ಐಟಿಎಫ್ ಮಹಿಳಾ ಓಪನ್: ಸೆಮಿಫೈನಲ್ ಪ್ರವೇಶಿಸಿದ ಭಾರತದ ಅಂಕಿತಾ ರೈನಾ ಮತ್ತು ರುತುಜಾ ಭೋಸಲೆ

ಬೆಂಗಳೂರಿನ ಕೆಎಸ್‌ಎಲ್‌ಟಿಎ ಅಂಗಣದಲ್ಲಿ ಶುಕ್ರವಾರ ನಡೆದ ಐಟಿಎಫ್ ಮಹಿಳಾ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಅಂಕಿತಾ ರೈನಾ ಮತ್ತು ರುತುಜಾ ಭೋಸಲೆ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಅದ್ಭುತ ಪ್ರದರ್ಶನ ನೀಡಿದ ಈ ಇಬ್ಬರು ಆಟಗಾರ್ತಿಯರು ಈಗ ಪ್ರಶಸ್ತಿ ಸುತ್ತಿನ ಮೇಲೆ ಕಣ್ಣಿಟ್ಟಿದ್ದಾರೆ.
ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ರೈನಾ ಬೋಸ್ನಿಯಾದ ಹರ್ಜೆಗೋವಿನಾದ ಡೇ ಹೆರ್ಡ್ಜೆಲಾಸ್ ವಿರುದ್ಧ ಸೆಣಸಿದ್ದು 6-1, 6-7 (7), 7-5 ಅಂತರದಿಂದ ಗೆಲುವು ಸಾಧಿಸಿದರು. ಇನ್ನು ಭೋಸಲೆ ಎಂಟನೇ ಶ್ರೇಯಾಂಕದ ಬ್ರಿಟನ್ ಈಡನ್ ಸಿಲ್ವಾ ವಿರುದ್ಧ 3-6, 7-6 (5), 6-4 ಸೆಟ್‌ಗಳಿಂದ ಜಯಗಳಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಶನಿವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ರೈನಾ ಮತ್ತು ಭೋಸಲೆ ಮುಖಾಮುಖಿಯಾಗಲಿದ್ದಾರೆ.
ಇದಕ್ಕೂ ಮೊದಲು ನಡೆದ ಪಂದ್ಯಗಳಲ್ಲಿ ಅಗ್ರ ಶ್ರೇಯಾಂಕದ ಜೆಕ್ ಗಣರಾಜ್ಯದ ಬ್ರೆಂಡಾ ಫ್ರುಹ್ವಿರ್ಟೋವಾ ಅವರು ಇಂಡೋನೇಷ್ಯಾದ ಆರನೇ ಶ್ರೇಯಾಂಕದ ಮಡೆಲಿನ್ ನುಗ್ರೊಹೊ ವಿರುದ್ಧ 6-0, 7-5 ಅಂತರದಲ್ಲಿ ಜಯಗಳಿಸಿ ಸೆಮಿಫೈನಲ್ ಪ್ರವೇಶಿಸಿದರು. 5ನೇ ಶ್ರೇಯಾಂಕದ ದಲಿಲಾ ಜಕುಪೋವಿಕ್ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಇಕುಮಿ ಯಮಜಾಕಿ ವಿರುದ್ಧ 6-2, 6-0 ಅಂತರದ ಸುಲಭ ಜಯ ದಾಖಲಿಸಿದರು.
"ಮೊದಲ ಸೆಟ್ ಬಹಳ ಸುಲಭವಾಗಿ ಮತ್ತು ವೇಗವಾಗಿ ಸಾಗುತ್ತಿತ್ತು ಮತ್ತು ಎರಡನೆಯದರಲ್ಲಿ ನಾನು 5-3ರಲ್ಲಿ ಮುನ್ನಡೆ ಸಾಧಿಸಿದೆ. ಆದರೆ ನಾನು ನಿಜವಾಗಿಯೂ ನನ್ನ ಅವಕಾಶಗಳನ್ನು ಬಳಸಲಿಲ್ಲ. ನಂತರ 5-5ಕ್ಕೆ ನಾನು ಆಕೆಯ ಸರ್ವ್ ಮುರಿದೆ ಮತ್ತು ನಂತರ ನಾನು ಪಂದ್ಯವನ್ನು ಗೆಲ್ಲಲು ನನ್ನ ಸರ್ವ್ ಹಿಡಿದೆ. ದೈಹಿಕವಾಗಿ ನಾನು ಶೇ. 100 ರಷ್ಟು ಫಿಟ್ ಆಗಿರಲಿಲ್ಲ. ಇದು ಮೂರು-ಸೆಟ್‌ಗೆ ಹೋಗದಿರುವುದು ನನಗೆ ಸಂತೋಷವಾಯಿತು" ಎಂದು ಫ್ರುಹ್ವಿರ್ಟೋವಾ ತನ್ನ ಗೆಲುವಿನ ನಂತರ ಹೇಳಿದರು.
ನಂತರ ಭೋಸಲೆ ಮತ್ತು ಅವರ ಸ್ವೀಡನ್ ಜತೆಗಾರ್ತಿ ಜಾಕ್ವೆಲಿನ್ ಅವಾದ್ ಅವರು ಡಬಲ್ಸ್ ಸೆಮಿಫೈನಲ್‌ನಲ್ಲಿ 6-2, 3-6, 8-10 ರಿಂದ ನಂ. 1 ಶ್ರೇಯಾಂಕದ ಪೋರ್ಚುಗೀಸ್ ಜೋಡಿ ಜಾರ್ಜ್ ಫ್ರಾನ್ಸಿಕಾ ಮತ್ತು ಜಾರ್ಜ್ ಮಟಿಲ್ಡೆ ವಿರುದ್ಧ ಸೋಲು ಕಂಡಿದ್ದಾರೆ. ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಫ್ರಾನ್ಸಿಕಾ-ಮಟಿಲ್ಡೆ ಗ್ರೀಕೊ-ಬ್ರಿಟಿಷ್ ಜೋಡಿಯ ವ್ಯಾಲೆಂಟಿನಿ ಗ್ರಾಮಟಿಕೊಪೌಲೌ ಮತ್ತು ಈಡನ್ ಸಿಲ್ವಾ ಅವರನ್ನು ಎದುರಿಸಲಿದ್ದಾರೆ.
ಗ್ರಾಮಟಿಕೊಪೌಲೌ ಮತ್ತು ಸಿಲ್ವಾ ಜೋಡಿ, ಸ್ಲೋವಾಕಿಯಾದ ದಲಿಲಾ ಜಕುಪೋವಿಕ್ ಮತ್ತು ಫ್ರಾನ್ಸ್ ನ ಅಮಂಡೈನ್ ಹೆಸ್ಸೆ ಅವರನ್ನು 6-1, 6-3 ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಸುತ್ತು ತಲುಪಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications