ಭಾರತ ಒಲಿಂಪಿಕ್ಸ್ ಇತಿಹಾಸದಲ್ಲಿ ಮೊಟ್ಟ ಮೊದಲ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತ್ತು.

ಹಾಕಿಯಲ್ಲಿಯೇ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ

ಹಾಲಿಯಲ್ಲಿ ಭಾರತ ಈವರೆಗೆ ಒಟ್ಟು 8 ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ. ಈಗಾಗಲೇ ಹೇಳಿದಂತೆ 1928ರಲ್ಲಿ ಮೊದಲ ಚಿನ್ನದ ಪದಕ ಗೆದ್ದ ಬಳಿಕ 1932ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿಯೂ ಭಾರತ ಚಿನ್ನದ ಪದಕ ಗೆದ್ದುಕೊಂಡಿತು. ಅದಾದ ಬಳಿಕ 1936ರಲ್ಲಿ ಬರ್ಲಿನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿಯೂ ಭಾರತದ ಹಾಕಿ ತಂಡ ಚಿನ್ನದ ಪದಕ್ಕಕೆ ಮುತ್ತಿಕ್ಕುವ ಮೂಲಕ ಧ್ಯಾನ್‌ಚಂದ್ ನೇತೃತ್ವದ ಹಾಕಿ ತಂಡ ಹ್ಯಾಟ್ರಿಕ್ ಸಾಧನೆ ಮಾಡಿತ್ತು. ನಂತರ 1948ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿಯೂ ಗೆಲ್ಲುವ ಮೂಲಕ ಸ್ವಾತಂತ್ರ್ಯೋತ್ತರದ ಮೊದಲ ಚಿನ್ನದ ಪದಕವನ್ನು ಕೂಡ ಹಾಕಿ ಮೂಲಕವೇ ಭಾರತ ಪಡೆಯಿತು.

ನಂತರ ಹೆಲ್ಸಿಂಕಿಯಲ್ಲಿ 1952ರ ಲಿಂಪಿಕ್ಸ್‌ನಲ್ಲಿಯೂ ಹಾಕಿಯಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿತು ಭಾರತ. ಬಳಿಕ 1956ರಲ್ಲಿ ಮೆಲ್ಬರ್ನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಚಿನ್ನದ ಪದಕ ಗೆದ್ದುಕೊಂಡಿದ್ದು 1964ರಲ್ಲಿ ಟೋಕಿಯೋದಲ್ಲಿ 7ನೇ ಬಾರಿಗೆ ಈ ಸಾಧನೆ ಮಾಡಿತು. ಅದಾದ ಬಳಿಕ ಭಾರತ 1980ರಲ್ಲಿ ಮಾಸ್ಕೋದಲ್ಲಿ ನಡೆದ 8ನೇ ಹಾಗೂ ಹಾಲಿಯಲ್ಲಿ ಕೊನೆಯ ಬಾರಿಗೆ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತ್ತು.

2008ರಲ್ಲಿ ಭಾರತಕ್ಕೆ ಮೊದಲ ವೈಯಕ್ತಿಕ ಪದಕ

ಇನ್ನು ಒಲಿಂಪಿಕ್ಸ್ ಇತಿಹಾಸದಲ್ಲಿ ಬಾರತ ಮೊದಲ ಬಾರಿಗೆ ವೈಯಕ್ತಿಕ ಚಿನ್ನದ ಪದಕವನ್ನು ಗೆದ್ದಿದ್ದು 2008ರಲ್ಲಿ ಅಭಿನವ್ ಬಿಂದ್ರಾ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ. 10m ಏರ್ ರೈಫಲ್ ವಿಭಾಗದಲ್ಲಿ 10.8 ಅಂಕಗಳ ಮೂಲಕ ಚಿನ್ನಕ್ಕೆ ಗುರಿಯಿಡುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಪರವಾಗಿ ವೈಯಕ್ತಿಕ ಚಿನ್ನ ಗೆದ್ದ ಸಾಧನೆ ಮಾಡಿದರು.

2020ರಲ್ಲಿ ಚಿನ್ನ ಕೊರಳಿಗೇರಿಸಿಕೊಂಡ ನೀರಜ್ ಚೋಪ್ರಾ

ಇನ್ನು 2020ರಲ್ಲಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಫ್ರಾ ಮತ್ತೊಮ್ಮೆ ಇತಿಹಾಸ ನಿರ್ಮಿಸಿದರು. ನೀರಜ್ ಚೋಪ್ರಾ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಭಾರತದ ಪರವಾಗಿ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡರು. 87.58 ಮೀಟರ್ ದೂರಕ್ಕೆ ಚಾವೆಲಿನ ಎಸೆದ ನೀರಜ್ ಚೋಪ್ರ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಈ ಮೂಲಕ ಒಲಿಂಪಿಕ್ಸ್ ಇರಿಹಾಸದಲ್ಲಿ ಒಟ್ಟು 10ನೇ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು.

Story first published: Monday, July 10, 2023, 19:19 [IST]
Other articles published on Jul 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+