ಫ್ರೆಂಚ್ ಓಪನ್: ಜೋಕೊವಿಕ್ ಔಟ್, ನಡಾಲ್ vs ಥಿಯೆಮ್
ಪ್ಯಾರೀಸ್, ಜೂನ್ 07: ಫ್ರೆಂಚ್ ಓಪನ್ 2017 ನ ಹಾಲಿ ಚಾಂಪಿಯನ್ ಸೆರ್ಬಿಯಾದ ನೊವಾಕ್ ಜೋಕೊವಿಕ್ ಅವರನ್ನು ಮಣಿಸಿದ ಡೋಮನಿಕ್ ಥಿಯೆಮ್ ಅವರು ಮಾಜಿ ಚಾಂಪಿಯನ್ ರಫೇಲ್ ನಡಾಲ್ ವಿರುದ್ಧ ಸೆಮಿಫೈನಲ್ ನಲ್ಲಿ ಸೆಣಸಲಿದ್ದಾರೆ.
ನೋವಾಕ್ ಜೋಕವಿಕ್ ರನ್ನು ಮಣಿಸಿದ ಡೋಮನಿಕ್ ಥಿಯೆಮ್ ಅವರು ಮಾಜಿ ಚಾಂಪಿಯನ್ ರಫೇಲ್ ನಡಾಲ್ ವಿರುದ್ಧ ಸೆಮಿಫೈನಲ್ ನಲ್ಲಿ ಸೆಣಸಲಿದ್ದಾರೆ.[ಪತ್ರಕರ್ತೆಯನ್ನು ಕಿಸ್ ಮಾಡಿದ ಟೆನಿಸ್ ಪಟು ಡಿಸ್ಮಿಸ್]

ಪುರುಷರ ಕ್ವಾರ್ಟರ್ ಫೈನಲ್ ನಲ್ಲಿ ನೊವಾಕ್ ಜೊಕೊವಿಕ್ ಅವರು 6-7 3-6 0-6 ರಲ್ಲಿ ಆಘಾತ ಅನುಭವಿಸಿದ್ದಾರೆ.

ಎಂಟರ ಘಟ್ಟದ ಮೊದಲ ಪಂದ್ಯದಲ್ಲಿ ಸ್ಪೇನಿನ ರಫೆಲ್ ನಡಾಲ್ ಅವರು ಪ್ಯಾಬ್ಲೊ ಕರೆನೊ ಬುಸ್ಟಾ ವಿರುದ್ಧ ಗೆಲುವು ಸಾಧಿಸಿ 10ನೇ ಬಾರಿಗೆ ಸೆಮಿಫೈನಲ್ ತಲುಪಿದ್ದಾರೆ.[ಫ್ರೆಂಚ್ ಓಪನ್ 2017ಗೆ ಸ್ವಾಗತ: ಕ್ರೀಡಾಕೂಟಕ್ಕೆ ಮಾರ್ಗದರ್ಶಿ]
ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಕ್ ವಿರುದ್ಧ ಆಸ್ಟ್ರಿಯಾದ ಡೊಮಿನಿಕ್ ಥಿಯೆಮ್ ಅವರು ಜಯ ದಾಖಲಿಸಿದ್ದಾರೆ.[ಫ್ರೆಂಚ್ ಓಪನ್ ಹಿನ್ನೋಟ: ಲಿಯಾಂಡರ್, ಭೂಪತಿ ಅತ್ಯುತ್ತಮ ಸಾಧಕರು]
23 ವರ್ಷದ ಡೊಮಿನಿಕ್ ಥಿಯೆಮ್ ಅವರು ಇಟಾಲಿಯನ್ ಓಪನ್ ನ ಕ್ವಾರ್ಟರ್ ಫೈನಲ್ ನಲ್ಲಿ ನಡಾಲ್ ವಿರುದ್ಧ ಗೆಲುವು ದಾಖಲಿಸಿದ್ದಲ್ಲದೆ ಟ್ರೋಫಿ ಎತ್ತಿ ಹಿಡಿದಿದ್ದರು. ನಡಾಲ್ ಅವರು ಈ ಸೋಲಿನ ಸೇಡು ತೀರಿಸಿಕೊಳ್ಳಲು ಕಾದಿದ್ದಾರೆ.
ಉಳಿದ ಕ್ವಾರ್ಟರ್ ಫೈನಲ್ ನಲ್ಲಿ ಸ್ಟಾನಿಸ್ಲಾಸ್ ವಾವರಿಂಕ ಅವರು ಮರಿನ್ ಸಿಲಿಕ್ ರನ್ನು ಎದುರಿಸಲಿದ್ದಾರೆ. ವಿಶ್ವದ ನಂ 1 ಆಟಗಾರ ಆಂಡಿ ಮರೆ ಅವರು ಕೀ ನಿಶಿಕೋರಿ ವಿರುದ್ಧ ಸೆಣಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications