World Championships: ಮೊದಲ ಯತ್ನದಲ್ಲೇ ನೇರವಾಗಿ ಫೈನಲ್‌ಗೆ ಪ್ರವೇಶಿಸಿದ ನೀರಜ್ ಚೋಪ್ರ
ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಸ್‌ಶಿಪ್‌ನ ಅರ್ಹತಾ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ನಿರೀಕ್ಷೆಯಂತೆಯೇ ನೀರಜ್ ಚೋಪ್ರ ಮೊದಲ ಯತ್ನದಲ್ಲಿಯೇ 88.77 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಫೈನಲ್‌ಗೆ ಅರ್ಹತೆ ಸಂಪಾದಿಸಿದ್ದಾರೆ. ಹಂಗೇರಿಯ ಬುಡುಪೆಸ್ಟ್‌ನಲ್ಲಿ ಈ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಆಯೋಜನೆಯಾಗುತ್ತಿದೆ.
ಇನ್ನು ಈ ಸಂದರ್ಭದಲ್ಲಿ ನೀರಜ್ ಚೋಪ್ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಕೂಡ ಅರ್ಹತೆಯನ್ನು ಸಂಪಾದಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ 27 ಜಾವೆಲಿನ್ ಎಸೆತಗಾರರು ಎ ಮತ್ತು ಬಿ ಗುಂಪುಗಳಲ್ಲಿ ವಿಂಗಡಣೆ ಮಾಡಲಾಗಿದೆ. ಭಾನುವಾರದಂದು ಫೈನಲ್ ಹಂತ ನಡೆಯಲಿದ್ದು 12 ಜಾವೆಲಿನ್ ಎಸೆತಗಾರರು ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಫೈನಲ್‌ಗೆ ನೇರ ಅರ್ಹತೆ ಗಿಟ್ಟಿಸಿಕೊಳ್ಳಲು 83.00 ಮೀ. ದೂರದ ಮಾನದಂಡವನ್ನು ನಿಗದಿಪಡಿಸಲಾಗಿದೆ. ನೀರಜ್ ಚೋಪ್ರ ಮೊದಲ ಯತ್ನದಲ್ಲಿಯೇ 88.77 ಮೀಟರ್ ಜಾವೆಲಿನ್ ಎಸೆದ ಕಾರಣ ಈ ಮೂಲಕ ನೇರ ಅರ್ಹತೆ ಸಂಪಾದಿಸಿಕೊಂಡಿದ್ದಾರೆ. ಇದು ಈ ಆವೃತ್ತಿಯಲ್ಲಿ ನೀರಜ್ ಚೋಪ್ರ ಅವರ ಅತ್ಯುತ್ತಮ ಥ್ರೋ ಕೂಡ ಹೌದು.
ಗಮನಾರ್ಹ ಅಂಶವೆಂದರೆ 2022ರ ಒರೆಗಾನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರ ಚಿನ್ನದ ಪದಕದ ಸನಿಹಕ್ಕೆ ತಲುಪಿದ್ದರು. ಆದರೆ ಅಂತಿಮವಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಆದರೆ ಅಥ್ಲೆಟಿಕ್ಸ್ ಅಂತಾರಾಷ್ಟ್ರೀಯ ಚಾಂಪಿಯನ್ಸ್‌ಶಿಪ್‌ನ ಯಾವುದೇ ವಿಭಾಗದಲ್ಲಿಯೂ ನೀರಜ್ ಶ್ರೇಷ್ಠ ಸಾಧನೆಯೇ ಆಗಿತ್ತು. ಒಟ್ಟಾರೆ ಅಥ್ಲೆಟಿಕ್ಸ್‌ನಲ್ಲಿ ಭಾರತ ಗೆದ್ದ ಪ್ರಪ್ರಥಮ ಬೆಳ್ಳಿ ಪದಕ ಅದಾಗಿತ್ತು. ಹೀಗಾಘಿ ಈ ಬಾರಿ ನೀರಜ್ ಚೋಪ್ರ ಚಿನ್ನದ ಪದಕದ ಮೇಲೆ ತಮ್ಮ ಚಿತ್ತ ನೆಟ್ಟಿದ್ದು ಐತಿಹಾಸಿಕ ಸಾಧನೆಯ ಸನಿಹದಲ್ಲಿದ್ದಾರೆ.
ಇನ್ನು ಒರೆಗಾನ್‌ನಲ್ಲಿ ನೀರಜ್ ಚೋಪ್ರಾ ಗೆದ್ದ ಬೆಳ್ಳಿ ಪದಕ ಭಾರತ ಜಾಗತಿಕ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಗೆದ್ದ ಕೇವಲ ಎರಡನೇ ಪದಕವೂ ಹೌದು. ಅದಕ್ಕೂ ಮುನ್ನ 2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದ ಲಾಂಗ್‌ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದ್ದಿದ್ದು ಮೊಪಟ್ಟ ಮೊದಲ ಪದಕವಾಗಿತ್ತು. ಹೀಗಾಗಿ ನೀರಜ್ ಚೋಪ್ರ ಅವರು ಈ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮಾಡುವ ಸಾಧನೆ ಅತ್ಯಂತ ಮೌಲ್ಯಯುತವಾಗಿದೆ.
88.77 ಮೀ ಎಸೆತದ ಬಳಿಕ ನೀರಜ್ ಚೋಪ್ರಾ ಈ ಋತುವಿನ ಪುರುಷರ ಜಾವೆಲಿನ್ ಜಾಗತಿಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತ ಜಾಕುಬ್ ವಡ್ಲೆಜ್ ಈ ಋತುವಿನ ಅತ್ಯುತ್ತಮ ದಾಖಲೆ ಹೊಂದಿದ್ದು 89.51 ಮೀ ದೂರಕ್ಕೆ ಎಸೆದು ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಈ ವರ್ಷ ಈವರೆಗೆ 90 ಮೀ ತಡೆಗೋಡೆಯನ್ನು ಮುರಿಯಲು ಸಾಧ್ಯವಾಗಿಲ್ಲ. ಹಾಗಾಗಿ ಫೈನಲ್‌ನಲ್ಲಿ ನೀರಜ್ ಚೋಪ್ರ ಅವರಿಂದ ಈ ದೊಡ್ಡ ಸಾಧನೆಯ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications