For Quick Alerts
ALLOW NOTIFICATIONS  
For Daily Alerts

ಐಟಿಎಫ್‌ ಮಹಿಳಾ ಓಪನ್‌: ಕ್ವಾ. ಫೈನಲ್ ಪ್ರವೇಶಿಸಿದ ಭಾರತದ ಅಂಕಿತಾ ರೈನಾ

ITF Women’s Open: India’s Ankita Raina and No. 1 seed Brenda Fruhvirtova enter to quarter-finals

ಐಟಿಎಫ್‌ ಮಹಿಳಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಭಾರತದ ಅಂಕಿತಾ ರೈನಾ ಹಾಗೂ ಜೆಕ್‌ ರಿಪಬ್ಲಿಕ್‌ನ ಬ್ರೆಂಡಾ ಫ್ರುಹ್ವಿರ್ಟೊವಾ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. 16ನೇ ಸುತ್ತಿನ ಪಂದ್ಯದಲ್ಲಿ ರೈನಾ ಥಾಯ್ಲೆಂಡ್‌ನ ಲಾನ್ಲಾನಾ ತರರುಡಿ ಅವರನ್ನು 6-2, 6-1 ಸೆಟ್‌ಗಳಿಂದ ಸೋಲಿಸಿ ಈ ಸಾಧನೆ ಮಾಡಿದ್ದಾರೆ.

ಮತ್ತೊಂದೆಡೆ 15 ವರ್ಷದ ಯುವ ಆಟಗಾರ್ತಿ ಫ್ರುಹ್ವಿರ್ಟೊವಾ ಥಾಯ್ಲೆಂಡ್‌ನ ಪೆಂಗ್ಟಾರ್ನ್‌ ಪ್ಲಿಪುಯೆಚ್‌ ವಿರುದ್ಧ ಗೆಲುವು ಸಾಧಿಸಿದ್ದಾರೆ. ಜೆಕ್‌ ಗಣರಾಜ್ಯದ ಫ್ರುಹ್ವಿರ್ಟೊವಾ 6-4, 3-6, 6-2 ನೇರ ಸೆಟ್‌ಗಳ ಅಂತರದಿಂದ ಜಯ ಗಳಿಸಿದ್ದಾರೆ. ಈ ಮೂಲಕ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದರು.

ಇನ್ನು ಪಂದ್ಯ ಗೆದ್ದ ಬಳಿಕ ಭಾರತದ ಅಂಕಿತಾ ರೈನಾ ಮಾತನಾಡಿದ್ದು ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. "ನಾನು ನನ್ನ ಅವಕಾಶಗಳನ್ನು ಪಡೆದುಕೊಂಡೆ ಮತ್ತು ಅವುಗಳನ್ನು ಸರಿಯಾದ ಸಮಯದಲ್ಲಿ ಬಳಸಿದೆ. ನಾನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತದಲ್ಲಿ ಲ್ಯಾನ್ಲಾನಾ ವಿರುದ್ಧ ಆಡಿದ್ದೆ. ಅದು ನೇರ ಸೆಟ್‌ ಗೆಲುವು, ಆದರೆ ಹೆಚ್ಚು ಪೈಪೋಟಿಯ ಪಂದ್ಯವಾಗಿತ್ತು. ಇಲ್ಲಿನ ಪರಿಸ್ಥಿತಿಗಳು ಸ್ವಲ್ಪ ಭಿನ್ನವಾಗಿದ್ದವು, ಆದರೆ ನಾನು ಪಂದ್ಯದ ಆರಂಭದಲ್ಲಿಯೇ ಮೇಲುಗೈ ಸಾಧಿಸಿ ನನ್ನ ಆಕ್ರಮಣಕಾರಿ ಶೈಲಿಯಲ್ಲಿ ಆಡಿದೆ ಅದು ನನಗೆ ಸಹಾಯ ಮಾಡಿತು" ಎಂದು ರೈನಾ ಪಂದ್ಯದ ನಂತರ ಹೇಳಿದರು.

ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಅಸೋಸಿಯೇಷನ್‌ (ಕೆಎಸ್‌ಎಲ್‌ಟಿಎ) 40 ಸಾವಿರ ಅಮೆರಿಕನ್‌ ಡಾಲರ್‌ ಮೊತ್ತದ ಪಂದ್ಯಾವಳಿಯನ್ನು ಆಯೋಜಿಸಿದ್ದು, ಕೆಪಿಬಿ ಫ್ಯಾಮಿಲಿ ಟ್ರಸ್ಟ್‌ ಪ್ರಾಯೋಜಿಸುತ್ತಿದೆ.
ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತದ ರುತುಜಾ ಭೋಸಲೆ 4-6, 6-3, 6-2 ಸೆಟ್‌ಗಳಿಂದ ಲಾತ್ವಿಯಾದ ಡಯಾನಾ ಮಾರ್ಸಿಂಕೆವಿಕಾ ಅವರನ್ನು ಮಣಿಸಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.

26ರ ಹರೆಯದ ಭೋಸಲೆ ತಮ್ಮ ಜೊತೆಗಾರ್ತಿ ಜಾಕ್ವೆಲಿನ್‌ ಅವಾದ್‌ ಜೊತೆಗೂಡಿ ಡಬಲ್ಸ್‌ ಸೆಮಿ ಫೈನಲ್‌ ಪ್ರವೇಶಿಸಿದೆ. ಮೂರನೇ ಶ್ರೇಯಾಂಕಿತ ಇಂಡೋ-ಸ್ವೀಡನ್‌ ಜೋಡಿ ಕ್ವಾರ್ಟರ್‌ ಫೈನಲ್‌ನಲ್ಲಿ ಸಾಕಿ ಇಮಾಮುರಾ ಮತ್ತು ಚಿಯಾ-ಯಿ ತ್ಸಾವೊ ಅವರನ್ನು 6-4, 6-3 ಸೆಟ್‌ ಗಳಿಂದ ಸೋಲಿಸಿದೆ. ಆದರೆ ಜೀಲ್‌ ದೇಸಾಯಿ, ಇಂಡೋನೇಷ್ಯಾದ ಆರನೇ ಶ್ರೇಯಾಂಕಿತ ಆಟಗಾರ್ತಿ ಮಡೆಲಿನ್‌ ನುಗ್ರೊಹೋ ವಿರುದ್ಧ 7-5, 3-6, 5-7 ಸೆಟ್‌ ಗಳಿಂದ ಸೋತು ನಿರಾಸೆ ಕಂಡರು.

ಎಂಟನೇ ಶ್ರೇಯಾಂಕದ ಬ್ರಿಟನ್‌ನ ಈಡನ್‌ ಸಿಲ್ವಾ , ಜಪಾನ್‌ನ ಮೀ ಯಮಗುಚಿ ವಿರುದ್ಧ 6-2, 6-0 ಅಂತರದಲ್ಲಿ ಗೆದ್ದು ಅಂತಿಮ 8ರ ಘಟ್ಟಕ್ಕೆ ಪ್ರವೇಶ ಪಡೆದಿದ್ದಾರೆ

"ನಾನು ಇಂದು ನನ್ನ ಪಂದ್ಯವನ್ನು ಆಡಿದ ರೀತಿಯಿಂದ ನನಗೆ ನಿಜವಾಗಿಯೂ ಸಂತೋಷವಾಗಿದೆ. ನಾನು ಮೊದಲ ಹಂತದಿಂದ ಕೊನೆಯ ಹಂತದವರೆಗೆ ಉತ್ತಮ ಗಮನವನ್ನು ಹೊಂದಿದ್ದೆ. ಇದು ಸುಲಭದ ಪಂದ್ಯವಲ್ಲಎಂದು ನನಗೆ ತಿಳಿದಿತ್ತು. ಏಕೆಂದರೆ ಯಮಗುಚಿ ಮೂರು ಪಂದ್ಯಗಳನ್ನು ಆಡಿ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿದ್ದಾರೆ. ಹಾಗಾಗಿ ಅವರು ಉತ್ತಮ ಫಾರ್ಮ್‌ನಲ್ಲಿದ್ದರು. ಆದರೆ ನಾನು ನನ್ನ ಆಟಕ್ಕೆ ಅಂಟಿಕೊಂಡಿದ್ದೇನೆ ಮತ್ತು ಇಂದು ಉತ್ತಮವಾಗಿ ಆಡಿದೆ. ಇದು ನನಗೆ ಸಾಕಷ್ಟು ಸಹಾಯ ಮಾಡಿತು" ಎಂದು ಪಂದ್ಯದ ನಂತರ ಈಡನ್‌ ಹೇಳಿದ್ದಾರೆ.

Story first published: Thursday, March 9, 2023, 21:14 [IST]
Other articles published on Mar 9, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+