ಸಖತ್ ಸೋಮವಾರ: ಒಂದೇ ದಿನ ಫೆಡರರ್, ಸೆರೆನಾ, ನಡಾಲ್ ಕದನ!


ಲಂಡನ್, ಜು. 9: ಸೋಮವಾರ (ಜು.9) ಒಂದು ರೀತಿಯಲ್ಲಿ ವಿಶೇಷ ದಿನವಾಗಲಿದೆ. ಯಾಕೆಂದರೆ ಸೋಮವಾರ ವಿಂಡಲ್ಡನ್ ಅಂತಿಮ 16ರ ಹಂತದ ಪುರುಷರ, ಮಹಿಳಾ ಸಿಂಗಲ್ಸ್ ಸ್ಪರ್ಧೆಗಳು ನಡೆಯಲಿರುವುದರಿಂದ ರೋಜರ್ ಫೆಡರರ್, ಸೆರೆನಾ ವಿಲಿಯಮ್ಸ್, ರಾಫೆಲ್ ನಡಾಲ್ ನಂಥ ಸ್ಟಾರ್ ಆಟಗಾರರು ಎಲ್ಲರೂ ಒಂದೇ ದಿನ ಕಣಕ್ಕಿಳಿಯಲಿದ್ದಾರೆ.
ಹಾಲಿ ಚಾಂಪಿಯನ್ ರೋಜರ್ ಫೆಡರರ್ ಇಂದು (ಸೋಮವಾರ) 22ನೇ ಶ್ರೇಯಾಂಕಿತ ಫ್ರೆಂಚ್ ಆಟಗಾರ ಅಡ್ರಿಯನ್ ಮನ್ನರಿನೊ ವಿರುದ್ಧ ಪಂದ್ಯಕ್ಕಿಳಿದರೆ, ಎರಡು ಬಾರಿಯ ಚಾಂಪಿಯನ್ ನಡಾಲ್ ಅವರು ಜೆಕ್ ಆಟಗಾರ ಜಿರಿ ವೆಸ್ಲಿ ಸವಾಲು ಸ್ವೀಕರಿಸಲಿದ್ದಾರೆ.
ಏಳು ಬಾರಿಯ ಚಾಂಪಿಯನ್ ಸೆರೆನಾ ವನಿತಾ ವಿಭಾಗದ ಫೇವರಿಟ್ ಆಟಗಾರ್ತಿಯಾಗಿದ್ದು, ಅವರು ರಷ್ಯಾ ಆಟಗಾರ್ತಿ ಎವೆಜಿನಿಯ ರೋಡಿನಾ ವಿರುದ್ಧ ಸೆಣಸಾಡಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ನೊವಾಕ್ ಜೋಕೋವಿಕ್ ಅವರು ಕರೆನ್ ಖಚನೊವ್ ಎದುರು ಕಾದಾಡಲಿದ್ದಾರೆ.
ಮತ್ತೊಬ್ಬ ಫ್ರೆಂಚ್ ಆಟಗಾರ ಗೇಲ್ ಮಾನ್ಫಿಲ್ಸ್ ಅವರು ವಿಶ್ವ ನಂ. 8ನೇ ಆಟಗಾರ ಸೌತಾಫ್ರಿಕಾದ ಕೆವಿನ್ ಆಂಡರ್ಸನ್ ಅವರನ್ನು ಎದುರಾಗಲಿದ್ದಾರೆ. ಟಾಪ್ ಟೆನ್ ರ್ಯಾಂಕಿಂಗ್ ಆಟಗಾರ್ತಿಯಲ್ಲಿ ಉಳಿದಿರುವ ಒಬ್ಬರೇ ಒಬ್ಬ ಆಟಗಾರ್ತಿ 7ನೇ ಶ್ರೇಯಾಂಕಿತೆ ಕ್ಯರೋಲಿನಾ ಪ್ಲಿಸ್ಕೋವಾ ಅವರು ವಿಶ್ವ ನಂ. 20ನೇ ಕಿಕಿ ಬೆರ್ಟೆನ್ಸ್ ವಿರುದ್ಧ ಪಂದ್ಯವನ್ನಾಡಲಿದ್ದಾರೆ.
ಮೊನ್ನೆ (ಕಳೆದ ಶುಕ್ರವಾರ) ಒಂದೇ ದಿನ ಫೀಫಾ ವಿಶ್ವಕಪ್ ಕುತೂಹಲಕಾರಿ ಕ್ವಾರ್ಟರ್ ಫೈನಲ್ ಪಂದ್ಯಕ್ಕಾಗಿ ಬ್ರೆಜಿಲ್-ಬೆಲ್ಜಿಯಂ ತಂಡಗಳು ಮುಖಾಮುಖಿಯಾಗಿದ್ದವು. ಅದೇ ಸಮಯಕ್ಕೆ ದ್ವಿತೀಯ ಟಿ20 ಪಂದ್ಯಕ್ಕಾಗಿ ಇಂಗ್ಲೆಂಡ್-ಭಾರತ ತಂಡಗಳು ಎದುರುಬದುರಾಗಿದ್ದವು. ಇಂದೂ ಅದೇ ರೀತಿಯ ಆದರೆ ಇಲ್ಲಿ ಟೆನಿಸ್ ಸ್ಟಾರ್ ಗಳು ಮಾತ್ರ ಒಂದೇ ದಿನ ಪಂದ್ಯವನ್ನಾಡಲಿದ್ದಾರಷ್ಟೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications