ಸಾನಿಯಾ ಮಿರ್ಜಾ- ಶೋಯೆಬ್ ಮಲಿಕ್ ದಂಪತಿಗೆ ಗಂಡು ಪಾಪುವಿನ ಸಂಭ್ರಮ

ಇಸ್ಲಾಮಾಬಾದ್, ಅಕ್ಟೋಬರ್ 30: ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಗಂಡು ಮಗುವಿನ ತಾಯಿಯಾಗಿದ್ದಾರೆ.
ಸಾನಿಯಾ ಅವರ ಪತಿ, ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್, ಈ ಸಂತಸದ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಮಂಗಳವಾರ ಟ್ವೀಟ್ ಮಾಡಿರುವ ಮಲಿಕ್, 'ಈ ಸುದ್ದಿ ಪ್ರಕಟಿಸಲು ಖುಷಿಯಾಗುತ್ತಿದೆ. ಗಂಡು ಮಗು ಜನಿಸಿದೆ. ಸಾನಿಯಾ ಮತ್ತು ಮಗು ಆರೋಗ್ಯವಾಗಿದ್ದಾರೆ' ಎಂದು ತಿಳಿಸಿದ್ದಾರೆ.
ಸುದೀರ್ಘ ಕಾಲದಿಂದ ಟೆನ್ನಿಸ್‌ನಿಂದ ದೂರ ಉಳಿದಿರುವ ಸಾನಿಯಾ ಮಿರ್ಜಾ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು. ತಮ್ಮ ಪ್ರಗ್ನೆನ್ಸಿಯ ವಿವಿಧ ಹಂತಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು. ತಮ್ಮ ಈ ಅವಧಿಯನ್ನು ಸಂಭ್ರಮಿಸುತ್ತಿರುವುದನ್ನು ವಿಶೇಷ ಫೋಟೊಶೂಟ್ ಮಾಡಿಸುವ ಮೂಲಕ ಹಂಚಿಕೊಂಡಿದ್ದರು.
ಸಾನಿಯಾ-ಶೋಯೆಬ್ ದಂಪತಿಗೆ ಗಂಡು ಮಗು ಜನಿಸಲಿದೆ ಎಂಬ ಸುದ್ದಿ ಬಹಳ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದನ್ನು ಮಲಿಕ್ ನಿರಾಕರಿಸಿದ್ದರು. ಮಗು ಜನಿಸಿದ ಬಳಿಕ ನಾವೇ ಸಮರ್ಪಕವಾಗಿ ಪ್ರಕಟಿಸಲಿದ್ದೇವೆ. ನಿಮ್ಮ ಹಾರೈಕೆ ನಮಗಿರಲಿ (ಅಂತರ್ಜಾಲದಲ್ಲಿ ನೀವು ನೋಡಿದ್ದು/ಓದಿದ್ದನ್ನೆಲ್ಲ ದಯವಿಟ್ಟು ನಂಬಬೇಡಿ) ಎಂದು ಅವರು ಹೇಳಿದ್ದರು. ಆದರೆ, ಆ ಸುದ್ದಿ ಈಗ ನಿಜವಾಗಿದೆ.
ಸಾಮಾನ್ಯವಾಗಿ ಮಗುವಿನ ಹೆಸರಿನೊಂದಿಗೆ ತಂದೆಯ ಸರ್‌ನೇಮ್ ಮುಂದುವರಿಯುತ್ತದೆ. ಆದರೆ, ಈ ಸಂಪ್ರದಾಯಕ್ಕೆ ವಿರುದ್ಧವಾಗಿ ತಮ್ಮ ಮಗು ತಾಯಿ-ತಂದೆ ಇಬ್ಬರ ಹೆಸರನ್ನೂ ಒಳಗೊಂಡಿರುತ್ತದೆ ಎಂದು ಸಾನಿಯಾ ಈ ಹಿಂದೆ ಹೇಳಿಕೊಂಡಿದ್ದರು.
'ಇಂದು ನಿಮಗೊಂದು ಗುಟ್ಟು ಹೇಳುತ್ತಿದ್ದೇನೆ. ನನ್ನ ಗಂಡ ಮತ್ತು ನಾನು ಇಬ್ಬರೂ ಮಾತನಾಡಿ ಮಗುವಿನ ಸರ್‌ನೇಮ್ ಅನ್ನು ಕೇವಲ ಮಲಿಕ್ ಎಂದು ಇರಿಸದೆ ಮಿರ್ಜಾ ಮಲಿಕ್ ಎಂದು ಇರಿಸಲು ತೀರ್ಮಾನಿಸಿದ್ದೇವೆ' ಎಂದಿದ್ದರು.
ಸಾನಿಯಾ ಕೂಡ ಮದುವೆಯಾದ ಬಳಿಕ ತಮ್ಮ ಹೆಸರನ್ನು ಬದಲಿಸಿರಲಿಲ್ಲ. ತಮ್ಮ ತಂದೆಯಿಂದ ಬಂದ ಮಿರ್ಜಾ ಹೆಸರನ್ನೇ ಅವರು ಉಳಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications