
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್‌ನ ವಿಶ್ವ ಕ್ರಿಕೆಟ್‌ನ ದಂತಕಥೆ, 1989 ರಲ್ಲಿ ಪಾಕಿಸ್ತಾನದ ವಿರುದ್ಧ ಸಚಿನ್ ತಮ್ಮ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅಂದು ಚೊಚ್ಚಲ ಇನ್ನಿಂಗ್ಸ್‌ನಲ್ಲಿ ತೆಂಡೂಲ್ಕರ್ ಶೂನ್ಯಕ್ಕೆ ಔಟಾದರು. ಮಳೆಯಿಂದಾಗಿ 16 ಓವರ್‌ಗಳಿಗೆ ಕಡಿತಗೊಂಡಿದ್ದ ಪಂದ್ಯದಲ್ಲಿ ಸಚಿನ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದರು. ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ಸಚಿನ್ ಔಟಾದರು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳು, ರನ್ ಮತ್ತು ಶತಕಗಳ ದಾಖಲೆಯನ್ನು ಹೊಂದಿರುವ ತೆಂಡೂಲ್ಕರ್ ಚೊಚ್ಚಲ ಪಂದ್ಯದಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು.

ಎಂ.ಎಸ್ ಧೋನಿ
ಎಂಎಸ್ ಧೋನಿ ಭಾರತದ ದಿಗ್ಗಜ ನಾಯಕ. ಮೂರು ಐಸಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ವಿಶ್ವದ ಏಕೈಕ ಕ್ಯಾಪ್ಟನ್ ಆಗಿರುವ ಧೋನಿ, ಫಿನಿಶರ್ ಮತ್ತು ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ವಿಶ್ವ ಕ್ರಿಕೆಟ್‌ನ ದಂತಕಥೆಗಳಲ್ಲಿ ಒಬ್ಬರಾಗಿ ಧೋನಿ ನಿವೃತ್ತಿ ಘೋಷಿಸಿದ್ದಾರೆ. ಆದರೆ ಧೋನಿ ವೃತ್ತಿಜೀವನದ ಆರಂಭ ಕೆಟ್ಟದಾಗಿತ್ತು. ಮೊದಲ ಪಂದ್ಯದಲ್ಲಿ ಅವರು ಡಕೌಟ್ ಆಗಿ ಪೆವಿಲಿಯನ್ ಸೇರಿಕೊಂಡಿದ್ದರು. 2004 ರಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ, ಧೋನಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ್ರು, ಖಾತೆ ತೆರೆಯುವ ಮುನ್ನವೇ ಧೋನಿ ರನ್ ಔಟ್ ಆದರು.
ಭಾರತ vs ಶ್ರೀಲಂಕಾ ಟೆಸ್ಟ್ ಸರಣಿ: ಹೆಡ್ ಟು ಹೆಡ್ ರೆಕಾರ್ಡ್

ಸುರೇಶ್ ರೈನಾ
ಸುರೇಶ್ ರೈನಾ ಭಾರತದ ಪ್ರಮುಖ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದು, ಮಹೇಂದ್ರ ಸಿಂಗ್ ಧೋನಿಯೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಎಡಗೈ ಬ್ಯಾಟಿಂಗ್‌ನೊಂದಿಗೆ ಮ್ಯಾಚ್ ಇನ್ನಿಂಗ್ಸ್ ಆಡಿದ ರೈನಾ ಭಾರತಕ್ಕೆ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ.
ಮಿಡ್‌ಫೀಲ್ಡ್ ಮತ್ತು ಅಗ್ರ ಕ್ರಮಾಂಕದಲ್ಲಿ ಮಿಂಚಿದ್ದ ರೈನಾ ಫೀಳ್ಡಿಂಗ್‌ನಲ್ಲಿ ಕೂಡ ತಂಡಕ್ಕೆ ನೆರವಾದರು. ರೈನಾ ಭಾರತ ಕಂಡಂತಹ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರು. ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರೈನಾ, ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದರು. ಆದ್ರೆ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಬೌಲಿಂಗ್ ಅರಿಯದೆ ಕ್ಯಾಚ್ ನೀಡಿದರು. 2020 ರ ಆಗಸ್ಟ್ 15 ರಂದು ಎಂಎಸ್ ಧೋನಿ ನಿವೃತ್ತರಾದಾಗ ರೈನಾ ಕೂಡ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದರು.
ICC T20 Ranking: ಟಾಪ್ 10ನಿಂದ ಹೊರಬಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ

ಶಿಖರ್ ಧವನ್
ಈಗಲೂ ಭಾರತದ ಏಕದಿನ ತಂಡದಲ್ಲಿ ನಿರ್ಣಾಯಕ ಸ್ಥಾನವನ್ನು ಹೊಂದಿರುವ ಶಿಖರ್ ಧವನ್ ಟೆಸ್ಟ್ ಕ್ರಿಕೆಟ್ ಚೊಚ್ಚಲ ಪಂದ್ಯದಲ್ಲೇ ದಾಖಲೆಯನ್ನ ಬರೆದ ಕ್ರಿಕೆಟರ್. ಆದ್ರೆ ಗಬ್ಬರ್ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲರಾದರು. 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಧವನ್ ಭಾರತೀಯ ತಂಡಕ್ಕೆ ಸೇರ್ಪಡೆಗೊಂಡರು. ಆದ್ರೆ ಆರಂಭಿಕ ಪಂದ್ಯದಲ್ಲೇ ಧವನ್ ಡಕೌಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು.

ಕೇನ್ ವಿಲಿಯಮ್ಸನ್
ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಫ್ಯಾಬುಲಸ್ ಫೋರ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಎಲ್ಲಾ ಮೂರು ಫಾರ್ಮ್ಯಾಟ್‌ಗಳಲ್ಲಿ ಮಿಂಚಿದ ವಿಲಿಯಮ್ಸನ್, ತಮ್ಮ ಏಕದಿನ ವೃತ್ತಿಜೀವನವನ್ನು ಡಕೌಟ್ ಮೂಲಕ ಪ್ರಾರಂಭಿಸಿದರು. 2010ರ ಭಾರತ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವಿಲಿಯಮ್ಸನ್, ಪ್ರವೀಣ್ ಕುಮಾರ್ ಎಸೆತದಲ್ಲಿ ಬೌಲ್ಡ್ ಆಗಿದ್ದರು. ಆದ್ರೆ ಇಂದು ವಿಲಿಯಮ್ಸನ್ ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದು, ನಾಯಕನಾಗಿಯೂ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ.


Click it and Unblock the Notifications












