Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನೀರಜ್‌ ಚೋಪ್ರಾ ಪಾಲ್ಗೊಳುವುದು ಡೌಟ್‌!

Neeraj Chopra undergoes elbow surgery, doubtful for Doha Worlds

ಮುಂಬಯಿ, ಮೇ 03: ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಡಬಲ್ಲ ಶಕ್ತಿ ಹೊಂದಿರುವ ಸ್ಟಾರ್‌ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ, ಮುಂಬರುವ ಸೆಪ್ಟೆಂಬರ್‌ನಲ್ಲಿ ದೋಹಾದಲ್ಲಿ ನಡೆಯಲಿರುವ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್ಸ್‌ನಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ.

ಮುಂಬರುವ ಸೆಪ್ಟೆಂಬರ್‌ 27ರಿಂದ ಅಕ್ಷಟೋಬರ್‌ 6ರವರೆಗೆ ದೋಹಾದಲ್ಲಿ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್ಸ್‌ ನಡೆಯಲಿದೆ.

ಮೊಣಕೈ ನೋವಿನ ಸಮಸ್ಯೆ ಎದುರಿಸುತ್ತಿದ್ದ ನೀರಜ್‌, ಇಲ್ಲಿನ ಕೋಕಿಲಾಬೆನ್‌ ಅಸ್ಪತ್ರೆಯಲ್ಲಿ ಗುರುವಾರ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ಖ್ಯಾತ ಆರ್ಥೋಪೇಡಿಕ್‌ ಸರ್ಜನ್‌ ಡಾ. ದಿನ್ಶಾ ಪರ್ಡಿವಾಲಾ ಶಸ್ತ್ರ ಚಿಕಿತ್ಸೆ ನಡೆಸಿಕೊಟ್ಟಿದ್ದಾರೆ.

"ಡಾ. ದಿನ್ಶಾ ಪರ್ಡಿವಾಲಾ ಅವರಿಂದ ಮೊಣಕೈಗೆ ಶಸ್ತ್ರಚಿಕಿತ್ಸೆ ಪಡೆದಿದ್ದೇನೆ. ಭರ್ಜಿ ಎಸೆಯುವಂತಾಗಲು ಇನ್ನೂ ಕೆಲ ತಿಂಗಳುಗಳ ವಿಶ್ರಾಂತಿ ಮತ್ತು ಪುನಶ್ಚೇತನದ ಅಗತ್ಯವಿದೆ. ಪ್ರತಿ ಬಾರಿ ಹಿನ್ನಡೆ ಅನುಭವಿಸಿದಾಗಲೆಲ್ಲಾ ಮತ್ತಷ್ಟು ಉತ್ತಮ ಸಾಧನೆ ಮಾಡುವ ಅವಕಾಶಕ್ಕೆ ಮುನ್ನುಡಿಯಾಗುತ್ತದೆ. ಮತ್ತಷ್ಟು ಉತ್ತಮ ಪ್ರದರ್ಶನ ನೀಡುವಂತೆ ಮಾಡುವುದು ಆ ದೇವರ ಇಚ್ಛೆಯಾಗಿದೆ,'' ಎಂದು ನೀರಜ್‌ ಆಸ್ಪ್ರತ್ರೆಯಲ್ಲಿ ಫೋಟೊ ಕ್ಲಿಕ್ಕಿಸಿ ಟ್ವಿಟರ್‌ನಲ್ಲಿ ಶೇರ್‌ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

21 ವರ್ಷದ ಚಾಂಪಿಯನ್‌ ಅಥ್ಲೀಟ್‌ ನೀರಜ್‌, ಕಳೆದ ಏಪ್ರಿಲ್‌ನಲ್ಲಿ ಪಟಿಯಾಲಾದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ಅಭ್ಯಾಸ ನಡೆಸುವ ವೇಳೆ ಮೊಣಕೈ ನೋವಿನ ಸಮಸ್ಯೆಗೆ ತುತ್ತಾಗಿದ್ದರು.

