ವಿಶ್ವಕಪ್: ವಿಂಡೀಸ್ ವಿರುದ್ಧ ಪಾಕಿಸ್ತಾನಕ್ಕೆ ಹೀನಾಯ ಸೋಲು
ಕ್ರೈಸ್ಟ್ ಚರ್ಚ್, ಫೆ.21: ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದೆ. ಪಾಕಿಸ್ತಾನ ವಿರುದ್ಧ ವೆಸ್ಟ್ ಇಂಡೀಸ್ 150 ರನ್ ಗಳ ಭರ್ಜರಿ ಜಯ ದಾಖಲಿಸಿದೆ.
ಟಾಸ್ ಗೆದ್ದ ಪಾಕಿಸ್ತಾನ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಲಾಭ ತರಲಿಲ್ಲ. ವೆಸ್ಟ್ ಇಂಡೀಸ್ ತಂಡ ಆರಂಭಿಕ ಆಘಾತ ಅನುಭವಿಸಿ 8 ಓವರ್ ಗಳಲ್ಲಿ 28ಕ್ಕೆ2 ವಿಕೆಟ್ ಕಳೆದುಕೊಂಡರೂ ನಂತರ ಚೇತರಿಸಿಕೊಂಡು 50 ಓವರ್ ಗಳಲ್ಲಿ 310ರನ್ ಚೆಚ್ಚಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತಂಡ 39 ಓವರ್ ಗಳಲ್ಲಿ 160 ಸ್ಕೋರಿಗೆ ಆಲೌಟ್ ಆಗಿ ಕಳಪೆ ಆಟ ಮುಂದುವರೆಸಿತು.

ಪಾಕಿಸ್ತಾನ ಪರ ಶೋಯಿಬ್ ಮಕ್ಸೂದ್ 50, ಉಮರ್ ಅಕ್ಮಲ್ 59 ಹಾಗೂ ಶಹೀದ್ ಅಫ್ರಿದಿ 28 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಎರಡಂಕಿ ಸ್ಕೋರ್ ದಾಟಲಿಲ್ಲ. ವಿಂಡೀಸ್ ಪರ ಜೆರೋಮಿ ಟೇಲರ್ 7-1-15-3, ಆಂಡ್ರೆ ರಸೆಲ್ 8 ಓವರ್ ಗಳಲ್ಲಿ 33ಕ್ಕೆ 3 ಕಿತ್ತು ಜಯಕ್ಕೆ ತಮ್ಮ ಕೊಡುಗೆ ನೀಡಿದರು.
ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ವಿಂಡೀಸ್ ತಂಡ ಡರೇನ್ ಬ್ರಾವೋ 49,ಸ್ಯಾಮುಯಲ್ಸ್ 38, ರಾಮ್ ದೀನ್ 51, ಲೆಂಡ್ಲ್ ಸಿಮನ್ಸ್ 50 ಹಾಗೂ ಆಂಡ್ರೆ ರಸೆಲ್ ಬಿರುಸಿನ 13 ಎಸೆತಗಳಲ್ಲಿ 42ರನ್ (3x4,4x6) ನೆರವಿನಿಂದ 310 ಸ್ಕೋರ್ ಮುಟ್ಟಿತು. ಪಾಕಿಸ್ತಾನದ ವಿರುದ್ಧ ಗೆಲ್ಲುವ ಮೂಲಕ ವಿಂಡೀಸ್ ಈ ವಿಶ್ವಕಪ್ ನ ಮೊದಲ ಜಯ ದಾಖಲಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications