ನಮ್ಮೂರ ಪ್ರತಿಭೆ: ಬೆಂಗಳೂರು ಮೂಲದ ರಾಷ್ಟ್ರೀಯ ಸ್ವಿಮ್ಮರ್ ಅನೀಶ್ ಎಸ್. ಗೌಡ

ಅನೀಶ್ ಎಸ್. ಗೌಡ ರಾಷ್ಟ್ರೀಯ ಮಟ್ಟದ ಸ್ವಿಮ್ಮರ್ ಆಗಿದ್ದಾರೆ. ರಾಜ್ಯ ಅಷ್ಟೇ ಅಲ್ಲದೆ ರಾಷ್ಟ್ರದಾದ್ಯಂತ ತನ್ನನ್ನು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡ ಕರ್ನಾಟಕದ ಯುವ ಸ್ವಿಮ್ಮಿಂಗ್ ಪ್ರತಿಭೆ. ಬೆಂಗಳೂರು ಮೂಲದ ಅನೀಶ್ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಅನೇಕ ಪ್ರಶಸ್ತಿಗಳು ಹಾಗೂ ಪದಕಗಳನ್ನ ತಮ್ಮದಾಗಿಸಿಕೊಂಡಿದ್ದಾರೆ.
ಮೈಖೇಲ್ ಕನ್ನಡದ ಎಕ್ಸ್‌ಕ್ಲೂಸಿವ್ ''ನಮ್ಮೂರ ಪ್ರತಿಭೆ'' ಸರಣಿ ಲೇಖನದಲ್ಲಿ ಈ ಬಾರಿ ರಾಷ್ಟ್ರೀಯ ಸ್ವಿಮ್ಮರ್ ಅನೀಶ್ ಎಸ್. ಗೌಡ ಕುರಿತಾಗಿ ಪ್ರಮುಖ ವಿಚಾರಗಳನ್ನ ತಿಳಿಸಿಕೊಡುವ ಪ್ರಯತ್ನ ನಡೆಸಲಾಗಿದೆ. ಅನೀಶ್ ಕುರಿತು ಕೆಲವು ಪ್ರಮುಖ ಮಾಹಿತಿಗಳು ಈ ಕೆಳಗಿದೆ.

ಬಾಲ್ಯ ಜೀವನ ಮತ್ತು ಪರಿಚಯ
ಅನೀಶ್ ಎಸ್. ಗೌಡ ಜನವರಿ 10, 2004ರಂದು ಆರ್. ಸುನೀಲ್ ಕುಮಾರ್ ಮತ್ತು ಲಾವಣ್ಯ ದಂಪತಿಗೆ ಜನಿಸಿದರು. ಬೆಂಗಳೂರಿನಲ್ಲಿ ವಾಸವಾಗಿರುವ ಅನೀಶ್, ಶ್ರೀ ಔರಬಿಂದೋ ಮೆಮೆರಿಯಲ್ ಶಾಲೆಯಲ್ಲಿ ಹತ್ತನೇ ತರಗತಿ ಮುಗಿಸಿದರು. ನಾಲ್ಕೂವರೆ ವರ್ಷದಿಂದಲೇ ಸ್ವಿಮ್ಮಿಂಗ್ ಅಭ್ಯಾಸ ನಡೆಸಿದ ಅನೀಶ್‌ಗೆ ಈಜುವುದೆಂದರೆ ಎಲ್ಲಿಲ್ಲದ ಆಸಕ್ತಿ.
ಈಗಾಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟದ ಈಜು ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವಾರು ಪದಕಗಳಿಗೆ ಕೊರಳೊಡ್ಡಿರುವ ಅನೀಶ್‌ಗೆ ದೇಶವನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಕನಸು ಹೊತ್ತಿದ್ದಾರೆ. ಈಜು ಅಷ್ಟೇ ಅಲ್ಲದೆ ನೃತ್ಯ, ಜಾಹೀರಾತು ಮತ್ತು ದೃಶ್ಯ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದಾರೆ.
ಓದಿನಲ್ಲಿ ಮುಂದಿದ್ದ ಅನೀಶ್ 2020ರಲ್ಲಿ 10ನೇ ತರಗತಿಯ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಶೇಕಡಾ 86.4ರಷ್ಟು ಫಲಿತಾಂಶದ ಮೂಲಕ ಕ್ರೀಡೆ ಮತ್ತು ಓದನ್ನು ಬ್ಯಾಲೆನ್ಸ್ ಮಾಡಿದ್ದಾರೆ.
IND vs ENG: ಲಾರ್ಡ್ಸ್‌ನಲ್ಲಿ ಮೊಹಿಂದರ್ ಅಮರನಾಥ್‌ರ 39 ವರ್ಷಗಳ ದಾಖಲೆ ಮುರಿದ ಚಹಾಲ್

ಅನೀಶ್ ಕ್ರೀಡಾ ಸಾಧನೆಗಳು
2014ರಲ್ಲಿ ವಿವಿಧ ರಾಜ್ಯಗಳ ಸ್ಪರ್ಧೆಯಲ್ಲಿ ಭಾಗವಹಿಸಿ 1 ಚಿನ್ನ, 5 ಬೆಳ್ಳಿ, 3 ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
2015ರಲ್ಲಿ 2 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.
2016ರಲ್ಲಿ 1 ಬೆಳ್ಳಿ, 1 ಕಂಚಿನ ಪದಕ ಗೆಲ್ಲುವುದರ ಜೊತೆಗೆ ಅನೇಕ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡಿದ್ದಾರೆ. ಇದೇ ವರ್ಷ ಬೆಳಗಾಂನಲ್ಲಿ ನಡೆದ ಸೌತ್ ಜೋನ್ ಮೀಟ್‌ನಲ್ಲಿ ಒಂದು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
2018ರಲ್ಲಿ ಪುತ್ತೂರಿನಲ್ಲಿ ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಮೂರು ಚಿನ್ನ ಒಂದು ಬೆಳ್ಳಿ, ಒಂದು ಕಂಚಿನ ಪದಕ ಗೆದ್ದಿದ್ದಾರೆ.
ವಿಜಯವಾಡದಲ್ಲಿ ನಡೆದ ಸೌತ್ ಜೋನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ 800 ಮೀಟರ್, 1500 ಮೀಟರ್ ಫ್ರೀ ಸ್ಟೈಲ್‌ನಲ್ಲಿ ಕೂಟ ದಾಖಲೆಯೊಂದಿಗೆ 3 ಚಿನ್ನ ಹಾಗೂ 1 ಬೆಳ್ಳಿ ಪದಕವನ್ನು ಗೆದ್ದು ಬೀಗಿದ್ದಾರೆ.
2018ರಲ್ಲಿ ಪುಣೆಯಲ್ಲಿ ನಡೆದ ಎರಡನೇ ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
2019ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ 800 ಮೀಟರ್ 1500 ಮೀಟರ್ ಫ್ರೀ ಸ್ಟೈಲ್ ಸ್ವಿಮ್ಮಿಂಗ್‌ನಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. 4 ಚಿನ್ನ ಮತ್ತು 1 ಬೆಳ್ಳಿ ಪದಕ ಜಯಸಿದ್ದಾರೆ.
2019ರಲ್ಲಿ ಬೆಂಗಳೂರಿನಲ್ಲಿ ನಡೆದ ಸ್ಟೇಟ್ ಸೀನಿಯರ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿ ಮೂರು ಚಿನ್ನ, ಒಂದು ಬೆಳ್ಳಿ, ಒಂದು ಕಂಚಿನ ಪದಕವನ್ನು ಗೆದ್ದಿದ್ದಾರೆ.
2019ರಲ್ಲಿ ರಾಜ್‌ಕೂಟ್ ಈಜು ಸ್ಪರ್ಧೆಯಲ್ಲಿ ಒಂದು ಚಿನ್ನ, ಎರಡು ಬೆಳ್ಳಿ, ಒಂದು ಕಂಚಿನ ಪದಕ ಗೆದ್ದಿದ್ದಾರೆ.
ಭೂಪಾಲ್‌ನಲ್ಲಿ ನಡೆದ ಸಿಬಿಎಸ್‌ಸಿ ನ್ಯಾಷನಲ್ಸ್‌ನಲ್ಲಿ 200, 400, 800 ಮೀಟರ್ ಫ್ರೀ ಸ್ಟೈಲ್‌ನಲ್ಲಿ ನೂತನ ಕೂಟ ದಾಖಲೆ ನಿರ್ಮಿಸುವುದರ ಜೊತೆಗೆ 3 ಚಿನ್ನ ಮತ್ತು 1 ಬೆಳ್ಳಿ ಪದಕ ಜಯಿಸಿದ್ದಾರೆ.
ಎಷ್ಟೇ ಕೆಟ್ಟ ಪ್ರದರ್ಶನ ನೀಡಿದ್ರೂ ಕೊಹ್ಲಿಯನ್ನು ಬಿಸಿಸಿಐ ಕೈಬಿಡದಿರಲು ಆ ಹಣವೇ ಕಾರಣ ಎಂದ ಪನೇಸರ್!

ಅನೀಶ್ ಗೌಡ ಪ್ರಮುಖ ದಾಖಲೆಗಳು
ಇದುವರೆಗೆ ರಾಜ್ಯ ಮಟ್ಟದಲ್ಲಿ ಎರಡು, ದಕ್ಷಿಣ ವಿಭಾಗದ ಮಟ್ಟದಲ್ಲಿ ಎರಡು, ರಾಷ್ಟ್ರಮಟ್ಟದಲ್ಲಿ ನಾಲ್ಕು ನೂತನ ಕೂಟ ದಾಖಲೆಗಳನ್ನ ತನ್ನ ಹೆಸರಿಗೆ ನಮೂದಿಸಿಕೊಂಡಿರುವುದು ಅನಿಶ್ ಎಸ್. ಗೌಡ ಭವಿಷ್ಯದ ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಸಾಧನೆಗಳ ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲಿ ಎಂಬುದು 'ಮೈಖೇಲ್ ಕನ್ನಡ'ದ ಆಶಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications