For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಮೈಸೂರಿನ ಅಂತರಾಷ್ಟ್ರೀಯ ವಾಲಿಬಾಲ್ ಪಟು ಸನೋಜ್ ವಿ.ಆರ್‌

Sanoj VR

ಸನೋಜ್ ವಿ.ಆರ್‌ , ವಾಲಿಬಾಲ್ ಮೂಲಕ ರಾಜ್ಯ ಅಷ್ಟೇ ಅಲ್ಲದೆ ರಾಷ್ಟ್ರದಾದ್ಯಂತ ತನ್ನನ್ನು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡ ಮೈಸೂರು ಮೂಲದ ವಾಲಿಬಾಲ್ ಆಟಗಾರ. ಮೈಸೂರಿನ ಸನೋಜ್ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗಿಯಾಗಿ ವಾಲಿಬಾಲ್‌ನಲ್ಲಿ ತಮ್ಮ ಕೌಶಲ್ಯವನ್ನ ಪ್ರದರ್ಶಿಸಿದ್ದಾರೆ.

ಮೈಖೇಲ್ ಕನ್ನಡದ ಎಕ್ಸ್‌ಕ್ಲೂಸಿವ್ ''ನಮ್ಮೂರ ಪ್ರತಿಭೆ'' ಸರಣಿ ಲೇಖನದಲ್ಲಿ ಈ ಬಾರಿ ರಾಷ್ಟ್ರ ಮಟ್ಟದಲ್ಲಿ ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರತಿನಿಧಿಸಿರುವ ಕನ್ನಡಿಗ ಸನೋಜ್ ವಿ.ಆರ್‌ ಕುರಿತಾಗಿ ನಿಮಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನ ತಿಳಿಸಿಕೊಡುವ ಪ್ರಯತ್ನ ನಡೆಸಲಾಗಿದೆ. ಸನೋಜ್ ಕುರಿತು ಕೆಲವು ಪ್ರಮುಖ ಮಾಹಿತಿಗಳು ಈ ಕೆಳಗಿದೆ.

ಸನೋಜ್ ಬಾಲ್ಯ ಜೀವನ

ಸನೋಜ್ ಬಾಲ್ಯ ಜೀವನ

ಸನೋಜ್ ಮೂಲತಃ ಮೈಸೂರು ಜಿಲ್ಲೆಯ ಹೆ.ಡಿ ಕೋಟೆ ತಾಲೂಕಿನ ಬೀಚನಹಳ್ಳಿಯವರು. ರಾಮಚಂದ್ರ ವಿ.ವಿ ಮತ್ತು ಸುಭಾಷಿಣಿ ದಂಪತಿಯ ಪುತ್ರನೇ ಈ ಸನೋಜ್ ವಿ.ಆರ್. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದಿರುವ ಸನೋಜ್ ಬಾಲ್ಯದಿಂದಲೂ ಕ್ರೀಡೆಯಲ್ಲಿ ಉತ್ತಮ ಆಸಕ್ತಿ ಹೊಂದಿದ್ದರು.

ಸನೋಜ್‌ಗೆ ಸನಲ್ ಕುಮಾರ್ ಮತ್ತು ಸಂಜೇಶ್ ಕುಮಾರ್ ಇಬ್ಬರು ಇಬ್ಬರು ಸಹೋದರರಿದ್ದಾರೆ. ಸನೋಜ್ ಪತ್ನಿ ಪತ್ನಿ ರಮ್ಯ ಸನೋಜ್, ಇವರು ಕೂಡ ಮಾಜಿ ವಾಲಿಬಾಲ್ ಪಟು ಆಗಿದ್ದಾರೆ. ವಾಲಿಬಾಲ್ ಮೂಲಕ ತಮ್ಮನ್ನು ಗುರುತಿಸಿಕೊಂಡ ಸನೋಜ್ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ದ್ವಿತೀಯ ಪಿಯುಸಿ ಬಳಿಕ ಬೇಸಿಗೆ ರಜೆಯಲ್ಲಿ ಮೈಸೂರಿನಲ್ಲಿ ಕಂಪ್ಯೂಟರ್ ಕ್ಲಾಸ್‌ಗೆ ಸೇರಿದ್ದ ಸನೋಜ್, ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಆಡಲು ಹೋಗುತ್ತಿದ್ದರು. ಈ ವೇಳೆ ರಮೇಶ್ ಎಂಬುವವರು ಕ್ರಿಕೆಟ್‌ಗಿಂತ ವಾಲಿಬಾಲ್‌ನಲ್ಲಿ ತೊಡಗಿಕೊಳ್ಳಲು ಸಲಹೆ ನೀಡಿದರು. ಜೊತೆಗೆ ಸುರೇಶ್ ಎಂಬ ಕೋಚ್‌ ಬಳಿ ಕರೆದುಕೊಂಡು ಹೋದರು. ನಂತರ ಸನೋಜ್ ಎಲ್ಲಿಯೂ ಕೂಡ ಹಿಂದೆ ತಿರುಗಿ ನೋಡಲಿಲ್ಲ.

