For Quick Alerts
ALLOW NOTIFICATIONS  
For Daily Alerts

ಕ್ರಿಕೆಟ್ : ತ್ರಿಕೋನ ಸರಣಿಗೂ ಉತ್ತಪ್ಪ ಆಯ್ಕೆ ಇಲ್ಲ

By Mahesh

ಮುಂಬೈ,ಜ.6 ; ಐಸಿಸಿ ವಿಶ್ವಕಪ್ 2015ರಲ್ಲಿ ಆಡುವ 15 ಜನ ಆಟಗಾರರ ಹೆಸರನ್ನು ಸಂದೀಪ್ ಪಾಟೀಲ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾದಲ್ಲಿ ನಡೆಯುವ ತ್ರಿಕೋನ ಏಕದಿನ ಸರಣಿಗೂ ತಂಡ ಘೋಷಿಸಲಾಗಿದೆ.

ವಿಶ್ವಕಪ್ 15 ಜನ ಸದಸ್ಯರ ತಂಡವನ್ನೇ ಆಸ್ಟ್ರೇಲಿಯಾ ತ್ರಿಕೋನ ಏಕದಿನ ಸರಣಿಗೂ ಆಡಿಸಲಾಗುತ್ತಿದೆ. ಜೊತೆಗೆ ಇಬ್ಬರು ವೇಗಿಗಳನ್ನು ತಂಡಕ್ಕೆ ಸೇರಿಸಲಾಗಿದೆ. ಮೋಹಿತ್ ಶರ್ಮ ಹಾಗೂ ಧವಳ್ ಕುಲಕರ್ಣಿ ಅವರು ತ್ರಿಕೋನ ಸರಣಿ ಆಡಲಿರುವ ತಂಡ ಸೇರಲಿದ್ದಾರೆ.

ಉತ್ತಪ್ಪ ಆಯ್ಕೆ ಆಗಿಲ್ಲ: ವಿಶ್ವಕಪ್ ಮಂದಿ ಸಂಭಾವ್ಯ ತಂಡದಲ್ಲಿ ಕರ್ನಾಟಕದ ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ ಹಾಗೂ ಸ್ಟುವರ್ಟ್ ಬಿನ್ನಿ ಸ್ಥಾನ ಪಡೆದುಕೊಂಡಿದ್ದರು. ಈ ಪೈಕಿ ಸ್ಟುವರ್ಟ್ ಬಿನ್ನಿ ಮಾತ್ರ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ರಣಜಿಯಲ್ಲಿ ಹಾಗೂ ದೇಶಿ ಏಕದಿನ ಪಂದ್ಯಗಳಲ್ಲಿ ಉತ್ತಮ ಸಾಧನೆ ತೋರಿರುವ ರಾಬಿನ್ ಉತ್ತಪ್ಪ ಅವರನ್ನು ಕಡೆಗಣಿಸಿರುವುದರ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. [ವಿಶ್ವಕಪ್ ಗೆ 15 ಸದಸ್ಯರ ತಂಡ ಪ್ರಕಟ]

ಹುಬ್ಬಳ್ಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಣಜಿ ಪಂದ್ಯದಲ್ಲಿ ಮಂಗಳವಾರ ರಾಬಿನ್ ಉತ್ತಪ್ಪ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಅದರೆ, ದೇಶಿ ಕ್ರಿಕೆಟ್ ಸಾಧನೆಯನ್ನು ಅದರಲ್ಲೂ ಕರ್ನಾಟಕದ ಪ್ರತಿಭೆಗಳನ್ನು ಆಯ್ಕೆ ಸಮಿತಿ ಪರಿಗಣಿಸುತ್ತಿಲ್ಲ.

ಕೊನೆ ಪಕ್ಷ ಆಸ್ಟ್ರೇಲಿಯಾ ಸರಣಿಗಾದರೂ ಆಯ್ಕೆ ಮಾಡಬಹುದಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಇದರ ಜೊತೆಗೆ ಧವಳ್ ಕುಲಕರ್ಣಿ ಬದಲಿಗೆ ಕರ್ನಾಟಕದ ರಣಜಿ ನಾಯಕ ವಿನಯ್ ಕುಮಾರ್ ಅವರನ್ನು ಕೂಡಾ ಆಸೀಸ್ ಏಕದಿನ ತ್ರಿಕೋನ ಸರಣಿಗೆ ಆಯ್ಕೆ ಮಾಡಿಲ್ಲ. ವಿಶ್ವಕಪ್ 30ರ ತಂಡಕ್ಕೂ ಆಯ್ಕೆ ಮಾಡಿರಲಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದು.

Team India for Australia England And India Tri Series

ಜ.16 ರಂದು ಮೆಲ್ಬೋರ್ನ್ ನಲ್ಲಿ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಡಲಿದೆ. [ವೇಳಾಪಟ್ಟಿ ಇಂತಿದೆ]

ಆಸ್ಟ್ರೇಲಿಯಾ ತ್ರಿಕೋನ ಸರಣಿಗೆ 17 ಜನರ ತಂಡ ಇಂತಿದೆ:
ಆರಂಭಿಕ ಆಟಗಾರರು
1. ಅಜಿಂಕ್ಯ ರಹಾನೆ
2. ಶಿಖರ್ ಧವನ್
ಮಧ್ಯಮ ಕ್ರಮಾಂಕ
3. ವಿರಾಟ್ ಕೊಹ್ಲಿ
4. ಸುರೇಶ್ ರೈನಾ
5. ರೋಹಿತ್ ಶರ್ಮ
6. ಎಂಎಸ್ ಧೋನಿ (ವಿಕೆಟ್ ಕೀಪರ್)
7. ಅಂಬಟಿ ರಾಯುಡು (ವಿಕೆಟ್ ಕೀಪರ್)
ಸ್ಪಿನ್ನರ್
8. ಆರ್ ಅಶ್ವಿನ್
9. ಅಕ್ಷರ್ ಪಟೇಲ್
ಆಲ್ ರೌಂಡರ್
10. ರವೀಂದ್ರ ಜಡೇಜ
11. ಸ್ಟುವರ್ಟ್ ಬಿನ್ನಿ
ವೇಗಿಗಳು
12. ಭುವನೇಶ್ವರ್ ಕುಮಾರ್
13. ಮಹಮ್ಮದ್ ಶಮಿ
14. ಉಮೇಶ್ ಯಾದವ್
15. ಇಶಾಂತ್ ಶರ್ಮ
16. ಮೋಹಿತ್ ಶರ್ಮ
17. ಧವಳ್ ಕುಲಕರ್ಣಿ

Story first published: Wednesday, January 3, 2018, 10:16 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+