ಡಾ. ಪರ್ಡಿವಾಲಾ ಹೆಸರಾಂತ ಆರ್ಥೋಪೇಡಿಕ್‌ ಸರ್ಜನ್‌ ಆಗಿದ್ದು, ಭಾರತದ ಕ್ರೀಡಾ ತಾರೆಯರಾದ ಸುಶೀಲ್‌ ಕುಮಾರ್‌, ಸೈನಾ ನೆಹ್ವಾಲ್‌, ಪಿ.ವಿ ಸಿಂಧೂ, ಯೋಗೇಶ್ವರ್‌ ದತ್‌, ವಿನೇಶ್‌ ಫೋಗಟ್‌, ಅಖಿಲ್‌ ಕುಮಾರ್‌, ಎಚ್‌.ಎಸ್‌ ಪ್ರಣೋಯ್‌ ಅಂತಹ ಮೊದಲಾದವರಿಗೆ ಚಿಕಿತ್ಸೆ ನೀಡಿದ್ದಾರೆ.

ಇನ್ನು ನೀರಜ್‌ ಎಷ್ಟ ಸಮಯ ಜಾವೆಲಿನ್‌ ಅಭ್ಯಾಸದಿಂದ ದೂರ ಉಳಿಯಬೇಕು ಎಂಬುದರ ಕುರಿತಾಗಿ ಸ್ಪಷ್ಟ ಮಾಹಿತಿ ಇಲ್ಲ. ವಿಶ್ವ ಚಾಂಪಿಯನ್‌ಷಿಪ್ಸ್‌ ಸನಿಹದಲ್ಲಿದ್ದು ಅಷ್ಟರಲ್ಲಿ ತಮ್ಮ ಎಂದಿನ ಲಯ ಕಂಡುಕೊಳ್ಳುತ್ತಾರೆಯೇ ಎಂಬುದು ಅನುಮಾನವಾಗಿದೆ. ಇದೇ ವೇಳೆ ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ ದೃಷ್ಟಿಯಿಂದ ಕೋಚ್‌ ಬಹದ್ದೂರ್‌ ಸಿಂಗ್‌ ಕೂಡ ನೀರಜ್‌ಗೆ ಅಭ್ಯಾಸಕ್ಕೆ ಮರಳಲು ಅವಸರ ಬೇಡವೆಂದು ಸಲಹೆ ನೀಡಿದ್ದಾರೆ.

ಕಾಮನ್‌ವೆಲ್ತ್‌ ಮತ್ತು ಏಷ್ಯನ್ಸ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವ ಚಾಂಪಿಯನ್‌ ಎಸೆತಗಾರನಿಗೆ ಮೊಣಕೈ ಗಾಯದ ಸಮಸ್ಯೆಯಿಂದಾಗಿ ಇತ್ತೀಚೆಗೆ ಚೀನಾದಲ್ಲಿ ನಡೆದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್ಸ್‌ನಿಂದಲೂ ಹೊರಗುಳಿಯುವಂತಾಗಿತ್ತು.

ಜಾವೆಲಿನ್‌ ಎಸೆತದಲ್ಲಿ ವಿಶ್ವದ 5ನೇ ಶ್ರೇಯಾಂಕ ಹೊಂದಿರುವ ನೀರಜ್‌ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಡುವ ಭರವಸೆಯ ಅಥ್ಲೀಟ್‌ ಆಗಿದ್ದಾರೆ. 2016ರಲ್ಲಿ ಪೋಲೆಂಡ್‌ನಲ್ಲಿ ನಡೆದ ಐಎಎಎಫ್‌ 20 ವರ್ಷದೊಳಗಿನವರ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವ ದಾಖಲೆಯಿಂದಿಗೆ ಚಿನ್ನ ಗೆಲ್ಲುವ ಮೂಲಕ ನೀರಜ್‌ ಜಾಗತಿಕ ಮಟ್ಟದಲ್ಲಿ ಮೊದಲ ಬಾರಿ ಗುರುತಿಸಿಕೊಂಡಿದ್ದರು.

Story first published: Friday, May 3, 2019, 14:50 [IST]
Other articles published on May 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+