Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಾಜಿ ವಿಶ್ವ ನಂ.1 ಆಟಗಾರ್ತಿ ಸೆರೆನಾಗೆ ಸೋಲುಣಿಸಿದ ಕತರೀನಾ

Former world number one Serena Williams crashes out in Parma

ಪಾರ್ಮಾ: ಇಟಲಿಯ ಪಾರ್ಮಾದಲ್ಲಿ ನಡೆಯುತ್ತಿರುವ ವಿಮೆನ್ಸ್ ಟೆನಿಸ್ ಅಸೋಸಿಯೇಶನ್ (ಡಬ್ಲ್ಯೂಟಿಎ) ಟೂರ್ನಿಯಲ್ಲಿ ಮಾಜಿ ವಿಶ್ವ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್, ಝೆಕ್ ಆಟಗಾರ್ತಿ ಕತರೀನಾ ಸಿನಿಯಕೋವಾ ಎದುರು ಸೋಲನುಭವಿಸಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಕತರೀನಾ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಮಂಗಳವಾರ (ಮೇ 18) ಡಬ್ಲ್ಯೂಟಿಎ ಭಾಗವಾಗಿ ನಡೆದ ಎಮಿಲಿಯಾ-ರೊಮಾಗ್ನಾ ಓಪನ್ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಅಮೆರಿಕಾ ಬಲಿಷ್ಠೆ ಸೆರೆನಾ ವಿಲಿಯಮ್ಸ್ ವಿರುದ್ಧ ಕತರೀನಾ ಸಿನಿಯಕೋವಾ 7-6, 6-2ರ ಅಂತರದ ಗೆಲುವು ದಾಖಲಿಸುವುದರೊಂದಿಗೆ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ.

39ರ ಹರೆಯದ ಸೆರೆನಾ ಸದ್ಯ ವಿಮೆನ್ಸ್ ಟೆನಿಸ್ ಅಸೋಸಿಯೇಶನ್ ಟೂರ್ ರ್‍ಯಾಂಕಿಂಗ್‌ನಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಪಾರ್ಮಾ ಟೂರ್ನಿಯಿಂದ ಹೊರ ಬಿದ್ದಿರುವ ಸೆರೆನಾ ಮೇ 30ರಂದು ಆರಂಭಗೊಳ್ಳಲಿರುವ ಫ್ರೆಂಚ್ ಓಪನ್‌ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಸಿನಿಯಕೋವಾ, 'ನಾನು ಹೆಚ್ಚಾಗಿ ತಪ್ಪುಗಳನ್ನು ಮಾಡುವುದಿಲ್ಲ, ಅದು ಅವಳ ಅರಿವಿಗೂ ಬಂದಿದೆ,' ಎಂದು ಪ್ರತಿಕ್ರಿಯಿಸಿದ್ದಾರೆ. ಅಂದ್ಹಾಗೆ, ಮಹಿಳಾ ಸಿಂಗಲ್ಸ್‌ನಲ್ಲಿ 23 ಗ್ರ್ಯಾನ್‌ಸ್ಲ್ಯಾಮ್‌ಗಳನ್ನು ಗೆದ್ದ ದಾಖಲೆ ಸೆರೆನಾ ಹೆಸರಿನಲ್ಲಿದೆ.

Story first published: Wednesday, May 19, 2021, 8:54 [IST]
Other articles published on May 19, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+