Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫ್ರೆಂಚ್ ಓಪನ್ : ಭಾರತದ ಸಾಧನೆ ಹಿನ್ನೋಟ, ಬೋಪಣ್ಣ ಹೊಸ ಎಂಟ್ರಿ!

ಪ್ಯಾರೀಸ್, ಜೂನ್ 09: ಆವೆ ಮಣ್ಣಿನ ಅಂಗಳದಲ್ಲಿ ಟೆನಿಸ್ ಕದನದಲ್ಲಿ ಈ ಬಾರಿ ಭಾರತ ಕೊನೆಗೂ ಯಶಸ್ಸು ಗಳಿಸಿದೆ. ಕರ್ನಾಟಕದ ರೋಹನ್ ಬೋಪಣ್ಣ ಅವರು ಮಿಶ್ರ ಡಬಲ್ಸ್ ಫೈನಲ್ ನಲ್ಲಿ ಜಯ ಗಳಿಸಿ ಚೊಚ್ಚಲ ಗ್ರ್ಯಾನ್ ಸ್ಲಾಮ್ ಗೆ ಮುತ್ತಿಟ್ಟರು.

ಕಳೆದ 20 ವರ್ಷಗಳಲ್ಲಿ ಟೆನಿಸ್ ದಿಗ್ಗಜರಾದ ಲಿಯಾಂಡರ್ ಪೇಯಸ್ ಹಾಗೂ ಮಹೇಶ್ ಭೂಪತಿ ಅತ್ಯುತ್ತಮ ಸಾಧಕರಾಗಿ ಹೊರಹೊಮ್ಮಿದ್ದಾರೆ. ಇಬ್ಬರು ತಲಾ 4 ಬಾರಿ ಪ್ರಶಸ್ತಿ ಗೆದ್ದಿದ್ದಾರೆ.

[ಫ್ರೆಂಚ್ ಓಪನ್ ಗೆದ್ದ ಕರುನಾಡ ಹೆಮ್ಮೆಯ ಟೆನಿಸ್ ಪಟು ಬೋಪಣ್ಣ]

ಮಹಿಳಾ ಆಟಗಾರ್ತಿಯರ ಪೈಕಿ ಸಾನಿ ಮಿರ್ಜಾ ಅವರು 2006ರಲ್ಲಿ ಮಹೇಶ್ ಭೂಪತಿ ಜತೆಗೂಡಿ ಮಿಶ್ರಡಬಲ್ಸ್ ಗೆದ್ದುಕೊಂಡಿದ್ದರು.
ರೋಹನ್ ಬೋಪಣ್ಣ ಅವರು ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಗೆಲ್ಲುವ ಮೂಲಕ ಈ ಸಾಧಕರ ಪಟ್ಟಿ ಸೇರಿದ್ದಾರೆ.
[ಫ್ರೆಂಚ್ ಓಪನ್ 2017ಗೆ ಸ್ವಾಗತ: ಕ್ರೀಡಾಕೂಟಕ್ಕೆ ಮಾರ್ಗದರ್ಶಿ]

55ನೇ ಫ್ರೆಂಚ್ ಓಪನ್ ಟೂರ್ನಮೆಂಟ್ ಯಲ್ಲಿ ರಾಫೆಲ್ ನಡಾಲ್ ಅತಿ ಹೆಚ್ಚು ಬಾರಿ ಪುರುಷರ ಸಿಂಗಲ್ಸ್ ಪ್ರಶಸ್ತಿ(9) ಗೆದ್ದಿದ್ದರೆ, ಕ್ರಿಸ್ ಎವರ್ಟ್ ಅವರು ಅತಿ ಹೆಚ್ಚು ಬಾರಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ (7) ಗೆದ್ದುಕೊಂಡಿದ್ದಾರೆ.

ಚೊಚ್ಚಲ ಗ್ರ್ಯಾನ್ ಸ್ಲಾಮ್ ಗೆದ್ದ ಬೋಪಣ್ಣ

ಚೊಚ್ಚಲ ಗ್ರ್ಯಾನ್ ಸ್ಲಾಮ್ ಗೆದ್ದ ಬೋಪಣ್ಣ

ರೋಹನ್ ಬೋಪಣ್ಣ ಹಾಗೂ ಗೇಬ್ರಿಯೆಲಾ ದಬ್ರೋವಸ್ಕಿ ಜೋಡಿ ಎದುರು ಜರ್ಮನಿಯ ಅನ್ನಾ ಲೆನಾ ಗ್ರೊಯಿನೆಫೆಲ್ಡ್ ಹಾಗು ಕೊಲಂಬಿಯಾದ ರಾಬರ್ಟ್ ಫರಾ ಅವರು 2-6, 6-2, 12-10 ರಲ್ಲಿ ಸೋಲು ಕಂಡಿದ್ದಾರೆ. ಇಲ್ಲಿ ತನಕ2011, 2014 ಹಾಗೂ 2016ರ ಕ್ವಾರ್ಟರ್ ಫೈನಲ್ ತಲುಪಿದ್ದು ಇಲ್ಲಿತನಕದ ಶ್ರೇಷ್ಠ ಸಾಧನೆಯಾಗಿತ್ತು.

ಮಾರ್ಟಿನಾ ಹಿಂಗೀಸ್ ಹಾಗೂ ಲಿಯಾಂಡರ್

ಮಾರ್ಟಿನಾ ಹಿಂಗೀಸ್ ಹಾಗೂ ಲಿಯಾಂಡರ್

ಲಿಯಾಂಡರ್ ಪೇಸ್ ಅವರು ಫ್ರೆಂಚ್ ಓಪನ್ ನಲ್ಲಿ ಉತ್ತಮ ಸಾಧನೆ ತೋರಿದ ಭಾರತೀಯ ಟೆನಿಸ್ ಪಟು. 4 ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, 3 ಬಾರಿ ಡಬಲ್ಸ್ ಹಾಗೂ ಒಂದು ಬಾರಿ ಮಿಶ್ರ ಡಬಲ್ಸ್ ಗೆದ್ದುಕೊಂಡಿದ್ದಾರೆ. 2 ಬಾರಿ ಮಹೇಶ್ ಭೂಪತಿ ಜತೆ ಜೋಡಿಯಾಗಿದ್ದರು.

ಮಹೇಶ್ ಭೂಪತಿ

ಮಹೇಶ್ ಭೂಪತಿ

ಲಿಯಾಂಡರ್ ಪೇಸ್ ನಂತರ ಫ್ರೆಂಚ್ ಓಪನ್ ನಲ್ಲಿ ಮಹೇಶ್ ಭೂಪತಿ ಅವರು ಉತ್ತಮ ಸಾಧನೆ ತೋರಿದ್ದಾರೆ. ಮಹೇಶ್ ಕೂಡಾ 4 ಬಾರಿಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿದ್ದಾರೆ. 2 ಬಾರಿ ಪೇಸ್ ಜತೆಗೂಡಿ ಪುರುಷರ ಡಬಲ್ಸ್ ಹಾಗೂ 2 ಬಾರಿ ಮಿಶ್ರ ಡಬಲ್ಸ್ ಗೆದ್ದಿದ್ದಾರೆ.

ಸಾನಿಯಾ ಮಿರ್ಜಾ

ಸಾನಿಯಾ ಮಿರ್ಜಾ

ಮಹಿಳಾ ಟೆನಿಸ್ ಗಾರ್ತಿಯಾಗಿ ಭಾರತದ ಅಗ್ರಗಣ್ಯರಾಗಿ ಸಾನಿಯಾ ಮಿರ್ಜಾ ಹೊರಹೊಮ್ಮಿದ್ದಾರೆ. ಮಹೇಶ್ ಭೂಪತಿ ಜತೆಗೂಡಿ 2012ರಲ್ಲಿ ಮಿಶ್ರ ಡಬಲ್ಸ್ ಗೆದ್ದುಕೊಂಡಿದ್ದಾರೆ.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+