For Quick Alerts
ALLOW NOTIFICATIONS  
For Daily Alerts

ಐಟಿಎಫ್‌ ಮಹಿಳಾ ಓಪನ್‌: ಫೈನಲ್‌ಗೇರಿದ ಅಂಕಿತಾ: ಫ್ರಾನ್ಸಿಸ್ಕಾ ಮತ್ತು ಮೆಟಿಲ್ಡೆ ಮುಡಿಗೆ ಡಬಲ್ಸ್ ಕಿರೀಟ

ITF Womens Open: Ankita beats Rutuja to face Brenda in Final, Jorge Francisca and Jorge Matilde clinch doubles title

ಐಟಿಎಫ್‌ ಮಹಿಳಾ ಓಪನ್‌ ಟೆನಿಸ್‌ ಟೂರ್ನಿಯ ಡಬಲ್ಸ್ ವಿಭಾಗ ಫೈನಲ್ ಪಂದ್ಯ ಶನಿವಾರ ನಡೆದಿತ್ತು ಇದರಲ್ಲಿ ಅಗ್ರ ಶ್ರೇಯಾಂಕಿತ ಪೋರ್ಚುಗಲ್‌ನ ಜಾರ್ಜ್‌ ಫ್ರಾನ್ಸಿಸ್ಕಾ ಮತ್ತು ಜಾರ್ಜ್‌ ಮೆಟಿಲ್ಡೆ ಜೋಡಿ ಗೆಲುವು ಸಾಧಿಸಿದ್ದು ಡಬಲ್ಸ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಫೈನಲ್‌ನಲ್ಲಿನಾಲ್ಕನೇ ಶ್ರೇಯಾಂಕದ ಗ್ರೀಕೋ-ಬ್ರಿಟಿಷ್‌ನ ವ್ಯಾಲೆಂಟಿನಿ ಗ್ರಾಮಾಟಿಕೊಪೌಲೌ ಮತ್ತು ಈಡನ್‌ ಸಿಲ್ವಾ ಜೋಡಿಯನ್ನು 5-7, 6-0, 10-3 ಸೆಟ್‌ಗಳಿಂದ ಮಣಿಸಿದ ಪೋರ್ಚುಗಲ್‌ ಜೋಡಿ ಪ್ರಶಸ್ತಿಗೆ ಮುತ್ತಿಟ್ಟಿದೆ.

ಇನ್ನು ಭಾರತದ ಅಂಕಿತಾ ರೈನಾ ಅವರು ಶನಿವಾರ ನಡೆದ ಮಹಿಳಾ ಓಪನ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ ರುತುಜಾ ಭೋಸಲೆ ಅವರನ್ನು 6-1, 6-1 ಸೆಟ್‌ಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆದಿದ್ದಾರೆ. ಭಾನುವಾರ ಕೆಎಸ್‌ಎಲ್‌ಟಿಎ ಅಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಅಂಕಿತಾ ಟೂರ್ನಿಯ ಅಗ್ರ ಶ್ರೇಯಾಂಕಿತೆ ಬ್ರೆಂಡಾ ಫ್ರುಹ್ವಿಟೋರ್ವಾ ಅವರ ಸವಾಲು ಎದುರಿಸಲಿದ್ದಾರೆ.

ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿಜೆಕ್‌ ಗಣರಾಜ್ಯದ 15 ವರ್ಷದ ಟೆನಿಸ್‌ ತಾರೆ ಫ್ರುಹ್ವಿರ್ಟೊವಾ, ಐದನೇ ಶ್ರೇಯಾಂಕದ ಸ್ಲೋವಾಕಿಯಾದ ದಲಿಲಾ ಜಕುಪೊವಿಕ್‌ ಅವರ ಸವಾಲನ್ನು 7-6 (2), 6-2 ಸೆಟ್‌ ಗಳಿಂದ ಸೋಲಿಸಿ ಫೈನಲ್‌ ತಲುಪಿದ್ದಾರೆ.

ಇನ್ನು ಫೈಬಲ್‌ಗೆ ಪ್ರವೇಶಿಸಿದ ಬಳಿಕ ಮಾತನಾಡಿರುವ ಅಂಕಿತಾ ರೈನಾ ಸಂತಸ ಹಂಚಿಕೊಂಡಿದ್ದಾರೆ. " ಪ್ರತಿಯೊಂದು ಪಂದ್ಯವೂ ವಿಭಿನ್ನವಾಗಿರುತ್ತದೆ. ಹಾಗಾಗಿ ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಿಷ್ಠವಾಗಿರಬೇಕು. ನೀವು ಶೇ.100 ರಷ್ಟು ದೈಹಿಕವಾಗಿ ಸಮರ್ಥವಾಗಿರದ ದಿನಗಳು ಇರಬಹುದು. ಆ ದಿನಗಳಲ್ಲಿ ನೀವು ಮಾನಸಿಕ ಭಾಗದಿಂದ ನಿಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಮೂಲಕ ಮತ್ತು ನಿಮ್ಮ ದೇಹವನ್ನು ಉತ್ತೇಜಿಸಬೇಕು. ಇಂದಿನ ಪಂದ್ಯದಲ್ಲಿ ನಾನು ಮಾಡಿದ್ದೂ ಅದನ್ನೇ" ಎಂದಿದ್ದಾರೆ ಅಂಕಿತಾ ರೈನಾ.

"ನಾನು ಬ್ರೆಂಡಾ ಅವರನ್ನು ಮೊದಲ ಬಾರಿಗೆ ಇಲ್ಲಿ ನೋಡಿದ್ದೇನೆ. ತರಬೇತುದಾರನೊಂದಿಗೆ ಚರ್ಚಿಸುತ್ತೇನೆ, ಅಂಗಣದಲ್ಲಿನಾನು ಏನು ಮಾಡಬಹುದು, ಆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆ ಹಾಗೂ ಫೈನಲ್‌ನಲ್ಲಿ ರಣತಂತ್ರದ ಬಗ್ಗೆ ಯೋಚಿಸುತ್ತೇನೆ. ಕೋವಿಡ್‌ ಕಾರಣದಿಂದಾಗಿ 2021 ಅಥವಾ 2022 ರ ನಂತರ ಫೈನಲ್‌ನಲ್ಲಿ ಆಡಲು ನನಗೆ ಸಂತೋಷವಾಗಿದ್ದು ಇದಕ್ಕೆ ನಾನು ಬಹಳ ಉತ್ಸುಕನಾಗಿದ್ದೇನೆ. ಭಾರತದಲ್ಲಿ ಟ್ರೋಫಿಯನ್ನು ಎತ್ತುವುದು ಸಂತೋಷದ ಸಂಗತಿ" ಎಂದು ಅಗ್ರ ಶ್ರೇಯಾಂಕಿತ ಭಾರತೀಯ ಆಟಗಾರ್ತಿ ಹೇಳಿದರು. ಸಿಂಗಲ್ಸ್‌ ಫೈನಲ್‌ ಪಂದ್ಯ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

Story first published: Sunday, March 12, 2023, 8:32 [IST]
Other articles published on Mar 12, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+