ತಂದೆ ಮತ್ತು ಸಹೋದರ ವಾಲಿಬಾಲ್ ಪ್ಲೇಯರ್ ಆಗಿದ್ದರಿಂದ ಇವರಿಗೆ ವಾಲಿಬಾಲ್ ಬಹುಬೇಗ ಒಗ್ಗಿಕೊಂಡಿತು. ಉತ್ತಮ ಎತ್ತರದ ದೇಹವನ್ನ ಹೊಂದಿರುವ ಸನೋಜ್‌ಗೆ ವಾಲಿಬಾಲ್ ಬೇಗನೆ ಕರಗತಗೊಂಡಿತು.

ನಮ್ಮೂರ ಪ್ರತಿಭೆ: ವಿಶ್ವ ಗೇಮ್ಸ್ 2022ರ ಸ್ಕೇಟಿಂಗ್‌ನಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ ಕರ್ನಾಟಕದ ಧನುಷ್

ಸನೋಜ್ ವಾಲಿಬಾಲ್ ಸಾಧನೆ

ಸನೋಜ್ ವಾಲಿಬಾಲ್ ಸಾಧನೆ

2007ರಲ್ಲಿ ಆಂಧ್ರಪ್ರದೇಶದ ಅಡಿಲಾಬಾದ್‌ನಲ್ಲಿ ನಡೆದ ಪುರುಷರ ಮತ್ತು ಮಹಿಳೆಯರ 14ನೇ ಸೌತ್ ಜೋನ್ ನ್ಯಾಷನಲ್ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ವಾಲಿಬಾಲ್ ತಂಡವನ್ನ ಮುನ್ನಡೆಸಿದ್ದಾರೆ.

2008ರಲ್ಲಿ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದ ನ್ಯಾಷನಲ್ ಲೀಗ್ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ್ದಾರೆ.

2007, 2008, 2012ರಲ್ಲಿ ನಡೆದ 56, 57, 60ನೇ ಸೀನಿಯರ್ ನ್ಯಾಷನಲ್ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ.

2010ರಲ್ಲಿ ಥೈಲ್ಯಾಂಡ್‌ನಲ್ಲಿ ನಡೆದ 15ನೇ ಏಷ್ಯನ್ ಜೂನಿಯರ್ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ತೃತೀಯ ಸ್ಥಾನ

2011ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ಜ್ಯೂನಿಯರ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

2011ರಲ್ಲಿ ಇಂಡಿಯನ್ ವಾಲಿಬಾಲ್ ಲೀಗ್ ಪಂದ್ಯಾವಳಿಗಳಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆಯುವುದರೊಂದಿಗೆ ಬೆಸ್ಟ್ ಅಟ್ಯಾಕರ್ ಪ್ರಶಸ್ತಿ ಪಡೆದಿದ್ದಾರೆ

2013 62ನೇ ಸೀನಿಯರ್ ನ್ಯಾಷನಲ್ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡದ ನಾಯಕನಾಗಿ ತಂಡವನ್ನ ಮುನ್ನಡೆಸಿದ್ದಾರೆ.

2007ರಿಂದ 2018 ರವರೆಗೆ ನಡೆದ ಆಲ್‌ ಇಂಡಿಯಾ ಪೊಲೀಸ್ ವಾಲಿಬಾಲ್ ಟೂರ್ನಮೆಂಟ್‌ನಲ್ಲಿ ಕರ್ನಾಟಕ ತಂಡವನ್ನ ಪ್ರತಿನಿಧಿಸುವುದರೊಂದಿಗೆ, 2010 ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡಿದ್ದಾರೆ.

ನಮ್ಮೂರ ಪ್ರತಿಭೆ: 12 ವರ್ಷಕ್ಕೆ ರಾಷ್ಟ್ರ ಮಟ್ಟದಲ್ಲಿ ಹಲವು ಪದಕ ಗೆದ್ದ ಮಂಗಳೂರಿನ ಕುವರಿ ಅಲಿಸಾ

ಸನೋಜ್ ವಿ.ಆರ್ ಪ್ರಶಸ್ತಿಗಳು

ಸನೋಜ್ ವಿ.ಆರ್ ಪ್ರಶಸ್ತಿಗಳು

ವಾಲಿಬಾಲ್ ಕ್ರೀಡೆಯಲ್ಲಿ ಸನೋಜ್ ವಿ.ಆರ್ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ, ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದೆ.

2013ರಲ್ಲಿ ಕರ್ನಾಟಕ ಸರ್ಕಾರದಿಂದ ಏಕಲವ್ಯ ಪ್ರಶಸ್ತಿ

2011ರಲ್ಲಿ ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್ ಕೆಒಎ ಪ್ರಶಸ್ತಿ

2011ರಲ್ಲಿ ಕೆಂಗಲ್ ಹನುಮಂತಯ್ಯ ಪ್ರಶಸ್ತಿ

ನಮ್ಮೂರ ಪ್ರತಿಭೆ: ಸಾಫ್ಟ್‌ವೇರ್ ವೃತ್ತಿಗೆ ಗುಡ್ ಬೈ ಹೇಳಿ, ಅಥ್ಲಿಟ್​ಗೆ ಜೈ ಎಂದ ಸಾಗರ ಮೂಲದ ಅಶ್ವಿನಿ

Story first published: Monday, July 11, 2022, 21:21 [IST]
Other articles published on Jul 11, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+